ಕೃಷ್ಣನ್ ಲವ್ ಸ್ಟೋರಿ ಖ್ಯಾತಿಯ ಶಶಾಂಕ್ ನಿರ್ದೇಶನದ ಜೊತೆಗೆ ನಿರ್ಮಾಣ ಮಾಡಿರುವ ಬಹು ನಿರೀಕ್ಷಿತ ಚಿತ್ರ ಲವ್ 360 ಟ್ರೇಲರ್ ಅನ್ನು ಕರುನಾಡ ಚಕ್ರವರ್ತಿ ಡಾ.ಶಿವರಾಜ್‌ಕುಮಾರ್ ಬಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಇನ್ನು ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಶಿವಣ್ಣ ಶಶಾಂಕ್ ನನ್ನ ಅಚ್ಚುಮೆಚ್ಚಿನ ನಿರ್ದೇಶಕ ನಾನು ಅವರ ನಿರ್ದೇಶನದ ಚಿತ್ರಗಳಲ್ಲಿ ನಟಿಸಬೇಕಿತ್ತು. ಆದರೆ, ಕಾರಣಾಂತರಗಳಿಂದ ಅದು ಆಗಿಲ್ಲ ಮುಂದಿನ ದಿನಗಳಲ್ಲಿ ನಮ್ಮಿಬ್ಬರ ಕಾಂಬಿನೇ಼ನ್ನಲ್ಲಿ ಚಿತ್ರ ಬರುತ್ತದೆ ಎಂದಿದ್ದಾರೆ.
ಅರ್ಜುನ್ ಜನ್ಯ ಸಂಗೀತ ನೀಡುರವ ಹಾಡುಗಳು ಮುದ ನೀಡುತ್ತವೆ ಸಿದ್ ಶ್ರೀರಾಮ್ ಹಾಡಿರುವ ಜಗವೇ ನೀನು ಗೆಳತಿಯೇ ನನ್ನ ಅಚ್ಚುಮೆಚ್ಚಿನ ಹಾಡು ನಾಯಕ, ನಾಯಕಿ ಎಲ್ಲರು ಚೆನ್ನಾಗಿ ನಟಿಸಿದ್ದಾರೆ ಎಂದು ಚಿತ್ರ ತಂಡದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ನಮ್ಮ #Love360 ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದಕ್ಕೆ ಹೃದಯಪೂರ್ವಕ ನಮನಗಳು ಅಣ್ಣ.. @NimmaShivanna @ArjunJanyaMusic @aanandaaudio @Rachana_Inder #ShashankCinemass pic.twitter.com/wZXadS2MMu
— Shashank (@Shashank_dir) August 3, 2022
ನಿರ್ದೇಶಕ ಶಶಾಂಕ್ ಮಾತನಾಡಿ ಇದೇ ಆಗಷ್ಟ್ 19ರಂದು ನಮ್ಮ ಚಿತ್ರ ರಾಜ್ಯದ್ಯಂತ 150ಕ್ಕು ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ KRG ಸ್ಟೂಡಿಯೋಸ್ ಸಂಸ್ಥೆಯವರು ನಮ್ಮ ಚಿತ್ರದ ವಿತರಣೆಯ ಜವಬ್ದಾರಿಯನ್ನು ಹೊತ್ತಿದ್ದಾರೆ ಎಂದು ಹೇಳಿದ್ದಾರೆ.
ಹೊಸ ಪ್ರತಿಭೆ ಪ್ರವೀಣ್ಗೆ ಜೋಡಿಯಾಗಿ ಲವ್ ಮಾಕ್ಟೇಲ್ ಖ್ಯಾತಿಯ ರಚನಾ ಇಂದರ್ ಜೊತೆಯಾಗಿದ್ದಾರೆ. ಶಶಾಂಕ್ ನಿರ್ದೇಶನದ ಜೊತೆಗೆ ನಿರ್ಮಾಣದ ಜವಬ್ದಾರಿಯನ್ನು ಹೊತ್ತಿದ್ದು ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ.