
ತಲೆಯೆತ್ತಿ ಬದುಕೋದು ನೊಡಿ
ಹಲವು ಹುಚ್ಚು ರೀಲ್ಸ್ ರಾಣಿಯರ ಜಮಾನದಲ್ಲಿ,ಒಳ್ಳೆಯವರು ಕಾಣುವುದು ಕೆಲವರು.ಗಂಡೂ ಇರ್ಬೋದು,ಹೆಣ್ಣೂ ಇರ್ಬೋದು.ಅದ್ಕೆ ಲಿಂಗಭೇದ ಇರಲ್ಲ.
ನಮ್ಮ ಹಳೇಬರು ಸಾಮಾನ್ಯವಾಗಿ ಇಂಥ ವಸ್ತ್ರ ಧರಿಸಿದ್ದು ವಿರಳ.ಇದು ತಪ್ಪಾ?..ಪಾಶ್ಚಾತ್ಯರು ಮಾಡ್ತಾರಲ್ಲ..?..ತಪ್ಪು ಅಂತ ಸುಮ್ನೆ ಹೇಳಿದ್ರೆ ಅರ್ಥವಿಲ್ಲ.ಕೆಲವರಿಗೆ ಸೀರೆ, ಲಂಗ ಇತ್ಯಾದಿ ಉಡುಗೆ ತೊಡುಗೆ ಕಂಫರ್ಟ್ ಎನಿಸಲ್ಲ.ಸರಿ.ಓಕೆ ಒಪ್ಪಬೇಕಾದ್ದೆ… ಬೇಲೂರು ಹಳೆಬೀಡು ಶಿಲಾಬಾಲಿಕೆ,ಗೊಮ್ಮಟಮೂರ್ತಿ ಬೆತ್ತಲೆ ಇದೆ,ಏನಾದ್ರೂ ತಪ್ಪು ಅನ್ನಿಸುತ್ತಾ..?ಇಲ್ಲ..ಯಾಕಂದ್ರೆ ನಾವು ಕಾಮದ ದೃಷ್ಟಿಲಿ ಅದನ್ನ ನೋಡಿಲ್ಲ ಅಲ್ವಾ?..ಕಾಮದ ಮೇಲೆ ಹಿಡಿತ ಎಲ್ಲರಿಗೂ ಬೇಕೇ ಬೇಕು.ಇಲ್ದಿದ್ರೆ ಪತನ ಆಗಲು ಕ್ಷಣ ಸಾಕು.ನೆಟ್ಟಗೆ ಬಟ್ಟೆ ತೊಟ್ಟವರ ಮೇಲೂ ಅತ್ಯಾಚಾರ ನಡೆದಿದೆ. ಅವ್ರೇನು ತಪ್ಪು ಮಾಡಿದ್ರೆ ಹಾಗಾದ್ರೆ..ಇಲ್ಲ..ಇಲ್ಲಿ ನಮ್ಮ ದೃಷ್ಟಿಕೋನ ಬಹು ಪ್ರಮುಖ ಪಾತ್ರ ವಹಿಸುತ್ತದೆ.
ಎಲ್ಲಾ ಗಂಡಸಿನ ದೃಷ್ಟಿಯೇ ತಪ್ಪಾ ಹಾಗಾದ್ರೆ?.. ಹೆಣ್ಣು ಯಾವಾಗ್ಲೂ ಸರೀನಾ?..ಇಲ್ಲ. ಸೀತೆಯಂಥ ತಾಯಿಯರ ಮಧ್ಯೆ ಶೂರ್ಪನಖಿಯರೂ ಇದ್ದೇ ಇರ್ತಾರೆ.ತಾನು ಹೆಣ್ಣು ಎಂಬುದರ ಕನಿಷ್ಠ ಪರಿವೆ ಇಲ್ಲದೇ ಎಗರಾಡುವ ಎಷ್ಟೋ ಮಂದಿ ಇದ್ದೇ ಇದ್ದಾರೆ.ಅಂಥವರಿಗೆ .ಇಂಥವರಿಂದ ಒಳ್ಳೆ ಹೆಣ್ಮಕ್ಕಳಿಗೂ ಪಾಪ, ಕೆಟ್ಟ ಹೆಸರು.ಮುಗ್ಧೆಯರಿಗೂ ಜನರಿಂದ ಹೇಳಿಸಿಕೊಳ್ಳುವ ಕರ್ಮ,,ಇಂಥವರಿಂದ.ಥತ್.!..ಮಾಡರ್ನ್ ಡ್ರೆಸ್ ಲಿಮಿಟ್ನಲ್ಲಿ ಇದ್ದರೆ ಓಕೆ..ಇಲ್ದೆ ಸುಮ್ನೆ ತುಂಬಾ ಮಿತಿ ಮೀರಿದರೆ..?.ಪಬ್ಲಿಕ್ನಲ್ಲಿ ಮಿನಿಮಮ್ ಡಿಸೆನ್ಸಿ ಬೇಕೇ ಬೇಕು.ಸ್ವಾತಂತ್ರ್ಯ ಸ್ವೇಚ್ಛೆ ಆಗಬಾರದು.
ಕಾಮಾಪುರಾಣಾಮ್ ನ ಭಯಂ ನ ಲಜ್ಜಾ.ಹೆಣ್ಣೇ ಇರಲಿ ಗಂಡೇ ಆಗಲಿ,ಒಂದು ನೈತಿಕತೆಯ ಲಕ್ಷ್ಮಣರೇಖೆ ಇರುತ್ತೆ.ಅದನ್ನು ಮೀರಿದರೆ ಆತ ಗಂಡುಜಾತಿಗೆ ಅವಮಾನ,ಅಯೋಗ್ಯ.,ಹೆಣ್ಣು ಮೀರಿದರೆ ಸ್ತ್ರೀ ಕುಲಕ್ಕೆ ಆಕೆ ಕಳಂಕ.ನಾರಿಯರ ಮರ್ಯಾದೆಗೆ ಕಪ್ಪುಚುಕ್ಕೆ. ಇಬ್ಬರೂ ಮಾನವೀಯತೆ,ಧರ್ಮಕ್ಕೆ ಮಸಿ ಬಳಿದಂತೆ ಅಷ್ಟೇ..

ಹೆಂಗಳೆಯೊಬ್ಬಳು ತುಂಡುಡುಗೆ ತೊಟ್ಟು ಟವೆಲ್ ತೆಗೆದು ರೀಲ್ಸ ಮಾಡಿದಳೆಂದು ನ್ಯೂಸ್..! ಅವಳೇನು ಸಂಭಾವಿತಳೇನು?ಯಾರೂ ಇಲ್ಲಿ ಸಾಚಾಗಳಲ್ಲ. ಎಲ್ಲರು ಕಾಮದ ವಾಸನೆಯ ಮೂಸುತ್ತ ಹೊರಟ ಕುರುಡರು.ದರಿದ್ರತೆ ಮನದ ಒಳಗೆ ಇರುತ್ತೆ ಹೊರತು ಹೊರಗಲ್ಲ.ಯಾರಿಗೆ ಬೇಕು ಗುರುವೇ ಈ ಲೋಕದ ಗೊಡವೆ?..ಏನಾದ್ರೂ ಮಾಡ್ಕೋತಾರೆ ಬಿಡಿ.
ನಾ ಸ್ವತಂತ್ರ ಎಂದು ಹದ್ದಾಗಿ ಹಾರುವೆನೆಂದು ಹದ್ದು ಮೀರಿದರೆ, ಕಾಲನೇ ಗುದ್ದು ಕೊಟ್ಟುಬಿಡುತ್ತೆ. ಎಲ್ಲೆ ಮೀರಿ ಎಲ್ಲೆಲ್ಲೋ ಮನವ ಹರಿಬಿಟ್ಟರೆ,ಸೂತ್ರವಿಲ್ಲದ ಪಟದಂತೆ,ಮೇಲೆ ಹಾರಿದಷ್ಟೂ ಜೋರಾಗಿ ಕೆಳಗೆ ಉದುರುತ್ತೀರಿ.ಹೆಣ್ಣು, ಗಂಡು ಯಾರಾದ್ರೂ ಅಷ್ಟೇ.ಕರ್ಮನಿಗೆ ಎಲ್ಲರೂ ಒಂದೇ.

ಬಟ್ಟೆಯಿಂದ ನಿಮ್ಮ ಅಂತರಂಗ ಅಳೆಯಲು ಸಾಧ್ಯವಿಲ್ಲ ಎಂಬುದು ಎಷ್ಟು ನಿಜವೋ,ನಿಮ್ಮ ಆಂತರ್ಯವನ್ನು ಬಾಹ್ಯವೇಷಭೂಷಣ ಪ್ರತಿಬಿಂಬಿಸುತ್ತದೆ ಎಂಬುದೂ ಅಷ್ಟೇ ಸತ್ಯ..!ಮಲಿನ ಮನಸಿಗೆ ತೋಚಿದ್ದು ಕೂಡ ಕೊಳಕೇ..!ಇನ್ನೆಲ್ಲಿ ಮೂಡಬೇಕು ಹೇಳಿ,ವ್ಯಕ್ತಿತ್ವದ ರೀತಿ,ನೀತಿಯ ಮೊಳಕೆ..!!

ಗಂಡಸ್ರೆಲ್ಲರೂ ರಾಮರಲ್ಲ,ಹೆಂಗಸರೆಲ್ಲ ಏನು ಲಕ್ಷ್ಮೀಯರಲ್ಲ.ಉಭಯ ಪಕ್ಷಗಳಲ್ಲೂ ಸಜ್ಜನ,ದುರ್ಜನರಿಬ್ಬರೂ ಇರುತ್ತಾರೆ.ನೀವು ನೆಟ್ಟಗೆ ನಿಮ್ಮನ್ನು ತಿದ್ದಿಕೊಂಡರೆ ಒಬ್ಬ ಮೂರ್ಖ ಕಡಿಮೆ ಆದಂತೆ ಅಷ್ಟೇ..!..!..ಲೋಕದ ಚಿಂತೆ ನಮಗೇಕೆ?..ನಮ್ಮ ಬಾಳೆಯಲ್ಲೇ ಹೆಗ್ಗಣ ನಾರುತ್ತಿರುವಾಗ..!ಅಲ್ಲವೇ?..ಚಿತ್ತ ಶುದ್ಧಿ, ಕರ್ಮತಪ ಮುಖ್ಯ, ಹೆಣ್ಣಾದ್ರೂ ಅಷ್ಟೇ, ಗಂಡಾದ್ರೂ ಅಷ್ಟೇ.ಹೇಗಿರಬೇಕೋ ಹಾಗಿದ್ದರೇನೆ ಚೆನ್ನ…!ಇಲ್ದಿದ್ರೆ ಮೂಲೆಗುಂಪು ಮಾಡುವುದು ನಿಮ್ಮನ್ನು,ಈ ಬದುಕು..ಜೋಕೆ..!ಆಲೋಚಿಸಿ ನೋಡಿ…!ತುಂಬಿದ ಕೊಡವಾಗಿರಿ,ತಳ ಮುರಿದ,ತಾಳ ತಪ್ಪಿದ ಕೋಡಂಗಿಯಲ್ಲ..!

ನಿಯತ್ತಿಗೆ ಒಳ್ಳೆ ಮನಸಿಗೆ,ಲಿಂಗತಾರತಮ್ಯ, ಹೆಣ್ಣುಗಂಡು ಎಂಬುದಿಲ್ಲ. ತಲೆಯೆತ್ತಿ ಬದುಕೋದು ನೋಡಿ,ಹೇಸಿಗೆಯಿಂದಲ್ಲ…!.
ಲೋಕಾ ಸಮಸ್ತಃ ಸುಖಿನೋ ಭವಂತು..!ನಮಗೆ ನಾವೇ ಎಲ್ಲಾ,ಮನವೇ ಮಿತ್ರ,ಅರಿವೇ ಗುರು, ಕಾಮಾಂಧ, ಅರಿಷಡ್ವರ್ಗಗಳೇ ಅಜ್ಞಾನವೇ ಶತ್ರು…ಜೈ ಹಿಂದ್..!!

ನವೀನ ಹೆಚ್ ಎ ಅಂಕಣಕಾರರು ಲೇಖಕರು ಹನುಮನಹಳ್ಳಿ ಕೆಆರ್ ನಗರ