ಹಳೇ ಮೈಸೂರು (Old mysore) ಬಾಗದ ಚೆನ್ನಪಟ್ಟಣ ಬೈ ಎಲೆಕ್ಷನ್ (Channapattana) ಅಖಾಡ ದಿನೇ ದಿನೇ ರಂಗೇರುತ್ತಿದೆ. ಜೆಡಿಎಸ್ (IDS) ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil kumaraswamy) ಈ ಕ್ಷೇತ್ರದಲ್ಲಿ ಬಹಳ ಆಕ್ಟಿವ್ ಆಗಿದ್ದು, ತಮ್ಮ ಪಕ್ಷದ ಕಾರ್ಯಕರ್ತರನ್ನೂ ಅಕ್ಟಿವ್ ಆಗಿ ಇಡಲು ಪ್ರಯತ್ನಿಸುತ್ತಿದ್ದಾರೆ.

ಇತ್ತ ಬಿಜೆಪಿಯಿಂದ (BJP) ಸಿ.ಪಿ ಯೋಗೇಶ್ವರ್ (CP yogeshwar) ಟಿಕೆಟ್ಗಾಗಿ ಪಟ್ಟು ಹಿಡಿದಿದ್ದಾರೆ. ರಾಜ್ಯ ನಾಯಕರಷ್ಟೇ ಅಲ್ಲದೇ, ಹೈಕಮ್ಯಾಂಡ್ ಮಟ್ಟದಲ್ಲೂ ಈಗಾಗಲೇ ಸಿ.ಪಿ ಯೋಗೇಶ್ವರ್ ಲಾಭಿ ನಡೆಸಲು ಮುಂದಾಗಿದ್ದಾರೆ. ಈ ಎಲ್ಲದರ ಮಧ್ಯೆ ಇತ್ತ ಡಿಸಿಎಂ ಡಿ.ಕೆ ಶಿವಕುಮಾರ್ (Dk shivakumr ಹೇಗಾದ್ರು ಮಾಡಿ ಚೆನ್ನಪಟ್ಟಣದ ಅಧಿಕಾರಿ ಕೈ ಹಿಡಿಯಲು ಕಸರತ್ತು ಮಾಡ್ತಿದ್ದಾರೆ.
ಇಷ್ಟೆಲ್ಲಾ ರಾಜಕೀಯ ಸಂಘರ್ಷಗಳ ನಡುವೆ ನಿಖಿಲ್ ಕುಮಾರಸ್ವಾಮಿ ಕ್ಷೇತ್ರದಲ್ಲಿ ಬೀಡುಬಿಟ್ಟು ಪಕ್ಷ ಸಂಘಟನೆ ಮಾಡ್ತಿದ್ದಾರೆ. ಇನ್ನು, ಹಾಗಿದ್ರೆ ಚೆನ್ನಪಟ್ಟಣ ಬೈ ಎಲೆಕ್ಷನ್ ಬಹುತೇಕ ತ್ರಿಕೋನ ಫೈಟ್ ಗೆ ವೇದಿಯಾಗಲಿದ್ಯಾ ಎಂಬ ಮಾಹಿತಿ ಲಭ್ಯವಾಗಿದೆ.