ನಾನು ಮನಸ್ಸು ಮಾಡಿದರೆ ಮುಂದಿನ ದಿನಗಳಲ್ಲಿ ಸಿಎಂ ಆಗುತ್ತೇನೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಪಕ್ಷದಲ್ಲಿ ತಮ್ಮನ್ನು ಕಡೆಗಣಿಸುತ್ತಿರುವ ನಾಯಕರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ಹಿರಿಯ ಸಹೋದರ, ಶಾಸಕ ಜಿ. ಸೋಮಶೇಖರ ರೆಡ್ಡಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನಸ್ಸು ಮಾಡಿದರೆ ಸಿಎಂ ಆಗುವುದು ಸುಲಭ ಆದರೆ ನನಗೆ ಸಿಎಂ ಆಗುವ ಆಸೆ ಇಲ್ಲ ನನ್ನ ಸಹೋದರ ಕರುಣಾಕರ ರೆಡ್ಡಿ ಸಂಸದರಾಗಿದ್ದವರು.
ಮತ್ತೋರ್ವ ಸಹೋದರ ಸೋಮಶೇಖರ ರೆಡ್ಡಿ ನಗರಸಭೆ ಅಧ್ಯಕ್ಷರಾಗಿದ್ದರು. ಆಗ ನನಗೆ ಕೊಡಲಾರದಷ್ಟು ಕಷ್ಟ ಕೊಟ್ಟರು. ಆದರೂ ನಾನು ಕನಕದುರ್ಗಮ್ಮ ಆಶೀರ್ವಾದದಿಂದ ನಿಮ್ಮ ಮುಂದೆ ಬಂದು ನಿಂತಿದ್ದೇನೆ ಎಂದರು.

ನನ್ನನ್ನು ಬಂಧಿಸಲು ಬಂದ ಸಿಬಿಐ ಅಧಿಕಾರಿಗಳೇ ನನಗೆ ಹೇಳಿದ್ದರು. ರೆಡ್ಡಿಯವರೆ ನಿಮಗೆ ತೊಂದರೆ ಕೊಡಬೇಕೆಂದು ಮೇಲಿನವರು ಆದೇಶ ನೀಡಿದ್ದಾರೆ. ಅವರ ಉದ್ದೇಶ ನಿಮ್ಮನ್ನು ನೋಯಿಸುವುದು ಆಗಿದೆ ಎಂದಿದ್ದರು. ಆದರೆ ಬಳ್ಳಾರಿ ಜನರಲ್ಲಿ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ ಎಂದು ಸಹ ಅವರು ಹೇಳಿದ್ದರು.