ರಿಷಭ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಚಿತ್ರ ಕಾಂತಾರ ಬಿಡುಗಡೆಗೂ ಮುನ್ನ ಹಾಗೂ ನಂತರ ಚಿತ್ರದಲ್ಲಿನ ವಿಶೇಷತಗಳಿಂದಾಗಿ ಹೆಚ್ಚು ಸದ್ದು ಮಾಡುತ್ತಿದೆ.
ಸೆಪ್ಟೆಂಬರ್ 30ರಂದು ಬಿಡುಗಡೆಯಾದ ಕಾಂತಾರ ಚಿತ್ರವು ಕರ್ನಾಟಕದಲ್ಲಿ ಅತಿ ಹೆಚ್ಚು ವೀಕ್ಷಣೆಯಾದ ಚಿತ್ರ ಎಂಬ ಹೆಗ್ಗಳಿಕೆಗೂ ಸಹ ಪಾತ್ರವಾಗಿದೆ.
putting an end to all the wait!!! 🤯#KantaraOnPrime, out tomorrow@hombalefilms @shetty_rishab @VKiragandur @gowda_sapthami @AJANEESHB @actorkishore pic.twitter.com/HBsEAGNRbU
— prime video IN (@PrimeVideoIN) November 23, 2022
ಮನುಷ್ಯ ಹಾಗೂ ಪ್ರಕೃತಿ ನಡುವಿನ ಸಂಘರ್ಷವನ್ನ ಅದ್ಭುತವಾಗಿ ಕಟ್ಟಿಕೊಡುವಲ್ಲಿ ನಿರ್ದೇಶಕ ರಿಷಭ್ ಶೆಟ್ಟಿ ಯಶ ಕಂಡಿದ್ದಾರೆ. ಚಿತ್ರ ಬಿಡುಗಡೆಯಾಗಿ 50+ ದಿನಗಳು ಹ ಚಿತ್ರದ ಬಗೆಗಿನ ಕ್ರೇಜ್ ಮಾತ್ರ ಇನ್ನು ಕಡಿಮೆಯಾಗಿಲ್ಲ.
ಇನ್ನು ಚಿತ್ರ ನವೆಂಬರ್ 24ರಂದು ಅಮೆಜಾನ್ ಪ್ರೈಮ್ OTTಯಲ್ಲಿ ಕನ್ನಡ ಅವತರಣಿಕೆಯ ಪ್ರೀಮಿಯರ್ ಸ್ಟ್ರೀಮಿಂಗ್ ನಡೆಯಲಿದೆ ಎಂದು ತಿಳಿದು ಬಂದಿದೆ. ಕಾಂತಾರ ಚಿತ್ರದಲ್ಲಿ ರಿಷಭ್‌ಗೆ ಜೋಡಿಯಾಗಿ ಸಪ್ತಮಿ ಗೌಡ ನಟಿಸಿದ್ದು ಇನ್ನುಳಿದಂತೆ ಕಿಶೋರ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಪ್ರಕಾಶ್ ತುಮ್ಮಿನಾಡ್ ತಾರಾಬಳಗದಲ್ಲಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು ಹೊಂಬಾಳೆ ಫಿಲಂಸ್ ಬಂಡವಾಳ ಹೂಡಿದೆ.