ಕೊಡಗು ಜಿಲ್ಲೆಯಲ್ಲಿ ಈ ತಿಂಗಳಾಂತ್ಯದವರೆಗೂ ಲಾಕ್‌ಡೌನ್‌ ಅವಶ್ಯಕತೆ ಇದೆಯೇ ?

ರಾಜ್ಯದಲ್ಲಿ ಲಾಕ್ ಡೌನ್ ಕೊನೆಯಾಗಲು 4 ದಿನಗಳು ಬಾಕಿಯಿದೆ. ಲಾಕ್ ಡೌನ್ ನಿಯಮ ಜಾರಿಗೆ ಬಂದು 1 ತಿಂಗಳಾಗಿದೆ. ಕೊಡಗಿನಲ್ಲಿ ಲಾಕ್ ಡೌನ್ ಜಾರಿಯಾಗಿ 37 ದಿನಗಳಾಗಿದೆ. ಶೇ. 5 ಪಾಸಿಟಿವಿಟಿ ದರ ಇದ್ದ ಜಿಲ್ಲೆಗಳಿಗೆ ಮಾತ್ರ ಜೂನ್ 14 ರ ನಂತರ ಲಾಕ್ ಡೌನ್ ವಿನಾಯಿತಿ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಖಡಕ್ ಆಗಿಯೇ ಹೇಳಿದ್ದಾರೆ. ಹಾಗಿದ್ದರೆ, ರಾಜ್ಯದ ಪುಟ್ಟ ಪ್ರವಾಸೀ ಜಿಲ್ಲೆ ಅನ್‌ಲಾಕ್‌ ಆಗಲಿದೆಯೇ ಎಂಬ ಪ್ರಶ್ಬೆ ಎಲ್ಲರ ಮನದಲ್ಲಿ ಮೂಡಿದೆ.

ಕೋರೋನಾ ಸೋಂಕು ವ್ಯಾಪಿಸುವಿಕೆ ತಡೆಗಟ್ಟಲು ಅಥವಾ ಕೋರೋನಾ ವೈರಸ್ ನ ಹರಡುವಿಕೆಯ ಸಂಪಕ೯ ಕೊಂಡಿಗೆ ಕಡಿವಾಣ ಹಾಕಲು ಲಾಕ್ ಡೌನ್ ಸಹಕಾರಿಯಾಗಿದೆ ಎಂದು ವೈಜ್ಞಾನಿಕ ಅಂಶಗಳ ತಳಹದಿಯಲ್ಲಿ ಸಕಾ೯ರ ಲಾಕ್ ಡೌನ್ ಸೂತ್ರವನ್ನೇ ಪರಿಣಾಮಕಾರಿಯಾಗಿ ಎಲ್ಲಾ ಜಿಲ್ಲೆಗಳಲ್ಲಿಯೂ ಜಾರಿಗೊಳಿಸಿತ್ತು. ಕೊಡಗು ಜಿಲ್ಲೆಯಲ್ಲಿ ಕಳೆದ 37 ದಿನಗಳ ಅಂಕಿಅಂಶಗಳನ್ನೇ ಗಮನಿಸುವುದಾದಲ್ಲಿ. ಮೇ 1 ರಂದು ಜಿಲ್ಲೆಯಲ್ಲಿ ಅತ್ಯಧಿಕ ಸಂಖ್ಯೆಯ 849 ಸೋಂಕು ಪ್ರಕರಣಗಳು ವರದಿಯಾಗಿದ್ದವು.  ಮೇ 8 ಕ್ಕೆ ಅಂದರೆ ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆಯಾದ ಸಂದಭ೯ ಜಿಲ್ಲೆಯಲ್ಲಿದ್ದ ಸೋಂಕು ಪ್ರಕರಣಗಳ ಸಂಖ್ಯೆ 686. ಅಂದು 886 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದರು. ಅಂದು ಜಿಲ್ಲೆಯಲ್ಲಿದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ – 5184. ಅಂದು ಸಾವನ್ನಪ್ಪಿದವರ ಸಂಖ್ಯೆ -12, ಜಿಲ್ಲೆಯಲ್ಲಿದ್ದ ಕಂಟೈನ್ಮೆಂಟ್ ವಲಯಗಳ ಸಂಖ್ಯೆ – 479.

ಅದೇ 1 ತಿಂಗಳ ನಂತರ ಅಂದರೆ ಜೂನ್ 7 ರ ಸಂಖ್ಯೆ ಗಮನಿಸುವುದಾದಲ್ಲಿ ಕೊಡಗಿನಲ್ಲಿ ವರದಿಯಾದ ಸೋಂಕು ಪ್ರಕರಣಗಳ ಸಂಖ್ಯೆ – 184 , ಗುಣಮುಖವಾದರು – 273 .ಮರಣ ಹೊಂದಿದವರು -4,   ಸಕ್ರಿಯ ಪ್ರಕರಣಗಳು – 2,043, ಪಾಸಿಟಿವಿಟಿ ದರ – 11.53. ಈ ಅಂಕಿಅಂಶ ನೋಡಿದರೆ, ಕೊಡಗಿನಲ್ಲಿ ಕೋರೋನಾ ಸಂಬಂಧಿತ ಗಂಟಲ ದ್ರವ ಪರೀಕ್ಷೆ ಕೈಗೊಂಡ 100 ಮಂದಿಯಲ್ಲಿ 12 ಮಂದಿಗೆ ಸೋಂಕು ಇರುವ ಅಂಶ ತಿಳಿದು ಬರುತ್ತಿದೆ. ಸಕಾ೯ರದ ಪ್ರಕಾರ ಈ ಸಂಖ್ಯೆ 5 ಕ್ಕೆ ಅಂದರೆ, 100 ಜನರ ಪರೀಕ್ಷೆ ಕೈಗೊಂಡಾಗ 5 ಮಂದಿಗೆ ಮಾತ್ರ ಸೋಂಕು ಇರಬೇಕು.  ಈ ಸಂಖ್ಯೆಯನ್ನು ಕೊಡಗು ಜಿಲ್ಲೆ ಇನ್ನೂ ತಲುಪಿಲ್ಲ. ಕೊಡಗಿನಲ್ಲಿ ಪಾಸಿಟಿವಿಟಿ ದರ ಇನ್ನೂ ಸುರಕ್ಷಿತ ಎನ್ನುವ ಪ್ರಮಾಣ ತಲುಪಿಲ್ಲ. ಮುಂದಿನ 6 ದಿನಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ. 5 ತಲುಪಿದರೆ ಮಾತ್ರ ಸುರಕ್ಷಿತ ಎಂಬ ಭಾವನೆಯಿಂದ ಜಿಲ್ಲೆಯನ್ನು ಅನ್ ಲಾಕ್ ಮಾಡಬಹುದಾಗಿದೆ. 

ಕಳೆದ ವಷ೯ಕ್ಕೆ ಹೋಲಿಸಿದ್ದಲ್ಲಿ ಕೋರೋನಾ ಎರಡನೇ ಅಲೆಯನ್ನು ಜನರೂ ಸೇರಿದಂತೆ ಸಕಾ೯ರ, ಆಡಳಿತ ನಿವ೯ಹಿಸಿದವರು ಎದುರಿಸಿದ ರೀತಿಯೇ ಅವೈಜ್ಞಾನಿಕವಾಗಿತ್ತು. ಮೊದಲ ವಷ೯ಕ್ಕಿಂತ ಎರಡನೇ ವಷ೯ದಲ್ಲಿ ಕೊರೋನಾ ಸೋಂಕು ಅತ್ಯಧಿಕ ಮಾರಣಾಂತಿಕವಾಗಿತ್ತಾದರೂ ಜನರು ತೀರಾ ನಿಲ೯ಕ್ಷ್ಯ ವಹಿಸಿದ್ದರು.  ಆರೋಗ್ಯಕ್ಕಿಂತ ವ್ಯಾಪಾರವೇ ಮುಖ್ಯವಾಗಿತ್ತು. ಕಳೆದ ವಷ೯ಗಳ ಕಠಿಣ ನಿಯಮಗಳನ್ನು ಜಾರಿಗೊಳಿಸಲು ಸಕಾ೯ರ ಸೂಕ್ತ ರೀತಿಯಲ್ಲಿ ಮುಂದಾಗಲಿಲ್ಲ.

ಕೊಡಗಿನಲ್ಲಿ ಈಗ ಮಳೆ ಪ್ರಾರಂಭವಾಗಿದೆ. ಮಳೆಯಲ್ಲಿ ಕೊಡೆಹಿಡಿದುಕೊಂಡು  ಎಷ್ಟರ ಮಟ್ಟಿಗೆ ಕಿಕ್ಕಿರಿದ ಸಂತೆ ಪ್ರದೇಶಗಳಲ್ಲಿ  ಜನರು ಸಾಮಾಜಿಕ ಅಂತರ ಪಾಲಿಸುತ್ತಾರೆ, ಪಾಲಿಸಲು ಸಾಧ್ಯವೇ  ಎಂಬುದನ್ನು ಯಾರೂ ಕೂಡ  ಊಹಿಸಬಹುದು.   ಹೀಗಿದ್ದರೂ, ಮಳೆಗಾಲದಲ್ಲಿ ಹೋಲಿಕೆಯಲ್ಲಿ ಕೊಡಗಿನಲ್ಲಿ ಜನಸಂಚಾರ ವಿರಳವಾಗಿರುವುದರಿಂದ ಒಂದು ರೀತಿಯಲ್ಲಿ ಸೋಂಕಿನ ವ್ಯಾಪಿಸುವಿಕೆಗೆ ಕಡಿವಾಣದ ಸಾಧ್ಯತೆ ಇಲ್ಲದಿಲ್ಲ. ಆದರೆ ಸಂತೆ ಪ್ರದೇಶಗಳಲ್ಲಿ ಜನ ದಟ್ಟಣೆಗೆ ಕಡಿವಾಣ ಹಾಕಲು ಸ್ಥಳೀಯ ಸಂಸ್ಥೆಗಳ ಆಡಳಿತ ಕೂಡಲೇ ಸೂಕ್ತ ಕಾಯ೯ಯೋಜನೆ ರೂಪಿಸುವ ಅತ್ಯಗತ್ಯವಿದೆ.-

ಈಗಾಗಲೇ ರಚಿತವಾಗಿರುವ ಟಾಸ್ಕ್ ಫೋಸ್೯ಗಳನ್ನು ಲಾಕ್ ಡೌನ್ ಮುಗಿದ ಬಳಿಕವೂ ಕಾಯ೯ಪ್ರವೖತ್ತವಾಗುವಂತೆ ನೋಡಿಕೊಳ್ಳಬೇಕು, ಮಡಿಕೇರಿಯಲ್ಲಿ ವಾಡ್೯ವಾರು ಟಾಸ್ಕ್ ಫೋಸ್೯ಗಳು, ಉಳಿದೆಡೆ ಗ್ರಾಮಪಂಚಾಯತ್ , ಪಟ್ಟಣ ಪಂಚಾಯತ್ ಮಟ್ಟದಲ್ಲಿನ ಕಾಯ೯ಪಡೆಗಳು ಮತ್ತಷ್ಟು ಬಿಗಿಯಾಗಿ ಕೋರೋನಾ ಸೋಂಕಿನ ತಡೆಗೆ ಶ್ರಮವಹಿಸುವ ಅತ್ಯಗತ್ಯ ಇದೆ.- ಲಾಕ್ ಡೌನ್ ಸಡಿಲಿಕೆ ಖಂಡಿತಾ  ಕನಾ೯ಟಕ ಅಥವಾ ಕೊಡಗು ಜಿಲ್ಲೆ ಕೋರೋನಾ ಮುಕ್ತ ಎಂದು ಭಾವಿಸಲು ಸಾಧ್ಯವೇ ಇಲ್ಲ. ಕೋರೋನಾ ಸೋಂಕಿಗೆ ಇನ್ನೂ ಔಷಧಿ ದೊರಕಿಲ್ಲ. ಲಸಿಕೆಗಳು ರೋಗನಿರೋಧಶ ಶಕ್ತಿ ವೖದ್ದಕವೇ ವಿನಾ ಕೋರೋನಾ ನಿಮೂ೯ಲನೆಯ ಮಂತ್ರವಲ್ಲ. ಹೀಗಾಗಿ, ಕೋರೋನಾ ಇನ್ನೂ ಕೆಲವಾರು ತಿಂಗಳು ಇರುತ್ತದೆ.  ಅನ್ ಲಾಕ್ ನಂತರ  ಕೊಡಗು ಜಿಲ್ಲೆಯಲ್ಲಿ ಅನುಸರಿಸಬೇಕಾದ ನಿಯಮಗಳನ್ನು ಕೂಡಲೇ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಸಭೆ ನಡೆಸಿ ತೀಮಾ೯ನಿಸಲು ಇದು ಸಕಾಲ. ಕೋಟೆ ಕೊಳ್ಳೆ ಹೋದ ಮೇಲೆ ಕೋಟೆ ಬಾಗಿಲು ಮುಚ್ಚುವುದಕ್ಕಿಂತ ಕೋಟೆಯ ಒಳಗಡೆ ಶತ್ರುಗಳನ್ನು ಬರದಂತೆ ತಡೆಯುವ ಮುನ್ನೆಚ್ಚರಿಕೆಯ ಕ್ರಮ ಮುಂದಿನ ಹಂತದಲ್ಲಿ ಅತ್ಯಗತ್ಯವಾಗಿ ಆಗಲೇ ಬೇಕಾಗಿದೆ.

ಕೊಡಗಿನ ಪಟ್ಟಣ, ನಗರ ಪ್ರದೇಶಗಳಲ್ಲಿ ಕೊರೊನ  ಸೋಂಕಿನ ನಿಯಂತ್ರಣ ಆದ್ಯತೆಯಲ್ಲಿ ಆಗಬೇಕಾಗಿದೆ.  ಇಲ್ಲದೇ ಹೋದಲ್ಲಿ ಮತ್ತೆ ಸೋಂಕು ಗ್ರಾಮೀಣ ಪ್ರದೇಶಗಳಿಗೆ ವ್ಯಾಪಿಸುವ ಎಲ್ಲಾ ಸಾಧ್ಯತೆಗಳಿದೆ.  ಲಾಕ್ ಡೌನ್ ತೆಗೆಯುತ್ತಿದ್ದಂತೆಯೇ ನಗರ ಪ್ರದೇಶಗಳಿಗೆ ಗ್ರಾಮೀಣ ಪ್ರದೇಶಗಳಿಂದ ಜನರು ಬಂದು ಖರೀದಿಗೆ ತೊಡಗುವುದರಿಂದ ಮತ್ತೆ ಗ್ರಾಮೀಣ ಪ್ರದೇಶಗಳಲ್ಲಿ ಸೋಕು ವ್ಯಾಪಿಸುವ ಅಪಾಯ ಇದೆ.  ನಗರ, ಪಟ್ಟಣ ಪ್ರದೇಶಗಳಲ್ಲಿ ಸೋಂಕು ನಿಯಂತ್ರಣ ಸದ್ಯದ ತುತು೯ ಕ್ರಮವಾಗಲೇಬೇಕು. ಸಚಿವರ ಸಮ್ಮುಖದಲ್ಲಿ ಶುಕ್ರವಾರ ನಡೆಯುವ ಸಭೆಯಲ್ಲಿ ಲಾಕ್ ಡೌನ್ ಮುಂದುವರಿಸುವುದರಿಂದ ಕೊಡಗು ಜಿಲ್ಲೆಗೆ ಆಗಬಹುದಾದ ಪ್ರಯೋಜನವನ್ನು ಚಚಿ೯ಸಲಿದ್ದೇವೆ. ಜಿಲ್ಲೆಯ ಜನತೆಯ ಆರೋಗ್ಯ, ಜೀವಕ್ಕೆ ಆದ್ಯತೆ ನೀಡಲೇಬೇಕಾದ ದಿನಗಳು ಇವು. ಜೀವ, ಆರೋಗ್ಯ ಉಳಿದರೆ ಮುಂದೆ ಹೇಗೆ ಬೇಕಾದರೂ ಜೀವನ ನಡೆಸಬಹುದು. ಎಲ್ಲರೂ ತಿಳಿದುಕೊಳ್ಳಬೇಕಾದ ಅಂಶ ಇದು ಎಂದು ವಿರಾಜಪೇಟೆ  ಕ್ಷೇತ್ರ ಶಾಸಕ  ಕೆ.ಜಿ.ಬೋಪಯ್ಯ ಅನಿಸಿಕೆ ವ್ಯಕ್ತಪಡಿಸಿದರು.

ಮಡಿಕೇರಿ ಕ್ಷೇತ್ರದ ಎಲ್ಲಾ ಗ್ರಾಮಪಂಚಾಯತ್ ಗಳಿಗೆ ಭೇಟಿ ನೀಡಿ ಟಾಸ್ಕ್ ಫೋಸ್೯ ಸಭೆಗಳ ಮೂಲಕ ಜಾಗೖತಿ ಮೂಡಿಸಿರುವೆ.  ಅನೇಕರಿಗೆ ಇನ್ನೂ  ಆರೋಗ್ಯ ಸಂರಕ್ಷೆಣೆಯ ನಿಟ್ಟಿನಲ್ಲಿ ಜವಾಬ್ದಾರಿಕೆ ಬಂದಿಲ್ಲ. ಗೃಹಸಂಪಕ೯ ತಡೆಯಲ್ಲಿರಬೇಕಾದವರು ಇದನ್ನು ಉಲ್ಲಂಘಿಸಿ ಊರೆಲ್ಲಾ ತಿರುಗಾಡಿ ಸೋಂಕನ್ನು ಹಬ್ಬಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಗೃಹಸಂಪಕ೯ದಲ್ಲಿರುವವರು ಕೋವಿಡ್ ಕೇರ್ ಕೇಂದ್ರಗಳಿಗೆ ಹೋಗಬೇಕಾದ ಅನಿವಾಯ೯ತೆ ಇದೆ.   ಅನ್ ಲಾಕ್ ಆದ ನಂತರ ಯಾವ ರೀತಿ ನಿಯಮಗಳನ್ನು ಪಾಲಿಸಿ ಕೋರೋನಾ ಮುಕ್ತವಾಗಿಸುವುದು ಎಂಬ ಬಗ್ಗೆ ಗಂಭೀರ ಚಿಂತನೆ ಅಗತ್ಯವಾಗಿದೆ. ಜನರೂ ಸಾಮಾಜಿಕ ಹೊಣೆಗಾರಿಕೆ ತೋರಬೇಕಾದ ಅನಿವಾಯ೯ತೆ ಇದೆ. ಕೊಡಗಿನಿಂದ ಹೊರಜಿಲ್ಲೆಗೆ ಹೋಗಿಬರುವವರು, ಹೊರಜಿಲ್ಲೆಯಿಂದ ಕೊಡಗಿಗೆ ಬರುವವರು ನೆಗೇಟಿವ್ ವರದಿಯನ್ನು ತರುವುದು ಕಡ್ಡಾಯ ಮಾಡಬೇಕಾಗಿದೆ. ಚೆಕ್ ಪೋಸ್ಟ್ ಗಳಲ್ಲಿ ಮತ್ತಷ್ಟು ಕಣ್ಗಾವಲು ಹಾಕಿ ಬಿಗಿ ಮಾಡಬೇಕಾಗಿದೆ. ಅನ್ ಲಾಕ್ ನ್ನು ಕೊಡಗಿನಲ್ಲಿ ಹಂತಹಂತವಾಗಿ ಮಾಡಲೇಬೇಕಾಗಿದೆ. ಯಾವ ರೀತಿ ಎಂಬ ಬಗ್ಗೆ ಸಚಿವರು ಪಾಲ್ಗೊಳ್ಳುವ ಶುಕ್ರವಾರದ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಚಚಿ೯ಸಿ ತೀಮಾ೯ನ ಕೈಗೊಳ್ಳುತ್ತೇವೆ. ಜೂನ್ 14 ರ ವೇಳೆಗೆ ಕೊಡಗಿನಲ್ಲಿ ಪಾಸಿಟಿವಿಟಿ ದರ ಶೇ. 5 ರೊಳಗೆ ತಲುಪುವ ಭರವಸೆ ಇದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ತು ರಂಜನ್ ಅಭಿಪ್ರಾಯ ಪಟ್ಟರು.   

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...