ಐಪಿಎಲ್ ಟೂರ್ನಿ ಆರಂಭಕ್ಕೆ ಕೆಲವೇ ದಿನ ಮಾತ್ರ ಬಾಕಿ. ಮಾರ್ಚ್ 28 ರಂದು ಐಪಿಎಲ್ ಟೂರ್ನಿ ಆರಂಭಗೊಳ್ಳಲಿದೆ. ಆರಂಭಿಕ 20 ಪಂದ್ಯಗಳ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಸೇರಿದಂತೆ 10 ಕ್ರೀಡಾಂಗಣದಲ್ಲಿ ಆರಂಭಿಕ ಹಂತದ ಪಂದ್ಯಗಳ ನಡೆಯಲಿದೆ. ವಿರಾಟ್ ಕೊಹ್ಲಿ ಸೇರಿದಂತೆ ಆರ್‌ಸಿಬಿ ಆಟಾಗರರು ಧರಿಸುವ ಅಧಿಕೃತ ಜರ್ಸಿಯನ್ನು ಅಭಿಮಾನಿಗಳು ಖರೀದಿಸಬಹುದು. ಅಧಿಕೃತ ಜರ್ಸಿಯನ್ನು ಆರ್‌ಸಿಬಿ ಫ್ರಾಂಚೈಸಿ ಬಳಿಯಿಂದಲೇ ಖರೀದಿಸಲು ಅಭಿಮಾನಿಗಳಿಗೆ ಅವಕಾಶ ನೀಡಲಾಗಿದೆ.

ಜರ್ಸಿ ಖರೀದಿಸುವುದು ಹೇಗೆ?
ಆರ್‌ಸಿಬಿ ವೆಬ್‌ಸೈಟ್ ಮೂಲಕ ಅಧಿಕೃತ ಜರ್ಸಿ ಖರೀದಿಸಲು ಸಾಧ್ಯವಿದೆ.ಆರ್‌ಸಿಬಿ ವೆಬ್‌ಸೈಟ್ ಓಪನ್ ಮಾಡಿ ಲಾಗಿನ್ ಆಗಬೇಕು.ಶಾಪ್ ಬಟನ್ ಕ್ಲಿಕ್ ಮಾಡಬೇಕು.ಜರ್ಸಿ ಅಥವಾ ಇತರ ಲಭ್ಯವಿರುವ ಉತ್ಪನ್ನಗಳನ್ನು ಆಯ್ಕೆ ಮಾಡಿ.ಹೆಸರು, ವಿಳಾಸ ಸೇರಿದಂತೆ ಇತರ ದಾಖಲೆ ಭರ್ತಿ ಮಾಡಿ.ಮೊತ್ತ ಪಾವತಿ ಮಾಡಿ

ಆರ್‌ಸಿಬಿ ವೆಬ್‌ಸೈಟ್‌ನಲ್ಲಿ ಲಿಸ್ಟ್ ಮಾಡಿರುವ ಅಧಿಕೃತ ಜರ್ಸಿ ಬೆಲೆ 5499 ರೂಪಾಯಿ. ವಿಶೇಷ ಅಂದರೆ ಈ ಜರ್ಸಿ ಮೇಲೆ ನಿಮ್ಮ ಹೆಸರು, ನಿಮ್ಮ ಇಷ್ಟದ ಜರ್ಸಿ ನಂಬರ್ ಬೇಕಾದರೆ ಹಾಕಿಸಿಕೊಳ್ಳಬಹುದು. ಇದಕ್ಕಾಗಿ ಪರ್ಸನಲೈಸ್ ಆಯ್ಕೆ ಕ್ಲಿಕ್ ಮಾಡಿ ಭರ್ತಿ ಮಾಡಬೇಕು. ಈ ರೀತಿ ಮಾಡಲು ಹೆಚ್ಚುವರಿಯಾಗಿ 399 ರೂಪಾಯಿ ನೀಡಬೇಕು.

ಆರ್‌ಸಿಬಿ ಅಧಿಕೃತ ವೆಬ್‌ಸೈಟ್‌ನಲ್ಲಿ ಜರ್ಸಿ XS ಸೈಝ್‌ನಿಂದ ಆರಂಭಗೊಂಡು ಗರಿಷ್ಠ XXL ಸೈಝ್‌ವರೆಗೂ ಲಭ್ಯವಿದೆ. ಹೀಗಾಗಿ ಅಭಿಮಾನಿಗಳು ತಮ್ಮ ಅಳತೆಗೆ ಅನುಗುಣವಾಗಿ ಜರ್ಸಿ ಖರೀದಿಸಲು ಸಾಧ್ಯವಿದೆ. 2026ರ ಹೊಚ್ಚ ಹೊಸ ಜರ್ಸಿ ಒಂದು ವಾರದಲ್ಲಿ ನಿಮ್ಮ ಕೈಸೇರಲಿದೆ.
ಇದನ್ನೂ ಓದಿ






