ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಜಾಮೀನು ಅರ್ಜಿ ನಿರಂತರವಾಗಿ ನಡೆಯುತ್ತಿದ್ದು, ದರ್ಶನ್ ಪರ ಹಿರಿಯ ವಕೀಲ ಸಿವಿ ನಾಗೇಶ್ ವಾದ ಮಂಡಿಸುತ್ತಿದ್ದಾರೆ. 2ನೇ ಆರೊಪಿ ದರ್ಶನ್ ಪರ ವಾದ ಮಂಡಿಸ್ತಿದ್ದು, ಚಾರ್ಜ್ ಶೀಟ್ನಲ್ಲಿ 13 ಜನರ ಬಟ್ಟೆಯಲ್ಲಿ ಕಲೆಗಳು ಪತ್ತೆಯಾಗಿದೆ ಅಂತಾರೆ. ಪವನ್ ನಮ್ಮ ಮನೆ ಕೆಲಸಗಾರ, A11 ನಮ್ಮ ಮ್ಯಾನೇಜರ್. A1 ಮಹಿಳೆ ದರ್ಶನ್ ಫ್ರೆಂಡ್ ಎಂದಿದ್ದಾರೆ.
ಪ್ರಾಸಿಕ್ಯೂಶನ್ನಲ್ಲಿ 1 ನಂಬರ್ನಲ್ಲಿ ಇಷ್ಟು ಜನರಿಗೆ ಕರೆ ಹೋಗಿದೆ ಅಂತಾ ಸಿಡಿಆರ್ ರಿಪೋರ್ಟ್ ತೆಗೆದು ಉಲ್ಲೇಖ ಮಾಡಿದ್ದಾರೆ. 300, 400, 100 ಕರೆಗಳು ಹೋಗಿವೆ ಅಂತಾ ಹೇಳಿದ್ದಾರೆ. ವಾಟ್ಸಪ್ ಕರೆಗಳು ಕೂಡ ಹೋಗಿದೆ. ಅವರೆಲ್ಲಾ ಸ್ನೇಹಿತರು, ಮ್ಯಾನೇಜರ್, ಕೆಲಸಗಾರ ನಡುವಿನ ಸಂಭಾಷಣೆ. ತಾಂತ್ರಿಕ ಸಾಕ್ಷ್ಯಗಳ ಬಗ್ಗೆ ಸಿ ವಿ ನಾಗೇಶ್ ವಾದಿಸುತ್ತಿದ್ದಾರೆ. ಸಿಸಿಟಿವಿಯಲ್ಲಿ ಶೆಡ್ಗೆ ಹೋಗಿರುವುದು ಬಿಟ್ಟು ಬೇರೇನೂ ಇಲ್ಲ. ಮನೆಯಿಂದ ಹೊರಗೆ ಹೋಗಿದ್ದಾರೆ. ಅದನ್ನೆ ಎವಿಡೆನ್ಸ್ ಅಂತಾ ಹೇಳಿದ್ದಾರೆ ಅಂತಾ ವಾದಿಸಿದ್ದಾರೆ.
ಸ್ಟೋನಿ ಬ್ರೂಕ್ ರೆಸ್ಟೋರೆಂಟ್ನಲ್ಲಿ ಊಟಕ್ಕೆ ಕರೆಯಲಾಗಿತ್ತು. ಹೀಗಾಗಿ ಮಧ್ಯಾಹ್ನ 2.30ಕ್ಕೆ ಚಿಕ್ಕಣ್ಣ ಊಟಕ್ಕೆ ಹೋಗಿದ್ದ ನಾನು ನನ್ನ ಸಿನಿಮಾ ಬಗ್ಗೆ ಮಾತನಾಡುತ್ತಿದ್ದೆ ಎಂದಿದ್ದಾರೆ ಚಿಕ್ಕಣ್ಣ. ಆಗ ಪವನ್ ಬಂದು ಕಿವಿಯಲ್ಲಿ ಏನೋ ಹೇಳುತ್ತಿದ್ದ. ನಂತರ ಚಿಕ್ಕಣ್ಣ ನೀನು ಹೊರಡು ನನಗೆ ಸ್ವಲ್ಪ ಕೆಲಸ ಇದೆ ಅಂದ್ರು ಅಂತಾ 164 ಹೇಳಿಕೆಯಲ್ಲಿ ದಾಖಲು ಮಾಡಲಾಗಿದೆ. ಪವನ್ ಏನು ಮಾತಾನಾಡಿದ ಅನ್ನೋದು ನನಗೆ ಗೊತ್ತಿಲ್ಲ. ನಂತರ ನಾವು ಸಿನಿಮಾ ಬಗ್ಗೆ ಮಾತನಾಡಿ ಕುಳಿತೆವು. ಸಂಜೆ 4 ರಿಂದ 4.30 ರವರೆಗೆ ನಾವು ಊಟ ಮಾಡಿ ಕುಳಿತೆವು. ಆ ಬಳಿಕ ದರ್ಶನ್ ಸರ್ ಕೆಲಸ ಇದೆ ಅಂತಾ ಹೊರಟರು ಎಂದಿದ್ದಾರೆ.
ಮೊದಲ ವಿಟ್ನೆಸ್ ನರೇಂದ್ರ ಸಿಂಗ್ ಬಗ್ಗೆ ಸಿವಿ ನಾಗೇಶ್ ವಾದ ಮಂಡಿಸಿದ್ದು, ಆತ ವಾಚ್ ಮ್ಯಾನ್. ಶೆಡ್ ನ ಎಂಟ್ರಿ ಪಾಯಿಂಟ್ನಲ್ಲಿ ಇರ್ತಾರೆ. ಅವರ ಹೇಳಿಕೆ ದಾಖಲಾಗಿದೆ. ಆತ ಜೂನ್ 8 ರಂದು ಹಾಗು ಜೂನ್ 9 ರಂದು ಇದ್ದ ಎಂದು ಜೂನ್ 13 ರಂದು ಹೇಳಿಕೆ ದಾಖಲಿಸಿದ್ದಾರೆ. ಈತ ಹೇಳಿರೋದು ತಪ್ಪು. ಕಾರು ಬಂತು, ಬಿಳಿ ಕಾರು ಹೊಯ್ತು ಅಂದಿದ್ದಾನೆ. ಇಷ್ಟೇ ಹೇಳಿರೋದು. ಪೊಲೀಸರು ಈತನ ಹೇಳಿಕೆ ಪಡೆಯುವಲ್ಲಿ ತಡ ಮಾಡಿದ್ದಾರೆ. ಪೊಲೀಸರು ಮಂಗಳವಾರ ಬಂದು ಗೇಟ್ ಬೀಗ ಹಾಕಿದ್ದಾರೆ. ಬೀಗ ಹಾಕಿ ನನನ್ನು ಮನೆಗೆ ಕಳಿಸಿದ್ದಾರೆ ಅಂತಾ ಹೇಳಿದ್ದಾನೆ. ಇದರಲ್ಲಿ ದರ್ಶನ್ ಬಗ್ಗೆ ಏನೂ ಹೇಳಿಲ್ಲ ಎಂದಿದ್ದಾರೆ.
ಮತ್ತೊಬ್ಬ ಪ್ರತ್ಯಕ್ಷದರ್ಶಿ ಹೇಳಿಕೆ ಉಲ್ಲೇಖಿಸಿ ವಾದ ಮಂಡಿಸಿರುವ ಸಿವಿ ನಾಗೇಶ್, ನಾನು ಮರುದಿನ ಕೆಲಸಕ್ಕೆ ಬಂದಾಗ ಕೊಲೆ ಆಗಿರುವ ವಿಷಯ ತಿಳಿಯಿತು ಎಂದಿದ್ದಾನೆ. ಆತನ ಹೇಳಿಕೆಯನ್ನ ಜೂನ್ 15 ರಂದು 164 ಹೇಳಿಕೆ ದಾಖಲಿಸಿದ್ದಾರೆ. ಹೀಗೆ ಈತ ಹೇಳಿಕೆ ಕೊಟ್ಟಿರುವುದು ಐ ವಿಟ್ನೆಸ್ ಆಗುತ್ತಾ..? ಎಂದಿದ್ದಾರೆ. ಮತ್ತೊಬ್ಬ ಸಾಕ್ಷಿ ಹೇಳಿಕೆ ಉಲ್ಲೇಖ ಮಾಡಿದ್ದು, ನಾನು ಎಂಟು ವರ್ಷಗಳಿಂದ ಪಟ್ಟಣಗೆರೆ ಜಯಣ್ಣ ಶೆಡ್ ನಲ್ಲಿ ಕೆಲಸ ಮಾಡುತ್ತಿದ್ದೇನೆ. ಜೂನ್ 8 ರಂದು ಇಟಿಯೋ ಕಾರು ಬಂತು. ಅದರಲ್ಲಿ ನಾಲ್ಕೈದು ಜನ ಇದ್ರು. ನಂತರ ಇನ್ನೊಂದು ಕಾರು ಬಂತು ಅದರಲ್ಲಿ ಮೂರ್ನಾಲ್ಕು ಜನ ಇದ್ರು. ನಂತರ ನಾಲ್ಕು ಗಂಟೆ ಪವನ್ ಇತರರು ಬರ್ತಾರೆ. ಆ ಬಳಿಕ ದಿನಾಂಕ 11 ರಂದು ಶೆಡ್ ನಲ್ಲಿ ರೇಣುಕಾಸ್ವಾಮಿ ಕೊಲೆಯಾಗಿದೆ ಅಂತಾ ಮೊಬೈಲ್ ನ್ಯೂಸ್ ನಲ್ಲಿ ನೋಡಿದೆ ಅಂದಿದ್ದಾರೆ. ಇದು ಪೊಲೀಸರು ಮಾಡುವ ಕಾರ್ಯ ವೈಖರಿ. ಶೆಡ್ನಲ್ಲಿ ಕೆಲಸ ಮಾಡುವ ಸಾಕ್ಷ್ಯಗಳ ಹೇಳಿಕೆ ಬಗ್ಗೆ ನಾಗೇಶ್ ವಾದ ಮಂಡಿಸಿದ್ದಾರೆ.