ಕರ್ನಾಟಕ ರತ್ನ ದಿವಂಗತ ನಟ ಪುನೀತ್ ರಾಜ್ಕುಮಾರ್ ಅಭಿನಯದ ಕೊನೆ ಸಿನೆಮಾ ’ಜೇಮ್ಸ್’ ಅಪ್ಪು ಅವರ ಜನ್ಮದಿನದಂದು (ಮಾ.17) ತೆರೆಗೆ ಬರಲಿದೆ ಎನ್ನುವ ಮಾತುಗಳು ಸ್ಯಾಂಡಲ್ ವುಡ್ ನಲ್ಲಿ ಕೇಳಿಬರುತ್ತಿವೆ.
ʼಜೇಮ್ಸ್ʼ ಚಿತ್ರ ಕುರಿತು ಸಿನೆಮಾ ತಂಡ ಈವರೆಗೂ ಅಧಿಕೃತ ಮಾಹಿತಿ ತಿಳಿಸಿಲ್ಲ. ಜೇಮ್ಸ್ ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಅಪ್ಪು ಜನ್ಮದಿನದಂದೇ ಬಿಡುಗಡೆ ಮಾಡಲು ಸಿದ್ದತೆಗಳು ನಡೆಯುತ್ತವೆ ಎನ್ನಲಾಗಿದೆ.
ನಿರ್ದೇಶಕ ಚೇತನ್ಕುಮಾರ್ ಅಪ್ಪು ಅಭಿನಯದ ʼಜೇಮ್ಸ್ʼ ಸಿನೆಮಾವನ್ನು ನಿರ್ದೇಶಿಸಿದ್ದಾರೆ. ಒಟ್ಟು ₹ 80 ಕೋಟಿ ಬಜೆಟ್ ಚಿತ್ರ ಇದಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಅಪ್ಪು ನಿಧನ ಹೊಂದುವುದಕ್ಕೂ ಮುನ್ನವೇ ತಮ್ಮ ಪಾತ್ರದ ಚಿತ್ರೀಕರಣ ಪೂರ್ಣಗೊಳಿಸಿದ್ದರು. ಡಬ್ಬಿಂಗ್ ಮಾತ್ರ ಬಾಕಿ ಇತ್ತು.
ಮಾರ್ಚ್ 18 ರಂದು ತೆಲುಗಿನ ’ಆರ್ಆರ್ಆರ್’ ಚಿತ್ರ ಕೂಡ ಮಾರ್ಚ್ ತೆರೆಗೆ ಬರಲಿದೆ. ಅದರ ಹಿಂದಿನ ದಿನ ʼಜೇಮ್ಸ್ʼ ಬಿಡುಗಡೆಯಾಗಲಿದೆ. ಎರಡು ದೊಡ್ಡ ಚಿತ್ರಗಳು ಕ್ಲ್ಯಾಶ್ ಆಗುತ್ತಾ ಕಾದು ನೋಡಬೇಕು.