ಶುಕ್ರವಾರ ರಾತ್ರಿ ಕೂಡ ಪಾಕಿಸ್ತಾನ ಭಾರತದ 26 ಸ್ಥಳಗಳ ಟಾರ್ಗೆಟ್ ಮಾಡಿ ದಾಳಿ ಮಾಡಿದೆ. ಕಾಶ್ಮೀರದ ಬಾರಾಮುಲ್ಲಾದಿಂದ ಗುಜರಾತ್ನ ಭುಜ್‌ವರೆಗೂ 26 ಸ್ಥಳಗಳನ್ನು ಟಾರ್ಗೆಟ್ ಮಾಡಿ ಡ್ರೋಣ್ ದಾಳಿ ಮಾಡಿದೆ. ನಾಗರಿಕರು ಹಾಗು ಭಾರತೀಯ ಸೇನೆಯನ್ನು ಪಾಕಿಸ್ತಾನ ಟಾರ್ಗೆಟ್ ಮಾಡಿದ್ದು, ಪಾಕಿಸ್ತಾನದ ಡ್ರೋಣ್‌ಗಳನ್ನು ಹೊಡೆದುರುಳಿಸಿದೆ ಭಾರತೀಯ ಸೇನೆ. ಡ್ರೋಣ್ ದಾಳಿಯಿಂದಾಗಿ ಭಾರತದ ಹಲವು ನಾಗರಿಕರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪಾಕಿಸ್ತಾನದ ಡ್ರೋಣ್ ದಾಳಿ ಆದ ಸ್ಥಳಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಸದ್ಯಕ್ಕೆ ಗಡಿಯಲ್ಲಿ ಶಾಂತ ಪರಿಸ್ಥಿತಿ ಇದೆ ಎನ್ನಲಾಗಿದ್ದು, ಜಮ್ಮುವಿನಲ್ಲಿ ಬೆಳಗ್ಗೆ 6 ಗಂಟೆವರೆಗೂ ಬ್ಲ್ಯಾಕ್ಔಟ್ ಘೋಷಣೆ ಮಾಡಲಾಗಿದೆ. ಅಷ್ಟೇ ಅಲ್ಲದೆ ಜಮ್ಮುವಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದು, ಮುಂದಿನ ಆದೇಶದ ತನಕ ಶಾಲಾ ಕಾಲೇಜುಗಳನ್ನು ತೆರೆಯಬಾರದು ಎಂದು ಸ್ಥಳೀಯ ಸರ್ಕಾರ ಆದೇಶ ಮಾಡಿದೆ. ಗಡಿಯಲ್ಲಿ ಅಪಾಯಕ್ಕೆ ಸಿಲುಕಿರುವ ಜನರನ್ನು ಸುರಕ್ಷಿತ ತಾಣಗಳಿಗೆ ಶಿಫ್ಟ್ ಮಾಡುವ ಕೆಲಸವನ್ನು ಸೇನೆ ಮಾಡಿದೆ.
ಯುದ್ಧೋನ್ಮಾನದಲ್ಲಿ ಇರುವ ಪಾಕಿಸ್ತಾನಕ್ಕೆ IMF ನೆರವು ನೀಡಿದೆ. ಭಾರತದ ತೀವ್ರ ವಿರೋಧದ ನಡುವೆಯೂ International Monetary Fund ಸಾಲ ಮಂಜೂರು ಮಾಡಿರುವುದು ಭಾರತಕ್ಕೆ ತೀವ್ರ ಹಿನ್ನಡೆ ಎಂದು ವಿಶ್ಲೇಷಣೆ ಮಾಡಲಾಗ್ತಿದೆ. ತಕ್ಷಣವೇ 1 ಬಿಲಿಯನ್ ಯು.ಎಸ್ ಡಾಲರ್ ನೆರವು ಕೊಟ್ಟ IMF ಗೆ ಪಾಕಿಸ್ತಾನ್ ಪ್ರಧಾನಿ ಶಹಬಾಜ್ ಷರೀಫ್ ಧನ್ಯವಾದ ಅರ್ಪಿಸಿದ್ದಾರೆ. ಪಾಕಿಸ್ತಾನ IMF ನೆರವನ್ನು ತೆಗೆದುಕೊಂಡು ಭಯೋತ್ಪಾದಕರನ್ನು ಉತ್ತೇಜಿಸಲು ಬಳಕೆ ಮಾಡುತ್ತದೆ ಎಂದು ಭಾರತ ವಾದಿಸಿತ್ತು.

ಪ್ರಧಾನಿ ನರೇಂದ್ರ ಮೋದಿ ಮನೆಯಲ್ಲಿ ನಡೆದ ಮ್ಯಾರಥಾನ ಸಭೆ ಮಧ್ಯರಾತ್ರಿ ಅಂತ್ಯವಾಗಿದ್ದು, ಪ್ರಧಾನಿ ನಿವಾಸದಿಂದ ವಿದೇಶಾಂಗ ಸಚಿವ ಜೈಶಂಕರ್ ಹಾಗು ರಕ್ಷಣಾ ಸಲಹೆಗಾರ ಅಜಿತ್ ದೋವೆಲ್ ತೆರಳಿದ್ದಾರೆ. ಸತತ 3 ಗಂಟೆಗಳ ಕಾಲ ನಡೆದ ಹೈವೋಲ್ಟೇಜ್ ಮೀಟಿಂಗ್ನಲ್ಲಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವಂತೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ಸೇನಾಧಿಕಾರಿಗಳಿಗೆ ಪರಮಾಧಿಕಾರ ನೀಡಲು ನರೇಂದ್ರ ಮೋದಿ ಸೂಚನೆ ಕೊಟ್ಟಿದ್ದಾರೆ ಎನ್ನಲಾಗ್ತಿದೆ.