ಭಾರತದ ನಿಖಿತ್ ಜರೀನ್ ವನಿತೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಗೆಲ್ಲುವ ಮೂಲಕ ಇತಿಹಾಸ ಬರೆದಿದ್ದಾರೆ.
ಗುರುವಾರ ನಡೆದ 52 ಕೆಜಿ ವಿಭಾಗದ ಫೈನಲ್ ನಲ್ಲಿ ನಿಖಿತ್ ಜರೀನ್ ಥಾಯ್ಲೆಂಡ್ ನ ಜಿಟ್ ಪಾಂಗ್ ಜುಟಮಸ್ ವಿರುದ್ಧ 30-27, 29-28, 29-28, 30-27, 29-28 ಅಂಕಗಳಿಂದ ರೋಚಕ ಗೆಲುವು ಸಾಧಿಸಿದರು.
ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದ 5ನೇ ಭಾರತೀಯ ಮಹಿಳೆ ಎನಿಸಿಕೊಂಡರು. ಇದಕ್ಕೂ ಮುನ್ನ ಮೇರಿಕೋಮ್, ಸರಿತಾ ದೇವಿ, ಜೆನ್ನಿ ಆರ್ ಎಲ್, ಲೇಖಾ ಕೆಸಿ ಚಿನ್ನದ ಪದಕ ಗಳಿಸಿದ್ದಾರೆ.