ಪ್ರಿಯಕರನಿಂದಲೇ ಪ್ರಿಯತಮೆಯನ್ನು ಬರ್ಬರವಾಗಿ ಹ* ಮಾಡಿರುವಂತಹ ಘಟನೆ ಪೂರ್ಣ ಪ್ರಜ್ಞಾ ಲೇಔಟ್ನ ಹೋಟೆಲ್ ರೂಮ್ನಲ್ಲಿ ನಡೆದಿದೆ. 17 ಬಾರಿ ದೇಹದ ವಿವಿಧ ಕಡೆ ಚಾಕುವಿನಿಂದ ಇರಿದು ಕೊ ** ಮಾಡಲಾಗಿದೆ.

ಟೆಕ್ಕಿ ಯಶಸ್ ಎಂಬಾತನಿಂದ ಹರಿಣಿ (36) ಹ** ಮಾಡಲಾಗಿದೆ. ಮೃತ ಹರಿಣಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಆದರೂ ಯಶಸ್ ಜತೆ ಅನೈತಿಕ ಸಂಬಂಧ ಹೊಂದಿದ್ದರು. ಸದ್ಯ ಸುಬ್ರಹ್ಮಣ್ಯಪುರ ಠಾಣೆಯ ಪೊಲೀಸರಿಂದ ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ.

ನಡೆದಿದ್ದಾದರು ಏನು?
ಹರಿಣಿ ಇದ್ದ ಏರಿಯಾ ಜಾತ್ರೆಗೆ ಯಶಸ್ ಹೋಗಿದ್ದ. ಈ ವೇಳೆ ಹರಿಣಿ ಪರಿಚಯವಾಗಿ ಫೋನ್ ನಂಬರ್ ಪರಸ್ಪರ ಪಡೆದ ಬಳಿಕ ಸ್ನೇಹ ಬೆಳೆದು ಚಾಟಿಂಗ್, ಡೇಟಿಂಗ್, ಸುತ್ತಾಟ ಮಾಡಿ ಜೊತೆಗೆ ಕೆಲವು ಸಲ ಇಬ್ಬರು ಲೈಂಗಿಕ ಸಂಪರ್ಕ ಕೂಡ ಬೆಳೆಸಿದ್ದರು. ಈ ವೇಳೆ ಪತಿ ದಾಸೇಗೌಡನಿಗೆ ಪತ್ನಿಯ ಅನೈತಿಕ ಸಂಬಂಧ ಗೊತ್ತಾಗಿತ್ತು. ಹರಿಣಿ ಫೋನ್ ಕಿತ್ತುಕೊಂಡು ಮನೆಯಲ್ಲೇ ಕೂಡಿ ಹಾಕಿದ್ದರು.

ಕೆಲವು ತಿಂಗಳ ನಂತರ ಮತ್ತೆ ಹೊರ ಬಂದು ಯಶಸ್ ಸಂಪರ್ಕಿಸಿದ್ದಾರೆ. ಹರಿಣಿ ಸಂಪರ್ಕಕ್ಕೆ ಸಿಗದೇ ಹುಚ್ಚನಂತೆ ಆಗಿದ್ದ ಯಶಸ್ ಸಿಕ್ಕರೆ ಸಾ**ಸಲು ನಿರ್ಧರಿಸಿ ಕೊ** ಮಾಡಲು ಚಾಕು ಕೂಡ ಖರೀದಿಸಿದ್ದ.
ಜೂನ್ 6ರಂದು ಮಾತುಕತೆ ನಡೆಸಿ ಇಬ್ಬರು ಹೋಟೆಲ್ಗೆ ಹೋಗಿದ್ದರು. ರಾಯಲ್ಸ್ ಹೋಟೆಲ್ನಲ್ಲಿ ರೂಮ್ ಬುಕ್ ಮಾಡಿ ಲೈಂಗಿಕ ಸಂಪರ್ಕ ಬೆಳೆಸಿದ ಬಳಿಕ ಚಾಕುವಿನಿಂದ ಇರಿದು ಹರಿಣಿಯನ್ನು ಹ** ಮಾಡಿದ್ದಾನೆ. ವಿಷಯ ತಿಳಿದು ಹೋಟೆಲ್ಗೆ ಭೇಟಿ ನೀಡಿದ್ದ ಸುಬ್ರಹ್ಮಣ್ಯಪುರ ಪೊಲೀಸರು, ಬಳಿಕ ಎಫ್ಎಸ್ಎಲ್ ತಂಡ ಕರೆಸಿ ಎಲ್ಲಾ ಸಾಕ್ಷ್ಯ ಸಂಗ್ರಹಿಸಿದ್ದಾರೆ. ಇತ್ತ ಕೊ** ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಹರಿಣಿ ಅವೈಡ್ ಮಾಡಿದ್ದಕ್ಕೆ ಕೊ** ಮಾಡಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

ವಿವಾಹಿತ ಹರಿಣಿ (36) ಕೊ**ಯಾದ ಮಹಿಳೆ, ಯಶಸ್ (25) ಆರೋಪಿ ಆಗಿದ್ದಾರೆ. ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಯಶಸ್ ಹಾಗೂ ಇಬ್ಬರು ಮಕ್ಕಳ ತಾಯಿ ಹರಿಣಿ ಇಬ್ಬರೂ ಕೆಂಗೇರಿ ನಿವಾಸಿಗಳು. ಆರೋಪಿ ಯಶಸ್ ನಿನ್ನ ಜೊತೆ ಮಾತಾಡಬೇಕು ಬಾ ಎಂದು ಕರೆದು ಚಾಕುವಿನಿಂದ ಇರಿದು ಕೊ* ಮಾಡಿದ್ದಾನೆ. ಮದುವೆಯಾಗಿದ್ದ ಹರಿಣಿಗೆ ಯಶಸ್ ಜಾತ್ರೆಯಲ್ಲಿ ಪರಿಚಿತನಾಗಿದ್ದ. ಹರಿಣಿ, ಯಶಸ್ ಸ್ನೇಹಿತನ ಸಂಬಂಧಿಯಾಗಿದ್ದರು. ಕೆಲ ತಿಂಗಳುಗಳಿಂದ ಹರಿಣಿ, ಯಶಸ್ ಮಧ್ಯೆ ಒಡನಾಟ ಹೆಚ್ಚಾಗಿತ್ತು. ಇದೇ ವಿಚಾರಕ್ಕೆ ಹರಿಣಿ ಹಾಗೂ ಯಶಸ್ ಮನೆಯಲ್ಲಿ ಗಲಾಟೆಯೂ ಆಗಿತ್ತು. ಇದರಿಂದ ಹರಿಣಿಯು ಯಶಸ್‌ನಿಂದ ಅಂತರ ಕಾಯ್ದುಕೊಂಡಿದ್ದಳು. ಒಟ್ಟಿನಲ್ಲಿ ಗಂಡ ಮಕ್ಕಳ ಜತೆ ಚೆನ್ನಾಗಿದ್ದವಳು ಪರ ಪುರಷನ ಸ್ನೇಹ ಮಾಡಿ ಇದೀಗ ದುರಂತ ಅಂತ್ಯ ಕಂಡಿದ್ದಾಳೆ.