ಕಳೆದ ರಾತ್ರಿ ಬೆಂಗಳೂರಿನಲ್ಲಿ (Bangalore) ವರುಣ ಆರ್ಭಟಿಸಿದ್ದಾನೆ. ನಗರದ ಹಲವು ಭಾಗಗಳಲ್ಲಿ ಮಳೆಯಾಗಿದ್ದು, ಕೆಲವು ಕಡೆಗಳಲ್ಲಿ ಮಧ್ಯ ರಾತ್ರಿಯವರೆಗೂ ಮಳೆಯಾಗಿದೆ. ವ್ಯಾಪಕ ಮಳೆಯಿಂದ ರಾಜಧಾನಿಯ ಅಲ್ಲಲ್ಲಿ ಒಂದಷ್ಟು ತೊಂದರೆಗಳೂ ಉಂಟಾಗಿವೆ.

ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ನೀರು ನಿಂತಿದ್ದು, ಟ್ರಾಫಿಕ್ ಜಾಮ್ (Traffi jam) ಉಂಟಾಗಿ, ಬೈಕ್ (Bike) ಸವಾರರು ಪರದಾಡುವ ಸ್ಥಿತಿ ಹಲವೆಡೆ ನಿರ್ಮಾಣವಾಗಿತ್ತು. ನೃಪತುಂಗ ರಸ್ತೆಯಲ್ಲಿ (Nrupatunga road) ರಾತ್ರಿ 11:45 ಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮುಂದೆ ಬೃಹತ್ ಮರದ ಕೊಂಬೆ ಧರೆಗುರುಳಿದೆ. ಪರಿಣಾಮ ಕೆಆರ್ ವೃತ್ತದಿಂದ (KR Ircle) ಸುಮಾರು 5 ಕಿಲೋ ಮೀಟರ್ ವರೆಗೂ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಪರದಾಡಿದ್ದಾರೆ.

ಇನ್ನೂ ಟ್ರಾಫಿಕ್‌ನಲ್ಲಿ ಸಿಲುಕಿದ ಆ್ಯಂಬುಲೆನ್ಸ್ (Ambulance) ಸುಮಾರು 30 ನಿಮಿಷಗಳ ಕಾಲ ನಿಂತಲ್ಲೇ ನಿಂತು ಆ್ಯಂಬುಲೆನ್ಸ್‌ನಲ್ಲಿದ್ದ ರೋಗಿ ಪರದಾಡಿದ್ರು. ಎಷ್ಟೊತ್ತು ಕಾದ್ರೂ ಬಿಬಿಎಂಪಿ (BBMP) ಸಿಬ್ಬಂದಿ ಮರ ತೆರವಿಗಾಗಿ ಬಾರದ ಕಾರಣ, ಪೊಲೀಸ್ ಪೇದೆಗಳೇ ಮುಂದೆ ಬಂದು, ಸಾರ್ವಜನಿಕರ ಸಹಾಯ ಕೇಳಿ ಬೃಹತ್ ಕೊಂಬೆ ತೆರವುಗೊಳಿಸಿದ್ದಾರೆ






