ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ( Rahul Gandhi ) ಸಂಸತ್ನಲ್ಲಿ ಮಹಿಳಾ ಸಂಸದರಿಗೆ ಫ್ಲೈಯಿಂಗ್ ಕಿಸ್ ಕೊಟ್ಟಿದ್ರಾ..? ಅಥವಾ ಬಿಜೆಪಿ ( BJP) ನಾಯಕರು ರಾಹುಲ್ ಗಾಂಧಿ ಆಡಿದ ಮೊನಚಾದ ಮಾತುಗಳನ್ನು ಎದುರಿಸಲು ಸಾಧ್ಯವಾಗದೆ ಈ ರೀತಿಯ ವಿಚಾರವನ್ನು ಮಾಧ್ಯಮಗಳ ( Media ) ಎದುರು ಹರಿಯಬಿಡ್ತಾ..? ಈ ರೀತಿಯ ಒಂದು ಅನುಮಾನ ( Doubt ) ಇಡೀ ದೇಶದ ( Nation ) ಜನರನ್ನು ( People ) ಕಾಡುವುದಕ್ಕೆ ಶುರು ಮಾಡಿದೆ. ಅದರಲ್ಲೂ ಲೋಕಸಭಾ ಸಭಾಧ್ಯಕ್ಷರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ಶೋಭಾ ಕರಂದ್ಲಾಜೆಗೆ ನಿಜವಾಗಲೂ ಹಾರುವ ಮುತ್ತು ನೀಡಿದರೇ..!? ಎನ್ನುವಂತೆ ಆಗಿದೆ. ಆದರೆ ಇದೊಂದು ಟ್ರ್ಯಾಪ್ ಅನ್ನೋದು ಕಾಂಗ್ರೆಸ್ ನಾಯಕರ ಬಲವಾದ ವಾದ. ಅದಕ್ಕೆ ಕಾರಣವನ್ನೂ ನೀಡಲಾಗಿದೆ.
ಸಂಸತ್ನಲ್ಲಿ ಬುಧವಾರ ರಾಹುಲ್ ಮಾಡಿದ್ದೇನು..?
ರಾಹುಲ್ ಗಾಂಧಿ ಸಂಸತ್ ಸ್ಥಾನ ಅನರ್ಹಗೊಂಡ ಬಳಿಕ ಸಂಸತ್ನಲ್ಲಿ ಮೊದಲ ಬಾರಿಗೆ ಮಾತನಾಡಿದ್ದರು. ಸುಪ್ರೀಂಕೋರ್ಟ್ನಿಂದ ಶಿಕ್ಷೆಗೆ ತಡೆಯಾಜ್ಞೆ ತಂದ ಬಳಿಕ ಸಂಸತ್ ಅಧಿವೇಶನಕ್ಕೆ ಹಾಜರಾಗಿದ್ದ ರಾಹುಲ್ ಗಾಂಧಿ, ಮಣಿಪುರ ಹಿಂಸಾಚಾರ ವಿಚಾರದಲ್ಲಿ ನರೇಂದ್ರ ಮೋದಿ ಸರ್ಕಾರ ನಡೆದುಕೊಂಡ ರೀತಿ ಹಾಗು ನಡೆದುಕೊಳ್ಳಬೇಕಿದ್ದ ವಿಚಾರಗಳನ್ನು ಹಿಡಿದುಕೊಂಡು ಕಟು ಮಾತುಗಳಲ್ಲಿ ಟೀಕಿಸಿದ್ದರು. ರಾಹುಲ್ ಗಾಂಧಿ ಭಾಷಣ ಕೇಲಿದ ಪ್ರತಿಯೊಬ್ಬರು ವಾವ್ಹ್.. ಎಷ್ಟೊಂದು ಅದ್ಬುತ ಭಾಷಣ ಎನ್ನುವಂತಿತ್ತು ರಾಹುಲ್ ಗಾಂಧಿಯ ವಾಕ್ಚಾತುರ್ಯ. ಆದರೆ ಕೊನೇ ಗಳಿಯಲ್ಲಿ ರಾಹುಲ್ ಮಾಡಿದ ಸಣ್ಣದೊಂದು ಸನ್ಹೆ ಇಡೀ ಭಾಷಣವನ್ನು ನಡು ನೀರಿನಲ್ಲಿ ತೊಳೆದಂತೆ ಮಾಡಿದೆ. ಅದು ಫ್ಲೈಯಿಂಗ್ ಕಿಸ್.
ಲೋಕಸಭಾ ಸ್ಪೀಕರ್ಗೆ 21 ಮಹಿಳಾ ಸಂಸದರಿಂದ ದೂರು..!
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡುವಾಗ ಕ್ಯಾಮೆರಾ ರಾಹುಲ್ ಮೇಲೆಯೇ ಕೇಂದ್ರೀಕೃತವಾಗಿತ್ತು. ಆದರೂ ರಾಹುಲ್ ಗಾಂಧಿ ಫ್ಲೈಯಿಂಗ್ ಕಿಸ್ ಕೊಡುವ ಯಾವುದೇ ವಿಡಿಯೋ ಸಿಕ್ಕಿಲ್ಲ. ಆದರೆ ಮಾತಾಡುವಾಗ ಸಂಸದ ಅಧೀರ್ ರಂಜನ್ ಚೌಧರಿಯನ್ನು ಕೂರುವಂತೆ ಸನ್ಹೆ ಮಾಡುವ ರಾಹುಲ್ ಗಾಂಧಿ, ತುಟಿ ಮೇಲೆ ಕೈಯಿಟ್ಟ ಒಂದು ಭಂಗಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ. ಇದನ್ನು ಬಿಜೆಪಿ ಮಹಿಳಾ ಸಂಸದರನ್ನು ಉದ್ದೇಶಿಸಿ ಫ್ಲೈಯಿಂಗ್ ಕಿಸ್ ಕೊಟ್ಟರು ಎಂದು ಲೋಕಸಭೆ ಸ್ಪೀಕರ್ಗೆ 21 ಮಹಿಳಾ ಸಂಸದರು ದೂರು ನೀಡಿದ್ದಾರೆ. ಆದರೆ ಈ ಬಗ್ಗೆ ಸಾಕಷ್ಟು ಭಿನ್ನ ವಿಭಿನ್ನ ಚರ್ಚೆಗಳು ಶುರುವಾಗಿವೆ.
ಈ ಸುದ್ದಿಯನ್ನೂ ಓದಿ ; ಭಾರತೀಯರಲ್ಲಿ ಶವಸಂಸ್ಕಾರ: ದೇವದತ್ ಪಟ್ನಾಯಕ್ ಅವರ ಚಿಂತನೆ – ಭಾಗ 2
ಸ್ಮೃತಿ ಇರಾನಿ, ಶೋಭಾ ಕರಂದ್ಲಾಜೆ ಹೇಳಿದ್ದೇನು..?
ಸ್ತ್ರೀ ದ್ವೇಷದ ಪುರುಷ ಮಾತ್ರ ಸಂಸತ್ತಿನಲ್ಲಿ ಮಹಿಳಾ ಸಂಸದರಿಗೆ ಫ್ಲೈಯಿಂಗ್ ಕಿಸ್ ನೀಡಲು ಸಾಧ್ಯ. ಇಂತಹ ಉದಾಹರಣೆ ಹಿಂದೆ ಎಂದೂ ಕಂಡಿರಲಿಲ್ಲ. ಇದು ಅವರ ಮಾನಸಿಕತೆ ತೋರಿಸುತ್ತದೆ. ಇದು ಅಶ್ಲೀಲ ಪ್ರಕರಣ ಎಂದಿದ್ದಾರೆ ಸ್ಮೃತಿ ಇರಾನಿ. ಇನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಸಂಸತ್ ಒಳಗೆ ಫ್ಲೈಯಿಂಗ್ ಕಿಸ್ ಇದೇ ಫಸ್ಟ್ ಟೈಂ.. ರಾಹುಲ್ ಗಾಂಧಿ ಭಾಷಣ ಮುಗಿಸಿ ಹೋಗುವಾಗ, ಸ್ಮೃತಿ ಇರಾನಿ ಮಾತಾಡಲು ಎದ್ದು ನಿಂತ್ರು. ಆಗ ರಾಹುಲ್ ಗಾಂಧಿ ಪ್ಲೈಯಿಂಗ್ ಕಿಸ್ ಕೊಟ್ಟಿದ್ದಾರೆ. ಇದು ಮಹಿಳಾ ಸದಸ್ಯರ ಜೊತೆ ನಡೆಸಿದ ಅನುಚಿತ ವರ್ತನೆ ಎಂದು ಟೀಕಿಸಿದ್ದಾರೆ.
ಮಣಿಪುರ ವಿಚಾರ ರಂಗು ಪಡೆಯಬಾರದು ಎಂದೇ ಕೃತ್ಯ..!
ರಾಹುಲ್ ಗಾಂಧಿ ಮಣಿಪುರ ವಿಚಾರದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡು ಕಳಪೆ ನಿರ್ಧಾರಗಳು ಹಾಗು ಪ್ರಧಾನಿ ನರೇಂದ್ರ ಮೋದಿ ಮೌನಕ್ಕೆ ಶರಣಾಗಿರುವ ವಿಚಾದ ಮೇಲೆ ಅಬ್ಬರದ ಮಾತನ್ನಾಡಿದ್ದರು. ಒಂದು ವೇಳೆ ಕಿಸ್ ವಿಚಾರ ಇಲ್ಲದಿದ್ದರೆ ಇಂದಿನ ಎಲ್ಲಾ ಪತ್ರಿಕೆಗಳು ಹಾಗು ಎಲ್ಲಾ ಟಿವಿ ನ್ಯೂಸ್ ಚಾನೆಲ್ಗಳಲ್ಲೂ ರಾಹುಲ್ ಗಾಂಧಿ ಭಾಷಣವೇ ಪ್ರಮುಖ ವಿಚಾರ ಆಗುತ್ತಿತ್ತು. ಇದನ್ನು ಮನಗಂಡ ಬಿಜೆಪಿ ಈ ರೀತಿ ರಾಹುಲ್ ಗಾಂಧಿ ಫ್ಲೈಯಿಂಗ್ ಕಿಸ್ ಕೊಟ್ಟರು ಎಂದು ಪುಕಾರು ಎಬ್ಬಿಸಿದೆ ಎನ್ನಲಾಗ್ತಿದೆ. ಇನ್ನು ವಿಡಿಯೋದಲ್ಲೂ ರಾಹುಲ್ ಗಾಂಧಿ ಸ್ಪೀಕರ್ ಕಡೆಗೆ ತಿರುಗಿ ಮಾತನಾಡುವಾಗ ಬಾಯಿ ಮೇಲೆ ಬೆರಳು ಇಟ್ಟಂತೆ ಕಾಣಿಸುತ್ತದೆ. ಆದರೆ ಸ್ಮೃತಿ ಇರಾನಿ ಸಂಪೂರ್ಣವಾಗಿ ಎಡ ಭಾಗದಲ್ಲಿ ಇದ್ದಾರೆ. ಆಗಿದ್ದ ಮೇಲೆ ಫ್ಲೈಯಿಂಗ್ ಕಿಸ್ ಕೊಟ್ಟಿದ್ದು ಯಾರಿಗೆ..? ಸುಳ್ಳು ಹೇಳಲು ಲೆಕ್ಕಾಚಾರ ಬೇಡವೇ ಅನ್ನೋ ಚರ್ಚೆ ಕೂಡ ನಡೆಯುತ್ತಿದೆ.
ಕೃಷ್ಣಮಣಿ