ಮೈಸೂರು : ಬಾಲಕಿಯ (11) ಹೊಟ್ಟೆಯಲ್ಲಿ ಅರ್ಧ ಕೆಜಿಯಷ್ಟು ತಲೆಕೂದಲಿನ ಗೆಡ್ಡೆ ಪತ್ತೆಯಾಗಿದ್ದು ಯಶಸ್ವಿ ಶಸ್ತ್ರ ಚಿಕಿತ್ಸೆಯ ಮೂಲಕ ವೈದ್ಯರು ಹೊರತೆಗೆದಿದ್ದಾರೆ .
8ತಿಂಗಳಿಂದ ಹೊಟ್ಟೆ ನೋವು ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿಯನ್ನು ಹಲವು ಬಾರಿ ಆಸ್ಪತ್ರೆಗೆ ಕರೆ ತರಲಾಗಿತ್ತು . ಆದರೂ ವೈದ್ಯರಿಗೆ ಹೊಟ್ಟೆನೋವು ಸಮಸ್ಯೆ ಪತ್ತೆ ಹಚ್ಚಲು ಸಾಧ್ಯವಾಗಿರಲ್ಲಿ .
ನೋವು ತಾಳಲಾರದೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಎಂಡೋಸ್ಕೋಪಿ ನಡೆಸಿದ್ದು ಹೊಟ್ಟೆಯಲ್ಲಿ ಕೂದಲಿನ ಗೆಡ್ಡೆ ಇರುವುದು ಗೊತ್ತಾಗಿದೆ . ಆಹಾರ ಪದಾರ್ಥಗಳೊಂದಿಗೆ ಸೇರಿ ಅರ್ಧ ಕೆಜಿ ಕೂದಲಿನ ಗೆಡ್ಡೆಯನ್ನು ಶಾಸ್ತ್ರ ಚಿಕಿತ್ಸೆಯ ಮೂಲಕ ಹೊರತೆಗೆದಿದ್ದಾರೆ . ಈಗ ಬಾಲಕಿ ಹೊಟ್ಟೆ ನೋವಿನಿಂದ ಮುಕ್ತಳಾಗಿದ್ದಾಳೆ .
ಬಾಲಕಿ ಜೊತೆ ಆಪ್ತ ಸಮಾಲೋಚನೆ ನಡೆಸಲಾಗಿದೆ . ಸಂದರ್ಭದಲ್ಲಿ ಆಕೆ ತಾನು ಒತ್ತಡದ ಸಂದರ್ಭದಲ್ಲಿ ಕೂದಲು ಕೀಳುವುದು ಮತ್ತು ಅದನ್ನು ತಿನ್ನುವ ಅಭ್ಯಾಸ ಹೊಂದಿದ್ದೆ ಎಂದು ಹೇಳಿದ್ದಾಳೆ. ಕಳೆದ ಎರಡು ವರ್ಷಗಳಿಂದ ಆಕೆ ಇದೆ ರೀತಿ ಕೂದಲನ್ನು ತಿನ್ನುತ್ತಿದ್ದಳಂತೆ .