ದರ್ಶನ್ ಗ್ಯಾಂಗ್ ನಿಂದ (Darshan gang) ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Renukaswamy murder case) ಇದುವರೆಗೂ 400 ಕ್ಕೂ ಹೆಚ್ಚು ಪೋನ್ ಕಾಲ್ ಪರಿಶೀಲನೆ ಮಾಡಲಾಗಿದೆ ಎಂಬ ಮಾಹಿತಿ ಲಾಭ್ಯವಾಗಿದೆಕೆ. ಕೃತ್ಯಕ್ಕೂ ಮುನ್ನಾ ಮತ್ತು ಕೃತ್ಯದ ನಂತರ ಆರೋಪಿಗಳು ಮಾಡಿದ್ದ ಪೋನ್ ಕಾಲ್ ಪರಿಶೀಲನೆಗೆ ಒಳಪಡಿಸಲಾಗಿದೆ.

ಕೇವಲ ಪೋನ್ ಕಾಲ್ (Phone calls) ಮಾತ್ರವಲ್ಲ ವಾಟ್ಸಾಫ್ (Whatsapp)ನಲ್ಲಿಯೂ ನೂರಾರು ಕರೆ ಮಾಡಿರುವ ಶಂಕೆಯಿದ್ದು ಕೃತ್ಯಕ್ಕೂ ಮುನ್ನಾ, ಕೃತ್ಯದ ನಂತರ ಪರಸ್ಪರ ಪೋನ್ ನಲ್ಲಿ ಆರೋಪಿಗಳು ಸಾಕಷ್ಟು ಜನರ ಬಳಿ ಮಾತನಾಡಿದ್ದಾರೆ.
ಆರೋಪಿಗಳು ಖುದ್ದು ದರ್ಶನ್ ಜೊತೆಯೂ ಮಾತುಕತೆ ನಡೆಸಿರೋದು ಸಿಡಿಆರ್ ನಲ್ಲಿ (CDR) ಬಹಿರಂಗವಾಗಿದೆ. ಸದ್ಯ ಬಂಧಿತ 17 ಮಂದಿ ಆರೋಪಿಗಳು ಕೃತ್ಯದ ನಂತರ ಇತರೆ ಐವತ್ತಕ್ಕೂ ಹೆಚ್ಚು ಮಂದಿ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.ಕುಟುಂಬಸ್ಥರು,ಆಪ್ತರು,ಸ್ನೇಹಿತರ ಜೊತೆ ಬೇರೆ ಬೇರೆ ವಿಚಾರ ವಿನಿಮಯ ಮಾಡುವ ನಿಟ್ಟಿನಲ್ಲಿ ಮಾತುಕತೆ ನಡೆಸಿದ್ದಾರೆ.
ಸಿಡಿಆರ್ ಆಧಾರದಲ್ಲಿ ಐವತ್ತಕ್ಕೂ ಹೆಚ್ಚು ಜನರನ್ನ ವಿಚಾರಣೆ ಈಗಾಗಲೇ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಜೂನ್ 8 ರಿಂದ ಜೂನ್ 10 ರ ನಡುವೆ 400 ಪೋನ್ ಕಾಲ್ ಡಿಟೇಲ್ಸ್ ಕಲೆ ಹಾಕಿರೋ ಪೊಲೀಸರು ಆ ಪೈಕಿ ಅನುಮಾನ ಬಂದ ಪ್ರತಿಯೊಬ್ಬರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.