• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, November 9, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪೊಲೀಸ್ ಆಯುಕ್ತರ ಕಚೇರಿ ಎದುರು ಧರಣಿ ಕೈಬಿಟ್ಟ ಹೆಚ್.ಡಿ. ಕುಮಾರಸ್ವಾಮಿ : ಸರ್ಕಾರಕ್ಕೆ 2 ದಿನಗಳ ಗಡುವು | H. D. Kumaraswamy

ಪ್ರತಿಧ್ವನಿ by ಪ್ರತಿಧ್ವನಿ
October 15, 2026
in Top Story, ಕರ್ನಾಟಕ, ರಾಜಕೀಯ
0
H. D. Kumaraswamy calls off sit-in protest in front of Police Commissioner's office
Share on WhatsAppShare on FacebookShare on Telegram

ಬೆಂಗಳೂರು :  ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (H. D. Kumaraswamy) ಅವರು ನಗರ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ನಡೆಸುತ್ತಿದ್ದ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿರುವ ಅವರು, ಸರ್ಕಾರಕ್ಕೆ ಹಾಗೂ ಪೊಲೀಸ್ ಇಲಾಖೆಗೆ ಎರಡು ದಿನಗಳ ಗಡುವು ನೀಡಿದ್ದಾರೆ.

ADVERTISEMENT

ಬೆಳಗ್ಗೆ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರ್ಕಾರ ಹಾಗೂ ಗೃಹ ಸಚಿವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ ಅವರು, ನಂತರ ನೇರವಾಗಿ ನಗರ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿದರು. ಜೆಡಿಎಸ್ ಸಾಮಾಜಿಕ ಜಾಲತಾಣ ವಿಭಾಗದ ಅಮಾಯಕ ಕಾರ್ಯಕರ್ತರನ್ನು ವಿಚಾರಣೆ ನಡೆಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಸಾಧ್ಯವಿದ್ದರೆ ತನ್ನನ್ನೇ ವಿಚಾರಣೆಗೆ ಒಳಪಡಿಸಲಿ ಎಂದು ಸವಾಲು ಹಾಕಿ ಕಮಿಷನರ್ ಕಚೇರಿಯ ಮುಂಭಾಗವೇ ಸುಮಾರು ಎರಡು ಗಂಟೆಗಳ ಕಾಲ ಧರಣಿ ಕುಳಿತರು.

Shashi Hulikuntemutt vs v somanna  : ತುಮಕೂರಿನಲ್ಲಿ ವಿ ಸೋಮಣ್ಣ ಎದುರೇ ಗಲಾಟೆ ಗದ್ದಲ..! #pratidhvani #mlc

ಸ್ಟಿಂಗ್ ಆಪರೇಷನ್ ನಡೆಸಿದ ಪ್ರಮುಖ ಕಿಂಗ್‌ಪಿನ್‌ಗಳು ಹಾಗೂ ಖಾಸಗಿ ಚಾನೆಲ್‌ನ ಪ್ರಮುಖರನ್ನು ರಾಜಾರೋಷವಾಗಿ ಓಡಾಡಲು ಬಿಟ್ಟು ಅಮಾಯಕರನ್ನು ಬಂಧಿಸಲಾಗುತ್ತಿದೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು. ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರ ಜೊತೆಗಿರುವ ವ್ಯಕ್ತಿಯ ಫೋಟೋವನ್ನು ಉಲ್ಲೇಖಿಸಿದ ಅವರು, ಪ್ರಭಾವಿಗಳ ಜೊತೆ ನಂಟು ಹೊಂದಿರುವ ಪ್ರಮುಖ ವ್ಯಕ್ತಿಗಳ ಸಂಪರ್ಕ ಜಾಲದ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕು ಮತ್ತು ಪ್ರಕರಣದ ಅಸಲಿ ಸತ್ಯ ಹೊರಬರಬೇಕು ಎಂದು ಪಟ್ಟುಹಿಡಿದರು.

ಧರಣಿ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಆಯುಕ್ತರು ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿ ಮನವೊಲಿಸುವ ಪ್ರಯತ್ನ ಮಾಡಿದರು. ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ, ಪ್ರಾಮಾಣಿಕ ಹಾಗೂ ಪಾರದರ್ಶಕ ತನಿಖೆ ನಡೆಸುವುದಾಗಿ ಭರವಸೆ ನೀಡಿದರು. ಆಯುಕ್ತರ ಭರವಸೆಯ ಮೇರೆಗೆ ಧರಣಿಯನ್ನು ಅಂತ್ಯಗೊಳಿಸಿದ ಕುಮಾರಸ್ವಾಮಿ ಅವರು, ಮುಂದಿನ ಎರಡು ದಿನಗಳಲ್ಲಿ ಮೂಲ ಆರೋಪಿಗಳ ವಿರುದ್ಧ ಕ್ರಮ ಜರುಗಿಸದಿದ್ದರೆ ರಾಜ್ಯಾದ್ಯಂತ ಕಾರ್ಯಕರ್ತರೊಂದಿಗೆ ಸೇರಿ ಉಗ್ರ ಹೋರಾಟ ರೂಪಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

BREAKING : ಮಾಜಿ ಐಎಎಸ್ ಅಧಿಕಾರಿ ದಿವ್ಯಾ ಮಿತ್ತಲ್ ‘ಜನ್ನೀತಿ ಭಾರತ್’ ಪಕ್ಷ ಸ್ಥಾಪನೆ : 2027ರ ಯುಪಿ ಚುನಾವಣೆಗೆ ಸ್ಪರ್ಧೆ | Divya Mittal

Tags: H D KumaraswamyPolice Commissioner officeprotest
Previous Post

BREAKING : ಮಾಜಿ ಐಎಎಸ್ ಅಧಿಕಾರಿ ದಿವ್ಯಾ ಮಿತ್ತಲ್ ‘ಜನ್ನೀತಿ ಭಾರತ್’ ಪಕ್ಷ ಸ್ಥಾಪನೆ : 2027ರ ಯುಪಿ ಚುನಾವಣೆಗೆ ಸ್ಪರ್ಧೆ | Divya Mittal

Next Post

BREAKING : ಪಾಕಿಸ್ತಾನದಲ್ಲಿ ಭೀಕರ ದುರಂತ :  ಶಾಲೆಯ ಛಾವಣಿ ಕುಸಿದು 28 ಮಕ್ಕಳು, ಶಿಕ್ಷಕಿ ದುರ್ಮರಣ | Children dead

Related Posts

Energy Conservation Awareness: KREDL Observes ‘BRICS Sustainable Lifestyle Week–2026
Top Story

ಇಂಧನ ಸಂರಕ್ಷಣೆ ಜಾಗೃತಿ: ಕ್ರೆಡಲ್‌ನಿಂದ ‘ಬ್ರಿಕ್ಸ್ ಸುಸ್ಥಿರ ಜೀವನಶೈಲಿ ಸಪ್ತಾಹ–2026’ ಆಚರಣೆ

by Shivakumar
November 8, 2026
0

ಬೆಂಗಳೂರು: ಬ್ರಿಕ್ಸ್ ಸುಸ್ಥಿರ ಜೀವನಶೈಲಿ ಸಪ್ತಾಹ–2026 (BRICS Sustainable Lifestyle Week-2026) ಅಂಗವಾಗಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (KREDL - KREDL) ಕಚೇರಿಯಲ್ಲಿ ಆಯೋಜಿಸಲಾಗಿದ್ದ...

Read moreDetails
Centre responsible for ethanol confusion: Minister M.B. Patil demands high-level probe

ಎಥೆನಾಲ್ ಗೊಂದಲಕ್ಕೆ ಕೇಂದ್ರವೇ ಹೊಣೆ: ಉನ್ನತ ಮಟ್ಟದ ತನಿಖೆಗೆ ಸಚಿವ ಎಂ.ಬಿ. ಪಾಟೀಲ ಆಗ್ರಹ

November 8, 2026
First PUC Annual Examination: Question papers to be prepared at the state level starting from 2027!

ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ : 2027 ರಿಂದ ರಾಜ್ಯಮಟ್ಟದಲ್ಲೇ ಪ್ರಶ್ನೆಪತ್ರಿಕೆ ಸಿದ್ಧ!

November 8, 2026
Hassan DC Lata Kumari hits back at Kumaraswamy’s allegations

ಕುಮಾರಸ್ವಾಮಿ ಆರೋಪಕ್ಕೆ ಹಾಸನ ಡಿಸಿ ಲತಾಕುಮಾರಿ ತಿರುಗೇಟು : ಸುಳ್ಳು ಹಬ್ಬಿಸಿದರೆ ಕಠಿಣ ಕ್ರಮದ ಎಚ್ಚರಿಕೆ

November 8, 2026
SHOCKING: Thieves snatch gold earring from elderly woman sitting outside her home and flee; shocking video goes viral.

SHOCKING : ಮನೆಯ ಹೊರಗೆ ಕುಳಿತಿದ್ದ ವೃದ್ಧೆಯ ಚಿನ್ನದ ಓಲೆ ಕಿತ್ತು ಕಳ್ಳರು ಎಸ್ಕೇಪ್ : ಆಘಾತಕಾರಿ ವಿಡಿಯೋ ವೈರಲ್

November 8, 2026
Next Post
Children dead Horrific tragedy in Pakistan – School roof collapses, 28 children and a teacher killed

BREAKING : ಪಾಕಿಸ್ತಾನದಲ್ಲಿ ಭೀಕರ ದುರಂತ :  ಶಾಲೆಯ ಛಾವಣಿ ಕುಸಿದು 28 ಮಕ್ಕಳು, ಶಿಕ್ಷಕಿ ದುರ್ಮರಣ | Children dead

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada