ಕಾಂಗ್ರೆಸ್ನಲ್ಲಿ (Congress) ಉಂಟಾಗಿರೋ ಸಿಎಂ (cm) ಬದಲಾವಣೆಯ ಚರ್ಚೆಯ ಬಗ್ಗೆ ಬಿಜೆಪಿ ಎಂಎಲ್ಸಿ ಸಿಟಿ ರವಿ (Bjp MLC CT ravi) ವ್ಯಂಗ್ಯವಾಡಿದ್ದಾರೆ.ಕಾಂಗ್ರೆಸ್ಗೆ (Congress) ಬಹುಮತ ಇದೆ ವಿಶ್ವಾಸ ಮತ ಇಲ್ಲ, ಜನರ ವಿಶ್ವಾಸವನ್ನೂ ಕಾಂಗ್ರೆಸ್ ಕಳೆದುಕೊಂಡಿದೆ ಅಂತ ಕಾಲೆಳೆದಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಬೆಲೆ ಏರಿಕೆ,ಹಣದುಬ್ಬರದಿಂದ ಜನ ತತ್ತರಿಸಿದ್ದಾರೆ. ಇದು ಎಕನಾಮಿಕ್ಸ್ (Economics) ಅಲ್ಲಾ ಇದು ಸಿದ್ರಾಮಿಕ್ಸ್ ಅಂತಾ ಸಿಟಿ ರವಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ. ಸರ್ಕಾರ ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವ ಬದಲು ಸಿಎಂ ಬದಲಾವಣೆ, ಡಿಸಿಎಂ (Dam) ಹುದ್ದೆ ಬಗ್ಗೆ ಚರ್ಚೆ ಮಾಡುತ್ತಿರುವುದು ವಿಪರ್ಯಾಸ ಎಂದು ಹೇಳಿದ್ದಾರೆ.
ಜಾತಿಗೊಂದು ಡಿಸಿಎಂ ಮಾಡಬೇಕು, ಅವರು ಸಿಎಂ ಆಗಬೇಕು ಇವರು ಸಿಎಂ ಆಗಬೇಕು ಅಂತ ಒಬ್ಬರಿಗೊಬ್ಬರು ದ್ವೇಷಕಾರುತ್ತಿದ್ದಾರೆ. ಇದೇನಾ ಇವರು ಸಂವಿಧಾನ ಪಾಲಿಸೋ ರೀತಿ ಅಂತಾ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.