ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ ಫೈಲ್ಸ್ ಚಿತ್ರವು ಕೀಳು ಅಭಿರುಚಿಯ ಚಿತ್ರ ಪ್ರಚಾರದ ಉದ್ದೇಶದಿಂದ ಈ ಚಿತ್ರವು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸ್ಪರ್ದಿಸಲು ಸೂಕ್ತವಾದ್ದುದಲ್ಲ ಎಂದು IIFI ಆಂತರಾಷ್ಟ್ರೀಯ ಸ್ಪರ್ಧೆ ವಿಭಾಗದ ಇಸ್ರೇಲ್ ಮೂಲದ ತೀರ್ಪುಗಾರರಾದ ನಾಡವ್ ಲ್ಯಾಪಿಡ್ ಹೇಳಿದ್ದಾರೆ.
ಗೋವಾದಲ್ಲಿ ಒಂಬತ್ತು ದಿನಗಳ ಕಾಲ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸೋಮವಾರ ಸಮಾರೋಪ ದಿನವಾಗಿದ್ದು ಲ್ಯಾಪಿಡ್ ಈ ಮಾತನ್ನು ಹೇಳುವ ಮೂಲಕ ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ ಮತ್ತು ಅವರ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.
ಕಾಶ್ಮೀರ ಫೈಲ್ಸ್ ಚಿತ್ರ ವೀಕ್ಷಣೆ ನಂತರ ಮಾತನಾಡಿದ ಲ್ಯಾಪಿಡ್ ಚಿತ್ರ ವೀಕ್ಷಿಸಿದ ನಂತರ ನಾವು ದಿಗ್ಬ್ರಮೆಗೊಂಡು ವಿಚಲಿತರಾದೆವು ಮತ್ತು ಇದು ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಕೀಳು ಅಭಿರುಚಿಯ ಸಿನಿಮಾ, ನಮಗಾದ ಅನುಭವವನ್ನು ನಿಮ್ಮ ಜೊತೆ ಹಂಚಿಕೊಳ್ಳಲು ಬಯಸುತ್ತೇವೆ ಎಂದು ಹೇಳಿದ್ದರು.
ಇನ್ನು ಲ್ಯಾಪಿಡ್ ಹೇಳಿಕೆಗೆ ತಿರುಗೇಟು ನೀಡಿರುವ ಬಾಲಿವುಡ್ ನಟ ಅನುಪಮ್ ಖೇರ್ ಮತ್ತು ನಿರ್ಧೇಶಕ ವಿವೇಕ್ ಅಗ್ನಿಹೋತ್ರಿ ಜೂರಿ ಪ್ಯಾನೆಲ್ ವಿರುದ್ದ ಕಿಡಿಕಾರಿದ್ದಾರೆ.
#WATCH | Anupam Kher speaks to ANI on Int'l Film Festival of India Jury Head remarks for 'Kashmir Files', "…If holocaust is right, the exodus of Kashmiri Pandits is right too. Seems pre-planned as immediately after that the toolkit gang became active. May God give him wisdom.." pic.twitter.com/cUQ1bqzFs7
— ANI (@ANI) November 29, 2022
Vivek Agnihotri takes indirect dig at IFFI Jury Head for his remark on 'The Kashmir Files'
— ANI Digital (@ani_digital) November 29, 2022
Read @ANI Story | https://t.co/1Tz4Q9gWld#VivekAgnihotri #IFFI #KashmirFiles #NadavLapid pic.twitter.com/7kg4MJ5fje