ಮೂಡ ಹಗರಣಕ್ಕೆ (MUDA scam) ಸಂಬಂಧಿಸಿದಂತೆ ರಾಜ್ಯಪಾಲರು ತಮಗೆ ಶೋಕಾಸ್ ನೋಟಿಸ್ ಕೊಟ್ಟಿದ್ದು ಕಾನೂನು ಬಾಹಿರ ಎಂದು ಸಿಎಂ ಸಿದ್ದರಾಮಯ್ಯ (Cm siddaramaiah) ಪ್ರತಿಕ್ರಿಯಿಸಿದ್ದಾರೆ. ಮೂಡಾ ಅಕ್ರಮದಲ್ಲಿ ಸಿದ್ದರಾಮಯ್ಯು ಪಾತ್ರವಿದೆ ಎಂದು ಟಿ.ಜೆ.ಅಬ್ರಾಹಿಂ ರಾಜ್ಯಪಾಲರಿಗೆ ದೂರು ನೀಡಿದ ಹಿನ್ನಲೆ, ಈ ಬಗ್ಗೆ ಉತ್ತರ ಕೇಳಿ ರಾಜ್ಯಪಾಲರು ಸಿಎಂ ಗೆ ನೋಟಿಸ್ ನೀಡಿದ್ದರು.
ಈ ನೋಟಿಸ್ ಬಗ್ಗೆ ಇಂದು ರಿಯಾಕ್ಟ್ ಮಾಡಿದ ಸಿಎಂ, ಇದು ಕಾನೂನು ಬಾಹಿರವಾಗಿದ್ದು, ನಾನು ಯಾವುದೇ ಅಫೆನ್ಸ್ ಮಾಡಿಲ್ಲ. ಹೀಗಾಗಿ ನೋಟಿಸ್ ವಿತ್ಡ್ರಾಗೆ ಆಗ್ರಹಿಸಲು ಚಿಂತನೆ ಮಾಡಿದ್ದೇವೆ, ನಿನ್ನೆಯ ಸಂಪುಟ ಸಭೆಯಲ್ಲಿಯೂ (cabinet meeting) ಇದೇ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ರು.
ಕರ್ನಾಟಕದ ರಾಜ್ಯಪಾಲರು (Karnataka’s governer) ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡ್ತಿದ್ದಾರೆ. ಆ ಮೂಲಕ ಕೇಂದ್ರ ಬಿಜೆಪಿ (BJP) ಸರ್ಕಾರ ರಾಜ್ಯದಲ್ಲಿ ರಾಜಭವನದ ಅಧಿಕಾರ ದರುಪಯೋಗ ಪಡಿಸಿಕೊಂಡು ರಾಜ್ಯ ಸರ್ಕಾರವನ್ನು ಉರುಳಿಸುವ ಹುನ್ನಾರ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು (Congress leaders), ಸಚಿವರು ಆರೋಪಿಸಿದ್ದಾರೆ.