ಸಂಘಟಿತ ಪ್ರದರ್ಶನ ನೀಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ 7 ವಿಕೆಟ್ ಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಬಗ್ಗುಬಡಿದು ಐಪಿಎಲ್ ಟಿ-೨೦ ಟೂರ್ನಿಯಲ್ಲಿ ಪ್ಲೇಆಫ್ ನತ್ತ ಹೆಜ್ಜೆ ಹಾಕಿದೆ.
ಅಹಮದಾಬಾದ್ ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ 20 ಓವರ್ ಗಳಲ್ಲಿ 151 ರನ್ ಗಳಿಗೆ ಆಲೌಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ 18.5 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಹೈದರಾಬಾದ್ ಪರ ಅಭಿಷೇಕ್ ಶರ್ಮ (31), ರಾಹುಲ್ ತ್ರಿಪಾಠಿ (34), ಏಡಾನ್ ಮರ್ಕರಂ (41 ಮತ್ತು ನಿಕೊಲಸ್ ಪೂರನ್ (35) ಉತ್ತಮ ಆಟದಿಂದ ತಂಡವನ್ನು ಗೆಲುವಿನ ದಡ ತಲುಪಿಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ಕೊನೆಯ ೫ ವಿಕೆಟ್ ಗಳನ್ನು ಒಂದೂ ರನ್ ಗಳಿಸದೇ ಕಳೆದುಕೊಂಡು ಬೃಹತ್ ಮೊತ್ತ ಗಳಿಸುವ ಅವಕಾಶ ಕಳೆದುಕೊಂಡಿತು.
ಹೆಬ್ಬೆರಳಿನ ನೋವಿನ ಕಾರಣ ನಾಯಕ ಮಯಾಂಕ್ ಅಗರ್ ವಾಲ್ ಈ ಪಂದ್ಯದಿಂದ ಹೊರಗುಳಿದಿದ್ದು, ಶಿಖರ್ ಧವನ್ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತರು. ಆದರೆ ಅವರು (8)ಬೇಗನೇ ನಿರ್ಗಮಿಸಿ ನಿರಾಸೆ ಮೂಡಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಲಿವಿಂಗ್ ಸ್ಟೋನ್ 33 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ 60 ರನ್ ಬಾರಿಸಿ ಔಟಾದರೆ, ಶಾರೂಖ್ ಖಾನ್ 28 ಎಸೆತಗಳಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 26 ರನ್ ಬಾರಿಸಿ ತಂಡದ ಮೊತ್ತ ೧೫೦ರ ಗಡಿ ದಾಟುವಂತೆ ನೋಡಿಕೊಂಡರು.
ಸನ್ ರೈಸರ್ಸ್ ಹೈದರಾಬಾದ್ ಪರ ಕೊನೆಯ ಓವರ್ ನಲ್ಲಿ 4 ವಿಕೆಟ್ ಪಡೆದು ಮಿಂಚಿದರು. ಈ ಮೂಲಕ ಕೊನೆಯ 4 ವಿಕೆಟ್ ಗಳನ್ನು ಒಂದೂ ರನ್ ಗಳಿಸದೇ ಕಳೆದುಕೊಂಡಿತು. ಭುವನೇಶ್ವರ್ ಕುಮಾರ್ 3 ವಿಕೆಟ್ ಪಡೆದರು.