ಈ ಬಾರಿಯ ಹಬ್ಬದ ಸೀಸನ್ ನಲ್ಲಿ ನಿಮ್ಮ ಪ್ರೀತಿ ಪಾತ್ರರಿಗೆ ಖಾದಿ ಗ್ರಾಮೋದ್ಯೋಗದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಮಾತ್ರ ಉಡುಗೊರೆಯಾಗಿ ನೀಡಿ ರಾಷ್ಟ್ರದ ಬೆಳವಣಿಗೆಗೆ ಕಾರಣರಾಗಿ ಎಂದು ಹೇಳಿದ ಪ್ರಧಾನಿ ಮೋದಿ ಅವರನ್ನು ಟೀಕಿಸಿರುವ ರಾಹುಲ್ ಗಾಂಧಿ, ಪ್ರಧಾನಿಯವರ ಮಾತು ಮತ್ತು ಕಾರ್ಯಗಳು ಒಂದಕ್ಕೊಂದು ಎಂದಿಗೂ ಹೊಂದಾಣಿಕೆಯಾಗುವುದಿಲ್ಲ. ʻರಾಷ್ಟ್ರಕ್ಕಾಗಿ ಖಾದಿ ಆದರೆ ರಾಷ್ಟ್ರಧ್ವಜಕ್ಕೆ ಚೈನೀಸ್ ಪಾಲಿಸ್ಟರ್ ಎಂದಿದ್ದಾರೆ.
ಹೆಚ್ಚು ಓದಿದ ಸ್ಟೋರಿಗಳು
ನಿನ್ನೆ ಖಾದಿ ಅಭಿಯಾನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘ನಾನು ದೇಶದ ಜನರಲ್ಲಿ ಒಂದು ಮನವಿಯನ್ನು ಮಾಡಲು ಬಯಸುತ್ತೇನೆ. ಮುಂಬರುವ ಹಬ್ಬಗಳಲ್ಲಿ ಈ ಬಾರಿ ಖಾದಿ ಗ್ರಾಮೋದ್ಯೋಗದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಮಾತ್ರ ಉಡುಗೊರೆಯಾಗಿ ನೀಡಿ. ವಿವಿಧ ರೀತಿಯ ಬಟ್ಟೆಗಳಿಂದ ತಯಾರಿಸಿದ ಬಟ್ಟೆಗಳನ್ನು ನೀವು ಹೊಂದಬಹುದು. ಆದರೆ ನೀವು ಖಾದಿಗೆ ಸ್ಥಾನ ನೀಡಿದರೆ ಆಗ ‘ವೋಕಲ್ ಫಾರ್ ಲೋಕಲ್’ ಅಭಿಯಾನಕ್ಕೆ ವೇಗ ಸಿಗಲಿದೆ ಎಂದರು ಈ ಕುರಿತು ಟ್ವೀಟ್ ಮಾಡಿ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ರಾಷ್ಟ್ರಕ್ಕಾಗಿ ಖಾದಿ ಆದರೆ, ರಾಷ್ಟ್ರಧ್ವಜಕ್ಕೆ ಮಾತ್ರ ಚೈನೀಸ್ ಪಾಲಿಸ್ಟರ್!. ಎಂದಿನಂತೆ, ಪ್ರಧಾನಿಯವರ ಮಾತುಗಳು ಮತ್ತು ಕಾರ್ಯಗಳು ಎಂದಿಗೂ ಹೊಂದಿಕೆಯಾಗುವುದಿಲ್ಲ ಎಂದು ಟೀಕಿಸಿದ್ದಾರೆ.

ರಾಷ್ಟ್ರಧ್ವಜವನ್ನು ಕೈಯಿಂದ ನೇಯ್ದು ಅಥವಾ ಯಂತ್ರದಿಂದ ತಯಾರಿಸಲಾಗುತ್ತದೆ. ಹತ್ತಿ / ಪಾಲಿಸ್ಟರ್ / ಉಣ್ಣೆ / ರೇಷ್ಮೆ ಖಾದಿ ಬಂಟಿಂಗ್ನಿಂದ ಮಾಡಲು ಧ್ವಜ ಸಂಹಿತೆಗೆ ತಿದ್ದುಪಡಿ ತಂದಿರುವುದಕ್ಕೆ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಬಲವಾಗಿ ಟೀಕಿಸಿದೆ. ಈ ಮೊದಲು ಕಾಂಗ್ರೆಸ್ ಆಡಳಿತದಲ್ಲಿ ಈತರದ ನಿಯಮಗಳು ಇರಲಿಲ್ಲ.. ಖಾದಿ ಭಾವುಟವಷ್ಟೇ ಬಾನಂಗಳದಲ್ಲಿ ಹಾರಾಡಬೇಕಿತ್ತು.
‘Khadi for Nation’ but Chinese Polyester for National flag! 🇮🇳
— Rahul Gandhi (@RahulGandhi) August 28, 2022
As always, the words and actions of the PM never match.