
ಹಿಜ್ಬುಲ್ಲಾ ಕಮ್ಯಾಂಡರ್ ಹಸನ್ ನಸ್ರಲ್ಲಾ (Hasan Nasrallah)ಹತ್ಯೆಯ ಬೆನ್ನಲ್ಲೇ ನೂತನ ಕಮ್ಯಾಂಡರ್ ಆಗಿ ಆಯ್ಕೆಯಾಗಿದ್ದ ಹಸನ್ ಖಲೀಲ್ ಯಾಸಿನ್ ರನ್ನು ಅಧಿಕಾರ ಸ್ವೀಕರಿಸಿದ 9 ಗಂಟೆಯಲ್ಲಿ ಇಸ್ರೇಲ್ (Israel)ಹೊಡೆದುರುಳಿಸಿದ್ದು, ಹೊಸ ರೆಕಾರ್ಡ್ ಬರೆದಿದ್ದಾರೆ.

ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) (IDF)ಬೈರುತ್‌ನ ದಹೀಹ್ ಜಿಲ್ಲೆಯಲ್ಲಿ ಶನಿವಾರ ನಡೆದ ಹೆಚ್ಚುವರಿ ನಿಖರ ದಾಳಿಯಲ್ಲಿ ಹಿರಿಯ ಹಿಜ್ಬುಲ್ಲಾ ಗುಪ್ತಚರ ಶ್ರೇಣಿಯ ಭಯೋತ್ಪಾದಕ ಹಸನ್ ಖಲೀಲ್ ಯಾಸಿನ್‌ನನ್ನು ಹತ್ಯೆ ಮಾಡಲಾಗಿದೆ ಎಂದು ಎಂದು ಮಿಲಿಟರಿ ವರದಿ ಮಾಡಿದೆ.
ಹಸನ್ ನಸ್ರಲ್ಲಾ ಗುರಿಯಾಗಿಸಿ ಪೂರ್ವ ಹಾಗೂ ದಕ್ಷಿಣ ಲೆಬನಾನ್‌ನ ಹಲವು ಭಾಗಗಳ ಮೇಲೆ ಇಸ್ರೇಲ್ ಸೇನೆ ಮುಗಿಬಿದ್ದಿತ್ತು. ಹೆಜ್ಬುಲ್ಲಾ ಉಗ್ರರು ಉತ್ತರ ಇಸ್ರೇಲ್ ಮೇಲೆ ರಾಕೆಟ್ ದಾಳಿ ಆರಂಭಿಸಿದ ಬಳಿಕ ಪ್ರತೀಕಾರದಕ್ಕೆ ಇಳಿಸಿದ್ದ ಇಸ್ರೇಲ್ ಸರಣಿ ದಾಳಿಗಳನ್ನು ಆರಂಭಿಸಿತ್ತು.
ಇಸ್ರೇಲ್ ಯುದ್ಧ ವಿಮಾನಗಳು ಹೆಜ್ಬುಲ್ಲಾ ಪ್ರಾಬಲ್ಯದ ಬೈರುತ್ ದಕ್ಷಿಣ ಭಾಗದ ಮೇಲೆ ರಾತ್ರಿಯೆಲ್ಲಾ ಬಾಂಬ್‌ಗಳ ಸುರಿಮಳೆ ಸುರಿಸಿದ್ದವು. ಹಲವು ಮನೆಗಳನ್ನು ನೆಲಸಮ ಮಾಡಿದ್ದವು. ಈ ದಾಳಿಯಲ್ಲಿ ನಸ್ರಲ್ಲಾ ಸಾವನ್ನಪ್ಪಿದ್ದರು.
ಇವರ ಬೆನ್ನಲ್ಲೇ ಕಮ್ಯಾಂಡರ್ ಆಗಿ ಹಸನ್ ಖಲೀಲ್ ಯಾಸಿನ್ ಅಧಿಕಾರ ಸ್ವೀಕರಿಸಿದರು. ಇದಾದ ಕೇವಲ 9 ಗಂಟೆಯಲ್ಲಿ ಇಸ್ರೇಲ್ ಪಡೆ ನೂತನ ಕಮ್ಯಾಂಡರ್ ಅನ್ನು ಹತ್ಯೆ ಮಾಡಿದ್ದು, ಈ ಮೂಲಕ ಬಾಯೋತ್ಪದಕ ಸಂಘಟನೆಯ ಮುಖ್ಯಸ್ಥರಾಗಿ ಕಡಿಮೆ ಅವಧಿಯಲ್ಲಿ ಸಾವನ್ನಪ್ಪಿರುವ ಕಮ್ಯಾಂಡರ್ ಎಂಬ ದಾಖಲೆಯೊಂದನ್ನು ಹಸನ್ ಬರೆದಿದ್ದಾರೆ.
ಇದೀಗ ಇಸ್ರೇಲ್ ಬೈರುತ್‌ನಲ್ಲಿರುವ ಹಿಜ್ಬುಲ್ಲಾ ಪ್ರಧಾನ ಕಚೇರಿಯ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾಹ್ ಅವರ ಪುತ್ರಿ ಜೈನಾಬ್ ನಸ್ರಲ್ಲಾಹ್ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.ಜೈನಾಬ್ ಸಾವಿನ ಬಗ್ಗೆ ಹೆಜ್ಬೊಲ್ಲಾ ಅಥವಾ ಲೆಬನಾನಿನ ಅಧಿಕಾರಿಗಳು ಯಾವುದೇ ಅಧಿಕೃತ ದೃಢೀಕರಣವನ್ನು ನೀಡಿಲ್ಲ.




