ಹಾಸನ; ಬೆಳಗಿಹಳ್ಳಿ ಗೇಟ್ ಬಳಿ ಬೈಕ್ ಮತ್ತು ಕಾರು ನಡುವೆ ನಡೆದ ಅಪಘಾತದಲ್ಲಿ ಮೃತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ಅಪಘಾತದಲ್ಲಿ ಸುನಿಲ್ (23) ಮತ್ತು ಪತ್ನಿ ದಿವ್ಯಾ (23) ಸ್ಥಳದಲ್ಲೇ ಮೃತಪಟ್ಟಿದ್ದರು.
ಎಂಟು ವರ್ಷದ ಮಗ ಅಜಿತ್ ಮತ್ತು ಪುಟ್ಟ ಮಗಳು ಗಾಯಗೊಂಡಿದ್ದರು.ಇಬ್ಬರು ಮಕ್ಕಳನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಗಾಯಗೊಂಡಿದ್ದ ಎಂಟು ವರ್ಷದ ಬಾಲಕ ಅಜಿತ್ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಡಿದ್ದಾನೆ.ಅಪಘಾತದಲ್ಲಿ ಗಾಯಗೊಂಡಿದ್ದ ಮೃತ ದಂಪತಿಯ ಪುಟ್ಟ ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.