ದೇಶದ ತೈಲ ಕಂಪನಿಗಳು ವಾಣಿಜ್ಯ ಸಿಲಿಂಡರ್ ಗಳ ಬೆಲೆಯನ್ನು ಕಡಿಮೆ ಮಾಡುವ ಮೂಲಕ ಜನತೆಗೆ ಗಣೇಶ ಹಬ್ಬಕ್ಕೆ ಕೊಂಚ ಸಿಹಿಸುದ್ದಿ ಸಿಕ್ಕಿದೆ. ಇಂಡಿಯನ್ ಆಯಿಲ್ ಸೆಪ್ಟೆಂಬರ್ 1 ರಂದು ಬಿಡುಗಡೆ ಮಾಡಿದ ಬೆಲೆಗಳ ಪ್ರಕಾರ. 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 91.5 ರೂ. ಇಳಿಸಲಾಗಿದೆ. ಬೆಲೆ ನವೀಕರಣದ ನಂತರ ರಾಷ್ಟ್ರ ರಾಜಧಾನಿಯಲ್ಲಿ ವಾಣಿಜ್ಯ ಸಿಲಿಂಡರ್ 1,885 ರೂ. ಆಗಿದೆ. ಈ ಮೊದಲು ಇದರ ಬೆಲೆ 1976.50 ರೂ. ಇತ್ತು.
ಮೇ ತಿಂಗಳಲ್ಲಿ ಇದು 2,354 ರೂ.ಗಳ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿತ್ತು. ತದನಂತ ಕ್ರಮೇಣ ಕಡಿಮೆಯಾಗುತ್ತಿದೆ. ವಾಣಿಜ್ಯ ಸಿಲಿಂಡರ್ ಬೆಲೆ ಇಳಿಕೆಯಾಗುತ್ತಿರುವುದು ಇದು ಸತತ ಐದನೇ ಬಾರಿ.