ಚಿಕ್ಕಮಗಳೂರು : ಒಡಿಶಾ ರೈಲು ದುರಂತದಿಂದ ಪಾರಾಗಿದ್ದ ಕನ್ನಡಿಗ ಯಾತ್ರೆ ಮುಗಿಸಿ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಸಾವನ್ನಪ್ಪಿದ ಘಟನೆಯೊಂದು ಬೆಳಕಿಗೆ ಬಂದಿದೆ.ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಧರ್ಮಪಾಲಯ್ಯ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
61 ವರ್ಷದ ಧರ್ಮಪಾಲಯ್ಯ ಸುಮೇಧ್ ಶಿಖರ್ಜಿಗೆ ತೆರಳಿ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಉತ್ತರ ಪ್ರದೇಶದ ಮಿರ್ಜಾಪುರ ರೈಲ್ವೆ ನಿಲ್ದಾಣದಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನಿಂದ ಸುಮೇದ್ ಯಾತ್ರೆಗೆ ತೆರಳಿದ್ದ 100 ಮಂದಿ ಯಾತ್ರಾರ್ಥಿಗಳಲ್ಲಿ ಧರ್ಮಪಾಲಯ್ಯ ಸಹ ಒಬ್ಬರಾಗಿದ್ದರು.
ಧರ್ಮಪಾಲಯ್ಯ ಮೃತದೇಹವನ್ನು ಮಿರ್ಜಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು ಮೃತದೇಹಕ್ಕಾಗಿ ಇತರೆ ಯಾತ್ರಾರ್ಥಿಗಳು ಕಾಯುತ್ತಿದ್ದಾರೆ ಎನ್ನಲಾಗಿದೆ.