ಬೆಂಗಳೂರು:ಕೋಡಿಗೆಹಳ್ಳಿಯ ಸಮೀಪ ಮಂಗಳವಾರ ಮುಂಜಾನೆ ಕುರಿಗಳ ಮೇಲೆ ಚಿರತೆ (leopard)ಭೀಕರ ದಾಳಿ (attack)ನಡೆಸಿದ್ದು ಬರೋಬ್ಬರಿ 23 (sheep Died) ಕುರಿಗಳು ಸಾವನ್ನಪ್ಪಿದ್ದು, ಮೂರು ಕುರಿಗಳಿಗೆ( Three sheep died)ಗಾಯವಾಗಿದ್ದರೆ, ಇನ್ನೂ ನಾಲ್ಕು ಕುರಿಗಳನ್ನು ಚಿರತೆ ಹೊತ್ತೊಯ್ದಿದೆ ಎಂದು ಗುರಿಗಾಗಿ ಕಣ್ಣೀರು ಹಾಕಿದ್ದಾರೆ.
ಕೋಡಿಗೆಹಳ್ಳಿಯ ಪುರವರ ಹೋಬಳಿಯ ದೊಡ್ಡ ಹೊಸ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಕುರಿಗಾಹಿ ಮಲ್ಲಣ್ಣ ಎಂಬುವರು ತಮ್ಮ ಕುರಿ ಕೊಪ್ಪದಲ್ಲಿ 30ಕ್ಕೂ ಅಧಿಕ ಕುರಿಗಳನ್ನು ಸಾಕಿದ್ದರು.ಈ ಕುರಿ ಕೊಪ್ಪಕ್ಕೆ ಅಳವಡಿಸಿದ್ದ ಮೆಸ್ ಕಿತ್ತು ಮುಂಜಾನೆ ಒಳನುಗ್ಗಿರುವ ಚಿರತೆ ಈ ರೀತಿ 23 ಕುರಿಗಳನ್ನು ಕೊಂದು ಹಾಕಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಲಯ ಅರಣ್ಯಾಧಿಕಾರಿ ಹೆಚ್.ಎಂ.ಸುರೇಶ್ ಮಾತನಾಡಿ, ಚಿರತೆ ದಾಳಿಯಿಂದ ಸಾವನ್ನಪ್ಪಿದ ಪ್ರತಿ ಕುರಿಗೆ ಸರ್ಕಾರದಿಂದ ತಲಾ 5 ಸಾವಿರ ಪರಿಹಾರ ಒದಗಿಸಲು ಮನವಿ ಮಾಡಲಾಗುವುದು ಮತ್ತು ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.