2002ರ ಗುಜರಾತ್ ಗೋಧ್ರಾ ಹತ್ಯಾಕಾಂಡದ ಕುರಿತು ಸುಪ್ರೀಂ ಕೋರ್ಚ್ ಎಸ್ಐಟಿ ವರದಿಯನ್ನು ಎತ್ತಿಹಿಡಿದ ಒಂದು ದಿನದ ನಂತರ ಈ ಹತ್ಯಾಕಾಂಡದ ವಿರುದ್ಧ ಹೋರಾಟ ನಡೆಸುತ್ತಿದ್ದ ಮಾನವ ಹಕ್ಕು ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರನ್ನು ಗುಜರಾತ್ ಎಸ್ಐಟಿ ವಶಕ್ಕೆ ಪಡೆದಿದೆ. ಈ ಮೂಲಕ ಪ್ರಕರಣದಲ್ಲಿ ಅಂದಿನ ಗುಜರಾತ್ನ ಮೋದಿ ಸರ್ಕಾರದ ವಿರುದ್ಧ ಹೋರಾಡಿದವರ ಮೇಲೆ ಕ್ರಮ ಕೈಗೊಳ್ಳುವ ಪ್ರಕ್ರಿಯೆ ಆರಂಭವಾಗಿದೆ.
2002ರ ಗುಜರಾತ್ ಗೋಧ್ರಾ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸದಾ ಗುಜರಾತ್ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡುತ್ತಿದ್ದ ಮಾಜಿ ಐಪಿಎಸ್ ಅಧಿಕಾರಿ ಆರ್.ಬಿ. ಶ್ರೀಕುಮಾರ್ ವಿರುದ್ಧವೂ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಈಗಾಗಲೇ ಕಸ್ಟಡಿ ಸಾವಿನ ಅನ್ಯ ಪ್ರಕರಣದಲ್ಲಿ ಜೈಲಿನಲ್ಲಿರುವ ಸಂಜೀವ್ ಭಟ್ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ತೀಸ್ತಾ, ಶ್ರೀಕುಮಾರ್ ಹಾಗೂ ಸಂಜೀವ್ ಭಟ್ ವಿರುದ್ಧ ಶನಿವಾರ ಮುಂಜಾನೆ ಗುಜರಾತ್ನಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ದೂರಿನಲ್ಲಿ ಗಲಭೆ ಸಂತ್ರಸ್ತರೊಂದಿಗೆ ವ್ಯಾಪಕವಾಗಿ ಕೆಲಸ ಮಾಡಿದ ಸೆಟಲ್ವಾಡ್ ಅವರ ಎನ್ಜಿಒ ಮಾಡಿದ ಆರೋಪಗಳನ್ನು ಸುಪ್ರೀಂ ಕೋರ್ಟ್ ಖಾರವಾಗಿ ವಿರೋಧಿಸಿದ್ದನ್ನು ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ತೀಸ್ತಾ ಅವರನ್ನು ನಕಲಿ ಮತ್ತು ಸುಳ್ಳು ದಾಖಲೆಗಳ ಸೃಷ್ಟಿಆರೋಪದ ಅಡಿ ಮುಂಬೈನ ಅವರ ನಿವಾಸದಿಂದ ವಶಕ್ಕೆ ಪಡೆಯಲಾಗಿದೆ.
‘ಮೋದಿ ಅವರ ವ್ಯಕ್ತಿತ್ವವನ್ನು ಹಾಳು ಮಾಡಲು ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ತೀಸ್ತಾ ಸೆಟಲ್ವಾಡ್ ಅವರು ಸುಳ್ಳು ವಿಚಾರಗಳನ್ನು ಹರಡಿದ್ದಾರೆʼ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಹೇಲಿದ ಬೆನ್ನಲ್ಲೇ ತೀರ್ಸಾ ಅವರ ಬಂಧನವಾಗಿದೆ.
ಗೋಧ್ರಾ ಹತ್ಯಾಕಂಡದಲ್ಲಿ ಉನ್ನತಮಟ್ಟದ ಸಂಚು ಅಡಗಿದೆ ಎಂದು ಸುಪ್ರೀಂ ಕೋರ್ಚ್ಗೆ ಜಾಕಿಯಾ ಜಾಫ್ರಿ ಅವರು ಅರ್ಜಿ ಸಲ್ಲಿಸದ್ದರು ಇದರೊಂದಿಗೆ ಸೆಟಲ್ವಾಡ್ ಸಹ ಈ ಕುರಿತು ಅರ್ಜಿ ಸಲ್ಲಿಸಿದ್ದರು. ಎಸ್ಐಟಿ ಪ್ರಧಾನಿ ಮೋದಿಗೆ ಕ್ಲೀನ್ಚಿಟ್ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಶುಕ್ರವಾರ ತಿರಸ್ಕರಿಸಿದ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್, ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಮತ್ತು ನ್ಯಾಯಮೂರ್ತಿ ಸಿ ಟಿ ರವಿಕುಮಾರ್ ಅವರ ಪೀಠ, ನಕಲಿ ವರದಿಗಳನ್ನು ನೀಡಿ, ನ್ಯಾಯಾಲಯದ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಅರ್ಜಿದಾರರ ವಿರುದ್ಧ ಹರಿಹಾಯ್ದಿತ್ತು.
ದಾಖಲೆಗಳ ನಕಲೀಕರಣ ಮತ್ತು ಇತರ ಆರೋಪಗಳು ಅವರ ಮೇಲಿದ್ದು, “ಸುಪ್ರೀಂ ಕೋರ್ಟ್ ನಿರ್ದೇಶನಗಳ ಪ್ರಕಾರ SIT ತನಿಖೆ” ನಡೆಸಲಿರುವ ಕುರಿತು ಉನ್ನತ ಅಧಿಕಾರಿಯೊಬ್ಬರು ಇಂಡಿಯನ್ ಎಕ್ಸ್ಪ್ರೆಸ್ ಗೆ ತಿಳಿಸಿದ್ದಾರೆ.
ಗೋಧ್ರ ಹತ್ಯಾಕಾಂಡ ಕುರಿತು ಅಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಇಂದಿನ ಪ್ರಧಾನಿ ಮೋದಿ ಸೇರಿ ಇನ್ನಿತರೆ ವ್ಯತ್ತಿಗಳ ವಿರುದ್ದ ದೂರಿ ನೀಡಿ ಸಾಕ್ಷಿ ವದಗಿಸಿದ್ದ ಅರ್ಜಿದಾರರ ವಿರುದ್ಧ ಈಗ ಕೇಂದ್ರ ಸರ್ಕಾರ ಮತ್ತು ಗುಜರಾತ್ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿದೆ. ಆರೋಪ ಸಾಬೀತಾಗದ ಮಾತ್ರಕ್ಕೆ ದೂರುದಾರರನ್ನು ಶಿಕ್ಷಸುವ ಕೆಲಸದಲ್ಲಿ ತೊಡಗಿದೆ ಎಂದು ಜನಸಾಮಾನ್ಯರು ಕಿಡಿಕಾರುತ್ತಿದ್ದಾರೆ.
ಈ ಕುರಿತು ಪ್ರತಿಧ್ವನಿಯೊಂದಿಗೆ ಮಾತನಾಡಿದ ಹಿರಿಯ ವಕೀಲರಾದ ಸಿ.ಎಸ್. ದ್ವಾರಕಾನಾಥ್ ಅವರು, ದೂರು ನೀಡಿದವರನ್ನು ಶಿಕ್ಷಿಸುವ ಬೆಳವಣಿಗೆ ಶುರುವಾದರೇ ಏನ್ ಆಗುತ್ತೆ ಎಂಬ ಆತಂಕ ಇದೆ ಮತ್ತು ಈ ದೇಶದಲ್ಲಿ ಒಂದು ಕಂಪ್ಲೆಂಟ್ ಕೊಡೊಕೂ ಜನ ಹೆದರುತ್ತಾರೆ. ಒಂದು ಸಣ್ಣ ಪ್ರಕರಣವಲ್ಲ ಇದೊಂದು ಹೈಪ್ರೊಪೈಲ್ ಕೇಸ್, ತೀಸ್ತ ಸೆಟಲ್ವಾಡ್ ರಂತಹ ಹೋರಾಟಗಾರ್ತಿಗೆ ಇವರು ಈತರ ಮಾಡ್ತಾರೆ ಅಂದರೆ ಸಾಮಾನ್ಯ ಜನರ ಕಥೆ ಏನು? ತೀಸ್ತಾ ದೂರಿನಲ್ಲಿ ಏನಾದರು ಸುಳ್ಳು ಅಥಾವ ಇನ್ನೇನೆ ಇದ್ದರು ಅದನ್ನು ತನಿಖೆಗೆ ಕಳಿಸ್ಬೇಕು ಆ ತನಿಖೆಯಲ್ಲಿ ತಿಳಿದುಬಂದರೆ ನಕಲಿ ಮತ್ತು ಸುಳ್ಳು ದಾಖಲೆಗಳ ಸೃಷ್ಟಿಆರೋಪದ ಅಡಿ ಕೇಸ್ ದಾಖಲು ಮಾಡಬಹುದು ಆದರೆ ಇದೇನು ಇಲ್ಲದೆ ಅದೇಗ್ ಅರೆಸ್ಟ್ ಮಾಡ್ತಾರೆ ಎಂದು ಪ್ರಶ್ನಿಸಿದ್ದಾರೆ.
ಮುಂದುವರೆದು, ಯಾವುದೇ ಕಾರಣಕ್ಕೂ ನೇರವಾಗಿ ದೂರುದಾರರನ್ನೇ ಶಿಕ್ಷಿಸುವ ಅವಕಾಶ ಸಂವಿಧಾನದಲ್ಲಿ ಇಲ್ಲ ಆದರೆ ಪ್ರತಿ ದೂರು ನೀಡಬಹುದು ಆದರೆ ಇದನ್ನು ಕೋರ್ಟೆ ತೀರ್ಮಾನ ಮಾಡತ್ತೆ ಅಂದರೆ ಏನ್ ಹೇಳೊದು. ಈತರದ ನಡೆಯಿಂದ ಜನ ಸಾಮಾನ್ಯನಿಗೆ ಆಗುವ ಆತಂಕ ಏನು ಅನ್ನೊದನ್ನು ನೋಡಬೇಕು. ನಮಗಿರೋ ಸಣ್ಣ ನಂಬಿಕೆಯೇ ನ್ಯಾಯಾಂಗ ಅದನ್ನು ಕಳೆದುಕೊಂಡ್ಬಿಡ್ತಿವ ಅನ್ನೊ ಆತಂಕ. ಯಾಕೆಂದರೆ, ಈ ತರದ ಬೆಳವಣಿಗೆಯಿಂದ ಸಮಾನ್ಯ ಜನರಿಗೆ ನ್ಯಾಯಾಂಗದ ಮೇಲೆ ನಂಬಿಕೆ ಹೋಗಿಬಿಡತ್ತ ಅನ್ನೊ ಭಯ ಕಾಡತೊಡಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಕೋರ್ಟ್ ತೀರ್ಪು ಬರತ್ತೆ ಇದಾರ ನಂತರವೇ ತೀಸ್ತಾ ವಿರುದ್ದ ಅಮಿತ್ ಶಾ ಹೇಳಿಕೆ ಕೊಡ್ತಾರೆ ಇದಾದ ಬೆನ್ನಲ್ಲೇ ತೀಸ್ತಾ ಅರೆಸ್ಟ್ ಆಗ್ತಾರೆ ಇನ್ನುಳಿದವರ ವಿರುದ್ಧ ಕೇಸ್ ದಾಖಲಾಗುತ್ತೆ, ಇದೆಲ್ಲ ನೋಡಿದರೆ ವ್ಯವಸ್ಥಿತ ಸಂಚು ಅನ್ನಿಸೋದಿಲ್ವ ಎಂದು ಹೇಳಿದ್ದಾರೆ. ಜಾಕಿಯಾ ಜಾಫ್ರಿ ಅವರು ತಮ್ಮ ಪತಿಯನ್ನು ಕಳೆದುಕೊಂಡಿದ್ದಾರೆ ಅದಕ್ಕೆ ನ್ಯಾಯಕ್ಕಾಗಿ ಕೋರ್ಟ್ ಮೊರೆ ಹೋಗಿದ್ದಾರೆ. ತೀಸ್ತಾ ಅವರಿಗೆ ಒಂದು ಬ್ಯಾಗ್ಗ್ರೌಂಡ್ ಇದೆ ಅವರು ಭಾರತದ ಮೊದಲ ಅಟಾರ್ನಿ ಜನರಲ್ ಅವರ ಮೊಮ್ಮಗಳು. ಇಡೀ ಪ್ರಪಂಚಕ್ಕೆ ಗೊತ್ತು ತೀಸ್ತಾ ಮಾನವ ಹಕ್ಕುಗಳ ಹೋರಾಟಗಾರ್ತಿ ಎಂದು, ಈತರದ ಹೈಪ್ರೊಪೈಲ್ ಕೇಸನ್ನೇ ಈತರ ಮಾಡಿದ್ರೆ ಜನರಿಗೆ ಆತಂಕ ಆಗಲ್ವ ಎಂದು ಹೇಳಿದ್ದಾರೆ.
ಗೋಧ್ರಾ ಹತ್ಯಾಕಂಡ ಪ್ರಕರಣದ ವಿವರ:
ಗೋಧ್ರಾ ಹತ್ಯಾಕಾಂಡ ಘಟನೆಗೆ ಸಂಬಂಧಿಸಿ 2002ರಲ್ಲಿ ಈಗಿನ ಪ್ರಧಾನಿ, ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ಸರಕಾರ ಆಯೋಗವನ್ನು ರಚಿಸಿತ್ತು. ಆಯೋಗದ ಮೊದಲ ವರದಿಯನ್ನು 2009ರಲ್ಲಿ ಮಂಡನೆ ಮಾಡಲಾಗಿತ್ತು. ಮೊದಲ ವರದಿಯಲ್ಲಿ ರೈಲಿಗೆ ಬೆಂಕಿ ಹೊತ್ತಿಕೊಂಡಿದ್ದರ ಬಗ್ಗೆ ವಿವರಿಸಲಾಗಿತ್ತು. ಯೋಚಿತ ಪಿತೂರಿಯಿಂದಾಗಿ ಗೋಧ್ರಾ ರೈಲ್ವೆ ನಿಲ್ದಾಣದಲ್ಲಿ ಸಬರಮತಿ ಎಕ್ಸ್ಪ್ರೆಸ್ ರೈಲಿನ 5-6 ಬೋಗಿಗಳಿಗೆ ಬೆಂಕಿ ಇಡಲಾಗಿತ್ತು ಎಂದು ಈ ವರದಿಯಲ್ಲಿ ಹೇಳಲಾಗಿತ್ತು.
ನಂತರ ಅಂತಿಮ ವರದಿಯನ್ನು 2014ರಲ್ಲಿ ನಿವೃತ್ತ ನ್ಯಾಯಮೂರ್ತಿಗಳಾದ ಜಿ ಟಿ ನಾನಾವತಿ ಹಾಗೂ ಅಕ್ಷಯ್ ಮೆಹ್ತಾ ಅವರು ಆನಂದಿ ಬೇನ್ ನೇತೃತ್ವದ ಸರಕಾರದ ಮುಂದೆ ಮಂಡಿಸಿದ್ದರು. ಅಧಿಕೃತ ಮಾಹಿತಿಯಂತೆ ಗೋಧ್ರಾ ಹತ್ಯಾಕಾಂಡ ಪ್ರತೀಕಾರಕ್ಕೆ ನಡೆದ ಗುಜರಾತ್ ಹಿಂಸಾಚಾರದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸುಮಾರು 1000ಕ್ಕೂ ಹೆಚ್ಚು ಮಂದಿ ಈ ಗಲಭೆಯಲ್ಲಿ ಮೃತಪಟ್ಟಿದ್ದು, ಅನಧಿಕೃತವಾಗಿ ಸಾವಿನ ಸಂಖ್ಯೆ ಇನ್ನೂ ಹೆಚ್ಚಿರಬಹುದು ಎಂದು ವರದಿಯಲ್ಲಿ ಹೇಳಲಾಗಿತ್ತು.
ಹಿಂದಿನ ರಾಜ್ಯ ಸರಕಾರಕ್ಕೆ(ಆನಂದಿ ಬೇನ್) ಈ ವರದಿ ಸಲ್ಲಿಕೆಯಾದ ಐದು ವರ್ಷಗಳ ಬಳಿಕ ಈಗಿನ ಸರಕಾರದ ಗೃಹ ಸಚಿವ ಪ್ರದೀಪ್ ಸಿನ್ಹಾ ಜಡೇಜಾ ವರದಿಯ ಅಂತಿಮ ಭಾಗವನ್ನು ಡಿಸೆಂಬರ್ 11 2019ರಂದು ಮಂಡಿಸಿದ್ದು, ಮೋದಿ ಸಹಿತ ಇತರರಿಗೆ ಕ್ಲೀನ್ ಚಿಟ್ ಸಿಕ್ಕಿತ್ತು. 2021, ಜೂನ್ 24 ರಂದು ಪ್ರಧಾನಿ ಮೋದಿಗೆ ಕ್ಲೀನ್ ಚಿಟ್ ನೀಡಿರುವುದರ ವಿರುದ್ಧ ಝಾಕಿಯಾ ಜಾಫ್ರಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು.
ಈ ಕುರಿತಂತೆ ಸ್ಥಳೀಯ ನ್ಯಾಯಾಲಯ ಹಾಗೂ ಸುಪ್ರೀಂ ಆದೇಶವನ್ನು ಪ್ರಶ್ನಿಸಿ ಝಾಕಿಯಾ ಜಾಫ್ರಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಗೋಧ್ರಾ ಹತ್ಯಾಕಂಡದಲ್ಲಿ ಉನ್ನತಮಟ್ಟದ ಸಂಚು ಅಡಗಿದೆ ಎಂದು ಸುಪ್ರೀಂ ಕೋರ್ಚ್ಗೆ ಜಾಕಿಯಾ ಜಾಫ್ರಿ ಶೆರಿ ಇನ್ನಿತರೆ ಹೋರಟಗಾರರ ಅರ್ಜಿಯನ್ನು ಜೂನ್ 24ರಂದು ವಜಾಗೊಳಿಸಿ ನ್ಯಾಯಾಲಯದ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಅರ್ಜಿದಾರರ ವಿರುದ್ಧ ಹರಿಹಾಯ್ದಿತ್ತು.