ಇಂಗ್ಲೆಂಡ್ ತಂಡದ ಅತ್ಯಂತ ಅನುಭವಿ ಹಾಗೂ ದಾಖಲೆ 500ಕ್ಕೂ ಹೆಚ್ಚು ವಿಕೆಟ್ ಪಡೆದ ಮಧ್ಯಮ ವೇಗಿ ಸ್ಟುವರ್ಟ್ ಬ್ರಾಡ್ ಅವರ ಒಂದೇ ಓವರ್ ನಲ್ಲಿ ಜಸ್ ಪ್ರೀತ್ ಬುಮ್ರಾ 35 ರನ್ ಕೊಳ್ಳೆ ಹೊಡೆದು ದಾಖಲೆ ಬರೆದಿದ್ದಾರೆ.
ಬರ್ಮಿಂಗ್ ಹ್ಯಾಂನಲ್ಲಿ ನಡೆಯುತ್ತಿರುವ ಪಂದ್ಯದ 2ನೇ ದಿನ 8ನೇ ಕ್ರಮಾಂಕದಲ್ಲಿ ಆಡಲಿಳಿದ ಜಸ್ ಪ್ರೀತ್ ಬುಮ್ರಾ ಇನಿಂಗ್ಸ್ ನ 84ನೇ ಓವರ್ ಎಸೆದ ಬ್ರಾಡ್ ಓವರ್ ನಲ್ಲಿ ಬುಮ್ರಾ 35 ರನ್ ಸೂರೆಗೈದರು. ಈ ಮೂಲಕ ಬ್ರಾಡ್ ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯಂತ ದುಬಾರಿ ಓವರ್ ಮಾಡಿದ ಕುಖ್ಯಾತಿಗೆ ಪಾತ್ರರಾದರು.
ಬ್ರಾಡ್ ಅವರ 84ನೇ ಓವರ್ ನಲ್ಲಿ ಬುಮ್ರಾ, ಮೊದಲೆರಡು ಎಸೆತಗಳಲ್ಲಿ ವೈಡ್ ನೀಡಿದರು. 3 ಎಸೆತದಲ್ಲಿ ನೋಬಾಲ್ ಆದರೂ ಬುಮ್ರಾ ಸಿಕ್ಸರ್ ಬಾರಿಸಿದರು. ನಂತರದ ಸತತ 3 ಬೌಂಡರಿ ಮತ್ತು ಒಂದು ಸಿಕ್ಸರ್ ಹಾಗೂ ಅಂತಿಮ ಎಸೆತದಲ್ಲಿ 1 ರನ್ ಬಾರಿಸಿದರು.

2207ರ ವಿಶ್ವಕಪ್ ನಲ್ಲಿ ಬ್ರಾಡ್ ಒಂದೇ ಓವರ್ ನಲ್ಲಿ ಯುವರಾಜ್ ಸಿಂಗ್ ಸತತ 6 ಸಿಕ್ಸರ್ ಬಾರಿಸಿ ದಾಖಲೆ ಬರೆದಿದ್ದರು. ಅದು ಮರೆಯುವ ಮುನ್ನವೇ ಬ್ರಾಡ್ ಅವರಿಗೆ ಮತ್ತೊಂದು ಬೇಡದ ದಾಖಲೆ ಬರೆದುಕೊಟ್ಟರು.
ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾದ ರಾಬಿನ್ ಪೀಟರ್ಸನ್ ಮತ್ತು ಕೇನ್ಸ್ ಆಂಡರ್ಸನ್ ತಲಾ 28 ರನ್ ನೀಡಿದ್ದು ಇದುವರೆಗಿನ ದಾಖಲೆಯಾಗಿತ್ತು.