ಪ್ರಿಯಕರನೊಂದಿಗೆ (Lover) ಚಕ್ಕಂದವಾಡುತ್ತಾ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ಪತ್ನಿಯನ್ನ ಕೊಂದು, ಆಕೆಯ ರುಂ**ದೊಂದಿಗೆ ಪತಿ ಪೊಲೀಸ್ ಠಾಣೆಗೆ ತೆರೆಳಿ ಶರಣಾಗಿರುವ ಘಟನೆ ಬೆಂಗಳೂರು (Bengaluru) ಹೊರವಲಯದ ಆನೇಕಲ್ ತಾಲೂಕಿನ ಹೀಲಲಿಗೆಯಲ್ಲಿ ನಡೆದಿದೆ.

ಮೃತ ಮಾನಸ ಮತ್ತು ಆರೋಪಿ ಶಂಕರ್ ಪ್ರೀತಿಸಿ ಮದುವೆ ಆಗಿದ್ದರು. ದಂಪತಿ ಒಂದು ತಿಂಗಳ ಹಿಂದೆ ಹೀಲಲಿಗೆ ಗ್ರಾಮದ ಬಾಡಿಗೆ ಮನೆಗೆ ಶಿಫ್ಟ್ ಆಗಿದ್ದರು. ಜೂನ್ 3ರ ರಾತ್ರಿ ಶಂಕರ್ ಕೆಲಸದ ನಿಮಿತ್ತ ಹೊರಗೆ ಹೋಗಿದ್ದನು. ನಾಳೆ ಬೆಳಗ್ಗೆ ಬರುವುದಾಗಿ ಶಂಕರ್ ಪತ್ನಿ ಮಾನಸಗೆ ಹೇಳಿ ಹೋಗಿದ್ದನು. ರಾತ್ರಿ ಬೇಗ ಕೆಲಸ ಮುಗಿದಿತ್ತು ಮನೆಯಲ್ಲಿ ಪತ್ನಿ ಒಬ್ಬಳೇ ಇದ್ದಾಳೆಂದು ತಡರಾತ್ರಿಯೇ ಶಂಕರ ಮನೆಗೆ ಬಂದಿದ್ದನು.

ಮನೆಗೆ ಬಂದಾಗ ಶಂಕರಗೆ ಆಘಾತ ಕಾದಿತ್ತು. ಪತ್ನಿಯು ಪ್ರಿಯಕರನ ಜೊತೆ ಏಕಾಂತದಲ್ಲಿರುವುದನ್ನು ಪತಿ ಶಂಕರ್ ನೋಡಿದ್ದಾನೆ. ಇದರಿಂದ ಆಕ್ರೋಶಗೊಂಡ ಶಂಕರ್ ಇಬ್ಬರ ಮೇಲೂ ಹಲ್ಲೆ ಮಾಡಿದ್ದಾನೆ. ನಂತರ, ನೀನು ನನಗೆ ಬೇಡ, ನಿನ್ನ ಪ್ರಿಯಕರ ಜೊತೆ ಹೋಗು ಅಂತ ಪತ್ನಿ ಮಾನಸಳನ್ನು ಪತಿ ಶಂಕರ್ ಮನೆಯಿಂದ ಆಚೆ ಹಾಕಿದ್ದಾನೆ. ಆದರೆ, ಪತ್ನಿ ಮಾನಸ ಪದೇ ಪದೇ ಮನೆಗೆ ಬಂದು ಪತಿ ಶಂಕರ್ಗೆ ಟಾರ್ಚರ್ ಕೊಡುತ್ತಿದ್ದಳು. ಶುಕ್ರವಾರ ರಾತ್ರಿ ಸಹ ಮನೆಗೆ ಬಂದು ಪತಿ ಶಂಕರ ಜೊತೆ ಪತ್ನಿ ಮಾನಸ ಗಲಾಟೆ ಮಾಡಿದ್ದಳು ಇದರಿಂದ ಆಕ್ರೋಶಗೊಂಡ ಶಂಕರ ಪತ್ನಿ ಮಾನಸಳ ತ** ಕಡಿದು ರುಂ** ಸಮೇತ ಠಾಣೆಗೆ ಬಂದಿದ್ದಾನೆ. ಸೂರ್ಯನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.