ಮಹೇಂದ್ರ ಸಿಂಗ್ ಧೋನಿ ನೇತೃತ್ವದ ತಂಡವು 2016 ರಲ್ಲಿ ಮೂರು ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಆಡಿದ ನಂತರ ಈವರೆಗೂ ಯಾವುದೆ ಪಂದ್ಯವನ್ನು ಜಿಂಬಾಬ್ವೆ ಎದುರು ಭಾರತ ಆಡಿಲ್ಲ ಸತತ ಆರು ವರ್ಷಗಳ ನಂತರ ಜಿಂಬಾಬ್ವೆ – ಭಾರತ ನಡುವಿನ ಏಕದಿನ ಪಂದ್ಯಕ್ಕೆ ಮುಹೂರ್ತ ಪಿಕ್ಸ್ ಆಗಿದೆ.
ಭಾರತ-ವೆಸ್ಟ್ ಇಂಡೀಸ್ ನಡುವಣ ಸರಣಿ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ಜಿಂಬಾಬ್ವೆ ವಿರುದ್ದ ಸರಣಿ ಆಡಲಿದ್ದು ಅದಕ್ಕೆ ವೇಳಾಪಟ್ಟಿ ಬಿಡುಗಡೆ ಮಾಡಿದೆ.
ಈ ಸರಣಿಯು ಐಸಿಸಿ ವಿಶ್ವಕಪ್ ಸೂಪರ್ ಲೀಗ್‌ನ ಭಾಗವಾಗಿದ್ದು, ಹೀಗಾಗಿ ಈ ಪಂದ್ಯಗಳು ಜಿಂಬಾಬ್ವೆ ಪಾಲಿಗೆ ಬಹಳ ಮಹತ್ವದ್ದಾಗಿದೆ. ಉತ್ತಮವಾಗಿ ಆಡಿದರೆ ಮಾತ್ರ ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ 50-ಓವರ್‌ಗಳ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯಲಿದೆ.

ಭಾರತ-ಜಿಂಬಾಬ್ವೆ ಸರಣಿ ವೇಳಾಪಟ್ಟಿ ಹೀಗಿದೆ:
ಆಗಸ್ಟ್ 18- ಮೊದಲ ಏಕದಿನ ಪಂದ್ಯ
ಆಗಸ್ಟ್ 20- ಎರಡನೇ ಏಕದಿನ ಪಂದ್ಯ
ಆಗಸ್ಟ್ 22- ಮೂರನೇ ಏಕದಿನ ಪಂದ್ಯ
ಈ ಎಲ್ಲಾ ಪಂದ್ಯಗಳು ಹರಾರೆಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.