ರಾಜ್ಯ ರಾಜಕಾರಣದಲ್ಲಿ ಹನಿ ಟ್ರ್ಯಾಪ್ (Honey trap) ಪ್ರಕರಣ ಗದ್ದಲ ಕೋಲಾಹಲ ಎಬ್ಬಿಸಿದೆ.ಯಾವುದೇ ಪಕ್ಷದ ಮಿತಿಯಿಲ್ಲದೆ ಪಕ್ಷಾತೀತವಾಗಿ ಈ ಹನಿ ಟ್ರ್ಯಾಪ್ ವಿರುದ್ಧ ರಾಜಕಾರಣಿಗಳು ಆಕ್ರೋಶ ವ್ಯಕ್ತಪಡಿಸಿದ್ದು ಖುದ್ದು ವಿಧಾನಸಭೆಯಲ್ಲಿ ಈ ಬಗ್ಗೆ ಶಾಸಕರು, ಸಚಿವರು ಉಲ್ಲೇಖಿಸಿದ್ದಾರೆ.

ಈ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ (Satish jarakiholi) ಪ್ರತಿಕ್ರಿಯಿಸಿದ್ದು, ಈ ರೀತಿ ಹನಿಟ್ರ್ಯಾಪ್ ಮಾಡಿ ರಾಜಕೀಯದಲ್ಲಿ ನಿಯಂತ್ರಣ ಸಾಧಿಸುವ ಪ್ರಯತ್ನ ನಡೆದಿದೆ ಅಂತ ಬೆಳಗಾವಿಯಲ್ಲಿ (Belagavi) ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಈ ರೀತಿಯ ಬೆಳವಣಿಗೆಗಳಿಗೆ ವರಿಷ್ಠರು ಕಡಿವಾಣ ಹಾಕಬೇಕು. ಸಚಿವ ಕೆ.ಎನ್.ರಾಜಣ್ಣ (KN Rajanna) ಅವರು ಈ ಬಗ್ಗೆ ಸದನದಲ್ಲಿ ಹೇಳಿದ್ದಾರೆ.ಆದಷ್ಟು ಬೇಗ ದೂರು ಕೊಟ್ಟರೇ ಒಳ್ಳೆಯದು.ಈ ಬಗ್ಗೆ ಉನ್ನತ ತನಿಖೆ ಮಾಡಿ ಇತಿಶ್ರೀ ಹಾಡಬೇಕು ಎಂದಿದ್ದಾರೆ.

ಈ ಹನಿ ಟ್ರ್ಯಾಪ್ ಷಡ್ಯಂತ್ರ ಒಂದು ರೀತಿಯ ಕ್ಯಾನ್ಸರ್ ಇದ್ದಹಾಗೆ.ಈ ಪೈಕಿ ಕೆಲವು ಕೇಸ್ ಗಳು ಹೊರಗೆ ಬಂದಿದೆ. ಆದ್ರೆ ಇನ್ನೂ ಕೆಲವು ಬೆಳಕಿಗೆ ಬಂದಿಲ್ಲ. ಹಲವರು ರಾಜಕಾರಿಣಿಗಳ ಸಿಡಿ ಹೊರ ಬರದೇ ಬ್ಲ್ಯಾಕ್ ಮೇಲ್ ಮಾಡೋ ಯತ್ನವೂ ಆಗಿದೆ ಎಂದು ಹನಿಟ್ರ್ಯಾಪ್ ವಿರುದ್ಧ ಸಚಿವ ಸತೀಶ್ ಜಾರಕಿಹೊಳಿ ಕಿಡಿಕಾರಿದ್ದಾರೆ.