ಗಣೇಶೋತ್ಸವ ಪ್ರಯುಕ್ತ ತಯಾರಿಸಲಾದ 12 ಕೆಜಿ ಬೃಹತ್ ಲಡ್ಡು ಪ್ರಸಾದ 45 ಲಕ್ಷ ರೂ.ಗೆ ಹರಾಜಾಗಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಬಾಲಾಪುರ್ ಗಣೇಶ ಲಡ್ಡೂ ಹಿಂದಿನ ದಿನವಷ್ಟೇ 24.60 ಲಕ್ಷಕ್ಕೆ ಮಾರಾಟವಾಗಿತ್ತು. ಆದರೆ ಮಾರನೇ ದಿನ ಅದರ ದುಪ್ಪಟ್ಟು ಮೊತ್ತಕ್ಕೆ ಲಡ್ಡು ಮಾರಾಟವಾಗಿ ದಾಖಲೆ ಮಾಡಿದೆ.
ಮರಕಥ ಶ್ರೀ ಲಕ್ಷ್ಮೀ ಗಣಪತಿ ಉತ್ಸವ್ ಪೆಂಡಾಲ್ ಲಡ್ಡು ದಾಖಲೆಯ 44,99,999 ರೂ.ಗೆ ಮಾರಾಟವಾಗಿದೆ. ಇದು ಇಲ್ಲಿನ ನಗರಗಳ ಪೈಕಿ ಮಾರಾಟವಾದ ದುಬಾರಿ ಲಡ್ಡು ಮಾತ್ರವಲ್ಲ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ತೆಲುಗು ಪ್ರದೇಶಗಳಾದ ಸಿಕಂದರಾಬಾದ್ ನಲ್ಲೇ ಅತ್ಯಧಿಕ ಮೊತ್ತಕ್ಕೆ ಲಡ್ಡು ಮಾರಾಟವಾಗಿದೆ.

ಸ್ಥಳೀಯರ ಪ್ರಕಾರ ಗಣೇಶನಿಗೆ ವಿಶೇಷವಾಗಿ ತಯಾರಿಸಲಾದ ಈ ಬೃಹತ್ ಲಡ್ಡುವನ್ನು ಯಾರು ಹರಾಜಿನಲ್ಲಿ ಪಡೆಯುವಲ್ಲಿ ಯಶಸ್ವಿಯಾಗುತ್ತಾರೋ ಅವರಿಗೆ ಗಣೇಶನ ಅನುಗ್ರಹವಾಗುತ್ತದೆ ಎಂಬ ನಂಬಿಕೆ ಇಲ್ಲಿಯ ಜನರದ್ದು, ಹಾಗಾಗಿ ತೆಲುಗು ಪ್ರಾಬಲ್ಯವುಳ್ಳ ಈ ಎರಡೂ ರಾಜ್ಯಗಳಲ್ಲಿ ಲಡ್ಡುಗಳ ಹರಾಜು ನಡೆಯುತ್ತದೆ.