ಮೈಸೂರು ಚಲೋ (Mysuru chalo) 5ನೇ ದಿನಕ್ಕೆ ಕಾಲಿಟ್ಟ ಬೆನ್ನಲ್ಲೇ,ಬಳ್ಳಾರಿ (Bellary) ಪಾದಯಾತ್ರೆಗೂ ಬಿಜೆಪಿಯಲ್ಲಿ (BJP) ಒತ್ತಡ ಹೆಚ್ಚಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮೂಡ ಹಗರಣದ ವಿಚಾರ ಹಾಗೇ ವಾಲ್ಮೀಕಿ ನಿಗಮ (Valmiki board scam) ಅಕ್ರಮದ ವಿರುದ್ಧವಾಗಿ ಹಳೇ ಮೈಸೂರು ಭಾಗದಂತೆ ಬಳ್ಳಾರಿಯಲ್ಲೂ ಪಾದಯಾತ್ರೆ ಚಮಾಡಬೇಕು ಅಂತ ಬಿಜೆಪಿ ನಾಯಕರು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗ್ತಿದೆ.
ಈ ಹಿನ್ನಲೆ ಈಗಾಗಲೇ ರಾಜ್ಯ ಬಿಜೆಪಿ ನಾಯಕರ ಸಭೆಯಲ್ಲಿ ವಾಲ್ಮೀಕಿ ಸಮುದಾಯದ ನಾಯಕರು ಹೈಕಮಾಂಡ್ (Bjp high command) ನಾಯಕರ ಜೊತೆಗೆ ಬೃಹತ್ ST ಸಮಾವೇಶ ನಡೆಸುವ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಸದ್ಯ ಸಿಎಂ ಸಿದ್ದರಾಮಯ್ಯ (cm siddaramaiah) ರಾಜೀನಾಮೆಗೆ ಬೇಡಿಕೆ ಇಟ್ಟು ಆರಂಭವಾಗಿರುವ ಮುಡಾ (MUDA) ಪಾದಯಾತ್ರೆ ಫಲಿತಾಂಶ ಎದುರು ನೋಡುತ್ತಿರುವ ಹೈಕಮಾಂಡ್ ಬಳ್ಳಾರಿ ಪಾದಯಾತ್ರೆ ಬಗ್ಗೆ ಏನೂ ತೀರ್ಮಾನಿಸಿಲ್ಲ.
ಒಂದ್ವೇಳೆ ಮುಡಾ ಪಾದಯಾತ್ರೆ ಯಶಸ್ವಿ ಆಗದೇ ಇದ್ದರೇ, ಆಗ ವಾಲ್ಮೀಕಿ ನಿಗಮದ ಭ್ರಷ್ಟಾಚಾರ ಪ್ರಕರಣವನ್ನ ದೊಡ್ಡ ಪ್ರಮಾಣದಲ್ಲಿ ಕೈಗೆತ್ತಿಕೊಳ್ಳಲು ಹೈಕಮ್ಯಾಂಡ್ ಚಿಂತನೆ ನಡೆಸ್ತಿವೆ ಅಂತ ಹೇಳಲಾಗ್ತಿದೆ. ಒಟ್ನಲ್ಲಿ ಒಂದಾದ ನಂತರ ಒಂದು ಅಸ್ತ್ರ ಪ್ರಯೋಗಕ್ಕೆ ಬಿಜೆಪಿ ಪಡೆ ಸಿದ್ಧವಾದಂತಿದೆ.