• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪ್ರಭಾಸ್‌ ಜತೆಗೆ ಒಂದಲ್ಲ ಎರಡಲ್ಲ ಮೂರು ಸಿನಿಮಾಗಳನ್ನು ಘೋಷಿಸಿದ ಹೊಂಬಾಳೆ ಫಿಲಂಸ್‌

ಪ್ರತಿಧ್ವನಿ by ಪ್ರತಿಧ್ವನಿ
November 8, 2024
in Top Story, ಇತರೆ / Others, ಕರ್ನಾಟಕ
0
Share on WhatsAppShare on FacebookShare on Telegram

ಸ್ಯಾಂಡಲ್‌ವುಡ್‌ಗೆ ಮಾತ್ರ ಸೀಮಿತವಾಗದ ಹೊಂಬಾಳೆ ಫಿಲಂಸ್‌ ಸಂಸ್ಥೆ ಪರಭಾಷೆ ಸಿನಿಮಾಗಳಿಗೆ ಬಂಡವಾಳ ಹೂಡುವ ಮೂಲಕ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಕೆಜಿಎಫ್‌, ಕೆಜಿಎಫ್‌ ೨, ಕಾಂತಾರ, ಸಲಾರ್‌, ಈಗ ಬಿಡುಗಡೆ ಆಗಿರುವ ಬಘೀರ ಸಿನಿಮಾಗಳೇ ಸಾಕ್ಷಿ ಒದಗಿಸುತ್ತವೆ. ಪ್ಯಾನ್‌ ಇಂಡಿಯಾ ಸಿನಿಮಾಗಳಿಗೆ ಹೊಸ ಮೆರುಗು ನೀಡಿದ್ದೂ ಇದೇ ಹೊಂಬಾಳೆ ಫಿಲಂಸ್‌. ಕಾಂತಾರ ಮೂಲಕ ರಾಷ್ಟ್ರ ಪ್ರಸ್ತಿಯನ್ನೂ ಮುಡಿಗೇರಿಸಿಕೊಂಡಿದೆ ಹೊಂಬಾಳೆ ಫಿಲಂಸ್‌. ಅದರಂತೆ, ಈ ವರೆಗಿನ ಸಿನಿಮಾಗಳು ಕೇವಲ ಒಂದು ಭಾಷೆಗೆ ಸೀಮಿತವಾಗಿಲ್ಲ. ಎಲ್ಲ ಭಾಷೆಗಳಿಗೆ ಸಲ್ಲುವ ಸಿನಿಮಾಗಳನ್ನು ನೀಡುತ್ತಿದೆ. ಅದರಂತೆ, ಸಲಾರ್‌ ಪಾರ್ಟ್‌ ೨ ಮತ್ತು ಕಾಂತಾರ ಪಾರ್ಟ್‌ ೨ ಶೂಟಿಂಗ್‌ ನಡುವೆಯೇ ಇದೀಗ ಮತ್ತೊಂದು ಮಹೋನ್ನತ ಸಿನಿಮಾ ಬಗ್ಗೆ ದೊಡ್ಡ ಅಪ್‌ಡೇಟ್‌ ನೀಡಿದ್ದಾರೆ ಹೊಂಬಾಳೆ ಫಿಲಂಸ್‌ನ ವಿಜಯ್‌ ಕಿರಗಂದೂರು.

ADVERTISEMENT

ಹೌದು, ಇದೀಗ ಸಲಾರ್‌ ಪಾರ್ಟ್‌ ೨ ಸೇರಿ ಇನ್ನೂ ಎರಡು ಅಂದರೆ ಒಟ್ಟು ಮೂರು ಸಿ ಸಿನಿಮಾಗಳೊಂದಿಗೆ ಪ್ರಭಾಸ್ ಜತೆಗೆ ಹೊಂಬಾಳೆ ಫಿಲಂ ಕೈ ಜೋಡಿಸುತ್ತಿದೆ. ಈಗಾಗಲೇ ಸಲಾರ್‌ ೧ ಬಿಡುಗಡೆ ಆಗಿದೆ. ಪಾರ್ಟ್‌ ೨ ಕೆಲಸಗಳು ನಡೆಯುತ್ತಿವೆ. ಇದೀಗ ಇದೇ ಪ್ರಭಾಸ್‌ ಜತೆಗೆ ಇನ್ನೂ ಎರಡು ಸಿನಿಮಾ ಮಾಡಲು ಹೊಂಬಾಳೆ ನಿರ್ಧರಿಸಿದೆ. ದೊಡ್ಡ ಪರದೆಯ ಮೇಲೆ ಅಷ್ಟೇ ದೊಡ್ಡ ಸದ್ದು ಮಾಡಲು ಈ ಜೋಡಿ ಮತ್ತೆ ಸಿದ್ಧವಾಗಿ ನಿಂತಿದೆ. ಬಹುಕೋಟಿ ಬಜೆಟ್‌ನಲ್ಲಿ, ದೊಡ್ಡ ಕ್ಯಾನ್ವಾಸ್‌ನಲ್ಲಿಯೇ ಈ ಸಿನಿಮಾಗಳು ನಿರ್ಮಾಣವಾಗಲಿವೆ.

ಭಾರತೀಯ ಚಿತ್ರರಂಗದಲ್ಲಿ ಹೆಚ್ಚು ಬೇಡಿಕೆಯಿರುವ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರಾದ ಪ್ರಭಾಸ್, ಸದ್ಯ ಸಲಾರ್ 2, ರಾಜಾ ಸಾಬ್, ಸ್ಪಿರಿಟ್, ಕಲ್ಕಿ 2 ಮತ್ತು ಫೌಜಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗಲೇ ಇದೇ ಲಿಸ್ಟ್‌ಗೆ ಇನ್ನೂ ಎರಡು ಸಿನಿಮಾಗಳು ಸೇರ್ಪಡೆಯಾಗಲಿದೆ. ಅದನ್ನು ಹೊಂಬಾಳೆ ಫಿಲಂಸ್‌ ನಿರ್ಮಾಣ ಮಾಡಲಿದೆ. ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಮಾರುಕಟ್ಟೆಯಲ್ಲಿ ತಮ್ಮದೇ ಆದ ದೊಡ್ಡ ಸಾಮ್ರಾಜ್ಯವನ್ನೇ ನಿರ್ಮಿಸಿಕೊಂಡಿದ್ದಾರೆ ಪ್ರಭಾಸ್‌. ಈಗ ಇಂಥ ನಟನ ಜತೆಗೆ ಒಟ್ಟು ಮೂರು ಸಿನಿಮಾಗಳನ್ನು ನಿರ್ಮಿಸಲು ಹೊಂಬಾಳೆ ಸಂಸ್ಥೆ ಸನ್ನದ್ಧವಾಗಿದೆ.

ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರು ಈ ಸಹಯೋಗದ ಕುರಿತು ಪ್ರತಿಕ್ರಿಯಿಸಿದ್ದಾರೆ. “ಹೊಂಬಾಳೆ ಫಿಲಂಸ್‌ ಮೂಲಕ ನಾವು ಗಡಿಯನ್ನು ಮೀರಿದ ಕಥೆ ಹೇಳುವ ಶಕ್ತಿಯನ್ನು ನಂಬುತ್ತೇವೆ. ಪ್ರಭಾಸ್ ಅವರೊಂದಿಗಿನ ನಮ್ಮ ಸಹಯೋಗವು ಮತ್ತೊಂದು ಹೊಸ ಹೆಜ್ಜೆ. ಅದು ಮುಂದಿನ ಪೀಳಿಗೆಗೆ ಸ್ಫೂರ್ತಿ ಮತ್ತು ಮನರಂಜನೆಯನ್ನು ನೀಡುತ್ತದೆ” ಎಂದಿದ್ದಾರೆ.

ಸಲಾರ್ ಭಾಗ 2, ಕಾಂತಾರ 2 ಮತ್ತು ಕೆಜಿಎಫ್ ಅಧ್ಯಾಯ 3 ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ತೆರೆದುಕೊಳ್ಳಲಿವೆ. ಜಾಗತಿಕವಾಗಿ ಪ್ರತಿಧ್ವನಿಸುವ ಅದ್ಭುತ ಚಲನಚಿತ್ರವನ್ನು ರಚಿಸುವ ಬದ್ಧತೆಯನ್ನು ಹೊಂಬಾಳೆ ಫಿಲಂಸ್‌ ಈ ಮೂಲಕ ಎತ್ತಿ ತೋರಿಸಲಿದೆ. ಇದೀಗ ಪ್ರಭಾಸ್‌ ಜತೆಗಿನ ಮತ್ತೊಂದು ಮಹತ್ವಾಕಾಂಕ್ಷೆಯ ಹೊಸ ಹೆಜ್ಜೆ ಅಭಿಮಾನಿಗಳು ಮತ್ತು ಸಿನಿಮೋದ್ಯಮದಲ್ಲಿ ಅಪಾರ ನಿರೀಕ್ಷೆಯನ್ನು ಹುಟ್ಟುಹಾಕಲಿದೆ.

ಕನ್ನಡದಲ್ಲಿ ಕೆಜಿಎಫ್ ಮತ್ತು ಕಾಂತಾರ, ಬಘೀರ, ತೆಲುಗಿನಲ್ಲಿ ಸಲಾರ್, ತಮಿಳಿನಲ್ಲಿ ರಘು ತಾತಾ ಮತ್ತು ಮಲಯಾಳಂನಲ್ಲಿ ಫಹಾದ್ ಫಾಸಿಲ್ ನಾಯಕನಾಗಿ ನಟಿಸಸಿದ ಧೂಮಮ್ ಸಿನಿಮಾಗಳ ಮೂಲಕ ಸಿನಿ ಮಾರುಕಟ್ಟೆಗಳಲ್ಲಿ ಹೊಂಬಾಳೆ ಫಿಲಂಸ್‌ ತನ್ನದೇ ಆದ ಅಲೆಯನ್ನು ಸೃಷ್ಟಿಸಿದೆ. ಈ ಸಾಹಸಕ್ಕೆ ಇದೀಗ ಪ್ರಭಾಸ್- ಹೊಂಬಾಳೆ ಪಾಲುದಾರಿಕೆ, ಭಾರತೀಯ ಚಿತ್ರರಂಗದಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಲಿದೆ. ಈ ಮೂಲಕ ಎಲ್ಲೆಡೆ ಸಲ್ಲುವ ಕಥೆಯ ಜತೆಗೆ ಹೊಂಬಾಳೆ ಮತ್ತೊಮ್ಮೆ ಆಗಮಿಸುತ್ತಿದೆ. ಈ ಚಿತ್ರದ ನಿರ್ದೇಶಕರು ಯಾರು, ಪಾತ್ರವರ್ಗದ ಮಾಹಿತಿ ಮುಂದಿನ ದಿನಗಳಲ್ಲಿ ಹೊರಬೀಳಲಿದೆ.

Tags: but three movies with Prabhas.Hombale FilmskantaraKGFkgf 2Salar Part 2 and Kantara Part 2sandalwoodTwoVijay Kiraganduru .
Previous Post

ಕರಾಟೆ ತರಗತಿಯಲ್ಲಿ ‘ವಿದ್ಯಾಪತಿ’ಯ ತಲೆಹರಟೆ..ನಾಗಭೂಷಣ್ ಸಿನಿಮಾ ಹಾಡಿಗೆ‌ ಕಂಠ ಕುಣಿಸಿದ ಜಗ್ಗೇಶ್

Next Post

ಭಾರತದ ಮ್ಯಾಪ್ ಬದಲಿಸಿದ ಕಾಂಗ್ರೆಸ್ – POK, ಅಕ್ಸಾಯ್ ಚಿನ್​ ಕೈಬಿಟ್ಟು ವಿಕೃತಿ ! ಜನರ ಛೀಮಾರಿ ನಂತರ ಅಲರ್ಟ್ ಆದ ನಾಯಕರು ! 

Related Posts

ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ
Top Story

ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

by ಪ್ರತಿಧ್ವನಿ
April 10, 2026
0

ಐಟಿ ದಾಳಿ ನಡೆಯುತ್ತಿರುವ ಸಂದರ್ಭದಲ್ಲೇ ಆತ್ಮಹತ್ಯೆಗೆ ಶರಣಾಗಿ ಭಾರೀ ಚರ್ಚೆಗೆ ಕಾರಣವಾಗಿದ್ದ ಕಾನ್ಫಿಡೆಂಟ್ ಗ್ರೂಪ್ ಸಂಸ್ಥೆಯ ಮುಖ್ಯಸ್ಥ ಸಿಜೆ ರಾಯ್ ಪ್ರಕರಣದ ತನಿಖೆ ಇದೀಗ ಅಂತಿಮ ಹಂತ...

Read moreDetails
ವಿದ್ಯಾರ್ಥಿಗಳ ದುಡುಕಿನ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ

ಇನ್ನು ಪಿಯುಸಿ ಅಂಕಪಟ್ಟಿ ಮುಂದಿನ ವರ್ಷದಿಂದ  ಹೀಗಿರಲಿದೆ ! ಮಧು ಬಂಗಾರಪ್ಪ ಮಹತ್ವದ ಹೇಳಿಕೆ

April 10, 2026
ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ

ತಾಯಿಯಿಲ್ಲದ ನೋವಿನ ನಡುವೆ ಅಪ್ರತಿಮ ಸಾಧನೆ: ರಾಜ್ಯಕ್ಕೆ ಪ್ರಥಮ ಬಂದ ದಿಶಾ!

April 9, 2026
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

April 9, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
Next Post
ಭಾರತದ ಮ್ಯಾಪ್ ಬದಲಿಸಿದ ಕಾಂಗ್ರೆಸ್ – POK, ಅಕ್ಸಾಯ್ ಚಿನ್​ ಕೈಬಿಟ್ಟು ವಿಕೃತಿ ! ಜನರ ಛೀಮಾರಿ ನಂತರ ಅಲರ್ಟ್ ಆದ ನಾಯಕರು ! 

ಭಾರತದ ಮ್ಯಾಪ್ ಬದಲಿಸಿದ ಕಾಂಗ್ರೆಸ್ - POK, ಅಕ್ಸಾಯ್ ಚಿನ್​ ಕೈಬಿಟ್ಟು ವಿಕೃತಿ ! ಜನರ ಛೀಮಾರಿ ನಂತರ ಅಲರ್ಟ್ ಆದ ನಾಯಕರು ! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada