ವಿದ್ಯುತ್ ವಿಚಾರದಲ್ಲಿ ಕರ್ನಾಟಕ ಸ್ವಾವಲಂಬನೆ ಸಾಧಿಸಿದೆ ಎಂದು ವರದಿ ಹೇಳಿದೆ. ಬಿಹಾರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಹಿಂದೆ ಬಿದ್ದಿವೆ ಎಂದು ಚಾಟಿ ಬೀಸಲಾಗಿದೆ.
ರಾಜ್ಯ ಹಾಗು ದೇಶದಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಜೊತೆಗೆ ವಿದ್ಯುತ್ electricity ಬೇಡಿಕೆಯು ಉತ್ತುಂಗಕ್ಕೇರುತ್ತಿದೆ. ಈ ಸಮಯದಲ್ಲಿ ಕರ್ನಾಟಕ Katnataka ಇಡೀ ಭಾರತದಲ್ಲಿ ಮೈಲಿಗಲ್ಲನ್ನು ಸಾಧಿಸಿದೆ. ಸಚಿವ ಕೆ.ಜೆ ಜಾರ್ಜ್ KJ George ನೇತೃತ್ವದಲ್ಲಿ ಇಂಧನ ಇಲಾಖೆ ಗಣನೀಯ ಸಾಧನೆ ಮಾಡಿದೆ ಅನ್ನೋದು ಅಂಕಿ ಅಂಶಗಳಿಂದ ಸಾಬೀತಾಗಿದೆ. ಅತಿಯಾದ ವಿದ್ಯುತ್ ಬೇಡಿಕೆ ನಡುವೆಯೂ ಕರ್ನಾಟಕವು ವಿದ್ಯುತ್ ಪರಿಸ್ಥಿತಿ ಅಸಾಧಾರಣ ಮಟ್ಟದಲ್ಲಿ ನಿರ್ವಹಣೆ ಮಾಡಲಾಗಿದೆ. ಅದರಲ್ಲೂ ಕರ್ನಾಟಕ ರಾಜ್ಯ ನವೀಕರಿಸಬಹುದಾಗ ಇಂಧನ (Clean Energy) ತಯಾರಿಕೆಯಲ್ಲಿ ದಾಪುಗಾಲು ಇಡುತ್ತಿದೆ ಎಂದು ಭಾರತೀಯ ರಾಜ್ಯಗಳ ವಿದ್ಯುತ್ ಪರಿವರ್ತನೆ (ಎಸ್‌ಇಟಿ), ಎನರ್ಜಿ ಎಕನಾಮಿಕ್ಸ್ ಮತ್ತು ಫೈನಾನ್ಶಿಯಲ್ ಅನಾಲಿಸಿಸ್ Institute for Energy Economics And Financial Analysis (IEEFA) ಸಂಸ್ಥೆ ತಿಳಿಸಿದೆ.

ಕರ್ನಾಟಕ ಮತ್ತು ಗುಜರಾತ್ Gujarath ಎರಡೂ ರಾಜ್ಯಗಳು ತಮ್ಮ ವಿದ್ಯುತ್ ಕ್ಷೇತ್ರಗಳಲ್ಲಿ ನವೀಕರಿಸಬಹುದಾದ ಇಂಧನವನ್ನು (Renewable Energy) ಪರಿಣಾಮಕಾರಿಯಾಗಿ ಜಾರಿ ಮಾಡಿವೆ ಎಂದು ಜಂಟಿ ವರದಿ ತಿಳಿಸಿದೆ. ಎರಡೂ ರಾಜ್ಯಗಳು ಡಿ-ಕಾರ್ಬನೈಸೇಶನ್‌ನಲ್ಲಿ ದೊಡ್ಡ ದಾಪುಗಾಲು ಇಟ್ಟಿವೆ ಆದರೆ ದೇಶದ ಇತರೆ ರಾಜ್ಯಗಳನ್ನು ನೋಡಿದಾಗ ಏಕರೂಪ ಕಾಣಿಸುತ್ತಿಲ್ಲ ಎಂದು ವರದಿ ತಿಳಿಸಿದೆ. ಜಾರ್ಖಂಡ್Jark, ಬಿಹಾರ Bihar, ಪಶ್ಚಿಮ ಬಂಗಾಳ West Bengal ಮತ್ತು ಉತ್ತರ ಪ್ರದೇಶ Uthar Pradesh ಈ ರಾಜ್ಯಗಳು ಇನ್ನು ಈ ವಿಚಾರದಲ್ಲಿ ಹಿಂದೆ ಬಿದ್ದಿದ್ದು, ನವೀಕರಿಸಬಹುದಾದ ಇಂಧನ ತಯಾರಿಕೆಯಲ್ಲಿ ಮೂಲಸೌಕರ್ಯಕ್ಕೆ ಹೂಡಿಕೆ ಹೆಚ್ಚಿಸಬೇಕಿದೆ. ಈ ಬಗ್ಗೆ ಜನಪ್ರತಿನಿಧಿಗಳು ಗಮನಹರಿಸಬೇಕಿದೆ ಎಂದು ವರದಿ ಎಚ್ಚರಿಸಿದೆ.

ಈ ವರದಿಯಲ್ಲಿ ತಜ್ಞರಾದ ವಿಭೂತಿ ಗಾರ್ಗ್ ಮತ್ತು ಆದಿತ್ಯ ಲೊಲ್ಲಾ ಅವರ ಅಭಿಪ್ರಾಯಗಳನ್ನು ತೆಗೆದುಕೊಂಡಿದ್ದು, ಭಾರತದ ಶಕ್ತಿ ಪರಿವರ್ತನೆಯಲ್ಲಿ ರಾಜ್ಯ ಮಟ್ಟದ ಮೌಲ್ಯಮಾಪನಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದಾರೆ. ಪ್ರತಿ ರಾಜ್ಯದ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಪರಿಶೀಲನೆ ಮಾಡಲು ಒತ್ತಾಯಿಸಿದ್ದಾರೆ. ದೆಹಲಿ ಮತ್ತು ಒಡಿಶಾ ಕೂಡ ಆಸಕ್ತಿ ತೋರಿಸುತ್ತಿದ್ದು, ಉಳಿದ ರಾಜ್ಯಗಳು ಹಿಂದುಳಿದಿವೆ. ಈ ಮಹತ್ವಾಕಾಂಕ್ಷೆಯ ಗುರಿಗಳನ್ನು ತಲುಪುವುದು ಮಾತ್ರವಲ್ಲದೆ, ಇದರ ಪರಿಣಾಮಕಾರಿ ಜಾರಿ ಮಾಡಬೇಕಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕೇರಳ, ಹರಿಯಾಣ, ಆಂಧ್ರಪ್ರದೇಶ, ಪಂಜಾಬ್ ಮತ್ತು ಮಹಾರಾಷ್ಟ್ರದಲ್ಲೂ ಅಡೆತಡೆಗಳನ್ನು ಎದುರಿಸುತ್ತಿವೆ. ಹೀಗಾಗಿ ಸೌರ ವಿದ್ಯುತ್ ತಯಾರಿಕೆಗೆ ಸಂಕಷ್ಟ ಎದುರಾಗಿದೆ. ಅಡೆತಡೆಗಳನ್ನು ಪರಿಹರಿಸುವ ಮತ್ತು ನವೀಕರಿಸಬಹುದಾದ ಇಂಧನ ಉತ್ಪಾದನೆಯನ್ನು ಉತ್ತೇಜಿಸುವ ಅಗತ್ಯವಿದೆ ಎಂದು ವರದಿ ತಿಳಿಸಿದೆ. ರಾಜ್ಯ ಮಟ್ಟದಲ್ಲಿ ಈ ಬಗ್ಗೆ ಸೂಕ್ತ ಅಧ್ಯಯನ ನಡೆಸಿ, ಹೆಚ್ಚಿನ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಯೋಜನೆ ಅನುಷ್ಠಾನದಲ್ಲಿ ಸಹಯೋಗಕ್ಕಾಗಿ ಮನವಿ ಮಾಡಲಾಗಿದೆ. ರಾಜ್ಯಗಳು ನವೀಕರಿಸಬಹುದಾದ ಇಂಧನ ತಯಾರಿಕೆಯಲ್ಲಿ ಸ್ವಾವಲಂಬಿಗಳಾದರೆ, ಭಾರತವು ಭವಿಷ್ಯದಲ್ಲಿ ಸುಸ್ಥಿರ ಇಂಧನದತ್ತ ವೇಗವನ್ನು ಪಡೆಯಬಹುದು ಎಂದು ವರದಿ ಅಭಿಪ್ರಾಯ ಪಟ್ಟಿದೆ.
