ನಿನ್ನೆ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂ ನಲ್ಲಿ ನಡೆದ ಐಪಿಎಲ್ (IPL 2025) ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ ಆರ್.ಸಿ.ಬಿ (RCB) ಗೆದ್ದು ಬೀಗಿದೆ. ಈ ಬೆನ್ನಲ್ಲೇ ಬಹು ನಿರೀಕ್ಷಿತ ವಿರಾಟ್ ಕೊಹ್ಲಿ (Virat kohli) ಸೆಲೆಬ್ರೇಶನ್ ಇಂಟರ್ನೆಟ್ ನಲ್ಲಿ ಗಮನ ಸೆಳೆಯುತ್ತಿದೆ.ಹೌದು ಬೆಂಗಳೂರಿನಲ್ಲಿ ರಾಯಲ್ ಚಾಲೆಂಜರ್ಸ್ ವಿರುದ್ಧ ಗೆದ್ದ ಮೇಲೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ ಕೆ.ಎಲ್.ರಾಹುಲ್ (KL Rahul) ಕಾಂತಾರ ಸ್ಟೈಲ್ ನಲ್ಲಿ (Kantara Style) ಸೆಲೆಬ್ರೇಟ್ ಮಾಡಿ ಗಮನ ಸೆಳೆದಿದ್ದರು.ಇದಕ್ಕೆ ಡೆಲ್ಲಿ ಹುಡುಗ ವಿರಾಟ್ ಕೊಹ್ಲಿ ರಿಪ್ಲೈ ಕೊಟ್ಟಿದ್ದಾರೆ.

ಹೀಗಾಗಿ ಪಂದ್ಯ ಗೆದ್ದ ಬಳಿಕ ಕೆ.ಎಲ್ ರಾಹುಲ್ ರನ್ನು ವಿರಾಟ್ ಕೊಹ್ಲಿ ಅಣಕಿಸಿದ್ದಾರೆ. ಹೌದು ಯಾವ ರೀತಿ ಕೆ.ಎಲ್. ರಾಹುಲ್ ಕಾಂತಾರಾ ಸಿನಿಮಾದ ದೃಶ್ಯದ ರೀತಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರೌಂಡ್ ಹಾಕಿ ಇದು ನನ್ನ ಊರು, ನನ್ನ ಸ್ಟೇಡಿಯಂ ಎಂದಿದ್ರು.. ಅದೇ ರೀತಿ ಈಗ ಡೆಲ್ಲಿ ಕ್ಯಾಪಿಟಲ್ಸ್ ಸೋಲಿಸಿದ ಬಳಿಕ ರಾಹುಲ್ ಎದುರು ರೌಂಡ್ ಹಾಕುವ ಆ್ಯಕ್ಟಿಂಗ್ ಮಾಡಿ ವಿರಾಟ್ ಕೊಹ್ಲಿ ಅಣಕಿಸಿದ್ದಾರೆ.

ನಿನ್ನೆ ರಾತ್ರಿ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ 162 ರನ್ ಟಾರ್ಗೆಟ್ ಅನ್ನು ಆರ್ಸಿಬಿ 18 ನೇ ಓವರ್ ನಲ್ಲಿಯೇ ಕಂಪ್ಲೀಟ್ ಮಾಡಿ ಗೆದ್ದು ಬೀಗಿದೆ. ಈ ವೇಳೆ ಕೊಹ್ಲಿ ಅರ್ಧ ಶತಕ ಸಿಡಿಸಿ ತಂಡಕ್ಕೆ ನೆರವಾಗಿದ್ದರು. ಹೀಗಾಗಿ ಡೆಲ್ಲಿಯನ್ನು ಸೋಲಿಸಿ ಮುಯ್ಯಿಗೆ ಮುಯ್ಯಿ ತೀರಿಸಿಕೊಂಡಿದ್ದಾರೆ ಕಿಂಗ್ ವಿರಾಟ್ ಕೊಹ್ಲಿ.