ವಾಯುಪಡೆ ಕೇಂದ್ರ ಸರ್ಕಾರದ ಯೋಜನೆಯಡಿಯಲ್ಲಿ ನೇಮಕಾತಿ ನೋಂದಣಿ ಪ್ರಕ್ರಿಯೆ ಆರಂಭಿಸಿದ 3 ದಿನಗಳಲ್ಲಿ 56,960 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ ಎಂದು IAF ಟ್ವೀಟ್ ನಲ್ಲಿ ತಿಳಿಸಿದೆ.
ಹೌದು, ಭಾರೀ ವಿರೊಧದ ನಡುವೆಯೂ ಅಗ್ನಿಪಥ್ ಯೋಜನೆ ನೇಮಕಾತಿ ಪ್ರಕ್ರಿಯೆಗೆ ಕೇಂದ್ರ ಚಾಲನೆ ನೀಡಿತ್ತು. 130. ಕೋಟಿಗೂ ಅಧಿಕ ಜನಖ್ಯೆ ಇರುವ ದೇಶದಲ್ಲಿ ಯೋಜನೆಗೆ ಕೇವಲ 55 ಸಾವಿ ಅರ್ಜಿ ಅಲ್ಲಿಸಿರಿವುದು ಕೇಂದ್ರಕ್ಕೆ ಹಿಂದೇಟೆ ಹೌದು.
ಶುಕ್ರವಾರ ಅಗ್ನಿಪಥ್ ಯೋಜನೆಯಡಿಯಲ್ಲಿ ನೇಮಕಾತಿಗಾಗಿ ಅರ್ಜಿ ಸಲ್ಲಿಸಲು ವಾಯುಪಡೆ ನೋಂದಣಿ ಪ್ರಕ್ರಿಯೆ ಆರಂಭಿಸಿತ್ತು. ಪ್ರಕ್ರಿಯೆ ಪ್ರಾರಂಭವಾದ 3 ದಿನಕ್ಕೆ 56,960 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಭಾರತೀಯ ವಾಯುಪಡೆ ಭಾನುವಾರ ತಿಳಿಸಿದೆ.
ʻ56960! ಇದು ಭವಿಷ್ಯದ ಅಗ್ನಿವೀರರಿಂದ ಈವರೆಗೆ ಸಲ್ಲಿಸಲಾದ ಅರ್ಕಿಯ ಸಂಖ್ಯೆಯಾಗಿದೆ. ಅಗ್ನಿಪಥ್ ನೋಂದಣಿ ಪ್ರಕ್ರಿಯೆಗೆ https://agnipathvayu.cdac.in ನಲ್ಲಿ ಅರ್ಜಿ ಸಲ್ಲಿಸಬೇಕಾಗಿದ್ದು, ಜುಲೈ 5ರಂದು ನೋಂದಣಿ ಪ್ರಕ್ರಿಯೆ ಮುಕ್ತಾಯವಾಗಲಿದೆʼ ಎಂದು ವಾಯುಪಡೆ ಟ್ವೀಟ್ ಮಾಡಿದೆ.