ಕೆಪಿಸಿಸಿ ಓಬಿಸಿ ಘಟಕದ ಅಧ್ಯಕ್ಷರಾಗಿ (KPCC OBC Department President) ಮಧು ಬಂಗಾರಪ್ಪ (Madhu Bangarappa) ಅವರನ್ನು ನೇಮಿಸಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ಅಧಿಕೃತ ಆದೇಶ ಹೊರಡಿಸಿದೆ.
ಕೆಪಿಸಿಸಿ ಐಟಿ ಸೆಲ್ ಅಧ್ಯಕ್ಷರಾಗಿ ರಘುನಂದನ್ ರಾಮಣ್ಣ (Raghunandan Ramanna) ಅವರನ್ನು ನೇಮಿಸಿ ಎಐಸಿಸಿ ಆದೇಶಿಸಿದೆ.

ಸೊರಬ ಕ್ಷೇತ್ರದ ಮಾಜಿ ಜೆಡಿಎಸ್ ಶಾಸಕರಾಗಿದ್ದ ಮಧು ಬಂಗಾರಪ್ಪ ಜೆಡಿಎಸ್ ತೊರೆದು ಕಳೆದ 2021 ಜುಲೈನಲ್ಲಿ ಕಾಂಗ್ರೆಸ್ (Congress) ಸೇರಿದ್ದರು.