ರಾಜ್ಯದಾದ್ಯಂತ ಕಳೆದ ಕೆಲ ದಿನಗಳಿಂದ ಮಳೆರಾಯ ಎಡಬಿಡದೆ ಸುರಿಯುತ್ತಿದ್ದು ಸೃಷ್ಟಿಸಿರುವ ಅವಾಂತರ ಒಂದ್ ಎರಡಲ್ಲ. ಇತ್ತ ಹೊಸಪೇಟೆಯಲ್ಲಿ ಮಳೆ ನೀರು ಮನೆಗಳಿಗೆ ನುಗಿದ್ದು ಅಪಾರ ಪ್ರಮಾಣದ ಹಾನಿ ಉಂಟಾಗಿದೆ.
ನಗರದ ಬಸವ ಕಾಲುವೆ ಬಳಿ ಹಲವಾರು ಮನೆಗಳಿಗೆ ಮಳೆ ನೀರು ನುಗಿದ್ದು ಇದರ ಜೊತೆಗೆ ಕೊಳಚೆ ನೀರು ಸಹ ಹರಿದಿರುವುದರಿಂದ ದುರ್ನಾತ ಬೀರುತ್ತಿದೆ.

ಇತ್ತ ಮಳೆರಾಯ ಎಂದಿನಂತೆ ಅವಾಂತರ ಸೃಷ್ಟಿಸಿದ್ದು ರಸ್ತೆಬದಿ ಮಾರಾಟಕ್ಕೆ ಇಟ್ಟಿದ್ದ ಗಣಪನ ಮೂರ್ತಿಗಳು ಮಳೆ ನೀರಲ್ಲಿ ಕೊಚ್ಚಿಹೋಗಿದ್ದು ಎಲ್ಲಾ ಮೂರ್ತಿ ಮಾರಟಗಾರರು ತಲೆ ಮೇಲೆ ಕೈ ಹೊತ್ತುಕೊಂಡು ಮಳೆರಾಯನಿಗೆ ಹಿಡಿ ಹಿಡಿ ಶಾಪ ಹಾಕುತ್ತಿದ್ದಾರೆ.
ತಾಲ್ಲೂಕಿನ ಮರಿಯಮ್ಮನಹಳ್ಳಿಯಲ್ಲಿ ಅತ್ಯಧಿಕ ಮಳೆಯಾಗಿದ್ದು 13 ಸೆಂ.ಮೀ ಮಳೆಯಾಗಿದ್ದು ಇಲ್ಲಿವರೆಗಿನ ಗರಿಷ್ಠ ದಾಖಲೆಯಾಗಿದೆ. ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಹಾಗೂ ನಗರಸಭೆ ಪೌರಯುಕ್ತರು ಬೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.