ರಾಜ್ಯ ರಾಜಕಾರಣದಲ್ಲಿ ಮೀಸಲಾತಿ ಪಾಲಿಟಿಕ್ಸ್ ಹೆಚ್ಚು ಸದ್ದು ಮಾಡುತ್ತಿದ್ದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಮಾಜಿ ಸಚಿವ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಪಂಚಮಸಾಲಿಗೆ 2ಎ ಮೀಸಲಾತಿ ಕೊಡಬೇಕು ಎಂಬುದು ಅವರ ಅಪೇಕ್ಷೆಯಾಗಿತ್ತು 2ಎ ಗೆ ಸೇರಿಸಿದ್ರೇ 102 ಹಿಂದುಳಿದ ಜಾತಿಗೆ ಅನ್ಯಾಯವಾಗುತ್ತೆ ಎಂಬುದು ಎಲ್ಲರ ಅಭಿಪ್ರಾಯ . ಪಂಚಮಸಾಲಿಗೆ ಮೀಸಲಾತಿ ಕೊಡಲು ಸಾಕಷ್ಟು ಚರ್ಚೆ ಮಾಡಿ ಇದೀಗ ಕ್ರಮ ಕೈಗೊಳ್ಳಲಾಗಿದೆ ಒಕ್ಕಲಿಗರಿಗೆ 2ಸಿ, ಪಂಚಮಸಾಲಿಗೆ 2ಡಿ ಕೊಡಲು ಕ್ಯಾಬಿನೆಟ್ ನಲ್ಲಿ ತೀರ್ಮಾನ ಈಗಿರುವ ಮೀಸಲಾತಿಗೆ ಇನ್ನೆಷ್ಟು ಪರ್ಸೆಂಟೇಜ್ ಸೇರಿಸಬೇಕು ಎಂದು ಚರ್ಚೆ ಆಗ್ತಿದೆ ಎಂದು ಹೇಳಿದ್ದಾರೆ.
ಮೀಸಲಾತಿ ವಿಚಾರದಲ್ಲಿ ಇದು ಸರ್ಕಾರದ ಮೊದಲ ಹೆಜ್ಜೆ ಹಿಂದುಳಿದ ಜಾತಿಗಳಿಗೆ ಯಾವುದೇ ಕಾರಣಕ್ಕೂ ಅನ್ಯಾಯ ಆಗಬಾರದು ಪಂಚಮಸಾಲಿ ಮತ್ತು ಒಕ್ಕಲಿಗರಿಗೂ ಕೂಡ ನ್ಯಾಯ ಸಿಗಬೇಕು. ಸರ್ಕಾರದ ಮೊದಲ ಹೆಜ್ಜೆಯನ್ನು ಎಲ್ಲರೂ ಕೂಡ ಸ್ವಾಗತಿಸಿದ್ದಾರೆ ಕುಮಾರಸ್ವಾಮಿ ಯಾಕೆ ಸ್ವಾಗತ ಮಾಡುತ್ತಿಲ್ಲವೋ ನನಗಂತೂ ಗೊತ್ತಿಲ್ಲ ಎಂದು ಆಶ್ವರ್ಯಪಟ್ಟಿದ್ದಾರೆ.

ಪಂಚಮಸಾಲಿ ಸಮುದಾಯ ಕೂಡ ವಿರೋಧ ಮಾಡಿಲ್ಲ ಜೊತೆಗೆ ಸಂಭ್ರಮವನ್ನು ಪಟ್ಟಿಲ್ಲ ಮೀಸಲಾತಿ ಅಂತಿಮಗೊಂಡ ಬಳಿಕ ಅವರು ಸಂತೃಪ್ತಗೊಳ್ತಾರೆ. ಮೀಸಲಾತಿ ನೀಡಲು ಜೆಡಿಎಸ್- ಕಾಂಗ್ರೆಸ್ ಕೂಡ ನಮಗೆ ಸಹಕಾರ ನೀಡಬೇಕು ಕುಮಾರಸ್ವಾಮಿ, ಸಿದ್ದರಾಮಯ್ಯ ಎಲ್ಲರೂ ಸರ್ಕಾರಕ್ಕೆ ಸಲಹೆ ನೀಡಬೇಕು ಎಂದು ಹೇಳಿದ್ದಾರೆ.
ಇನ್ನು ಮೀಸಲಾತಿ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿ ಈಗ ತಾನೆ ಮದುವೆಯಾಗಿದೆ ಒಂದೇ ಸರಿ 10 ಮಕ್ಕಳು ಯಾಕಾಗಿಲ್ಲ ಅಂದ್ರೆ ಹೇಗೆ ಮೀಸಲಾತಿ ಬಗ್ಗೆ ಎಲ್ಲಾ ಪಕ್ಷಗಳು ವಿಧಾನಮಂಡಲದಲ್ಲಿ ತೀರ್ಮಾನ ತೆಗೆದುಕೊಂಡಿವೆ ಕೂಡಲೇ ಕೇಂದ್ರಕ್ಕೆ ಕಳುಹಿಸಿ ಶೆಡ್ಯೂಲ್ 9ಎ ನಲ್ಲಿ ಸೇರಿಸಬೇಕು ಯಾವುದೇ ಸರ್ಕಾರಿ ಯೋಜನೆ ಜಾರಿಗೆ ತರಬೇಕಾದರೆ ಕಾಲಾವಕಾಶ ಬೇಕು ಎಂದು ಡಿಕೆಶಿ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ.












