ರಾಜ್ಯ ಸರ್ಕಾರದ ಐದು ಗ್ಯಾರೆಂಟಿಗಳ (Guarantee scheme) ಪೈಕಿ ಒಂದಾದ ಮಹಿಳೆಯರ ಖಾತೆಗೆ ಮಾಸಿಕವಾಗಿ 2 ಸಾವಿರ ಹಣ ಹಾಕುವ ಗೃಹ ಲಕ್ಷ್ಮಿ (Gruha lakshmi) ಯೋಜನೆಗೆ ಸಂಬಂಧಪಟ್ಟಂತೆ, ಸರ್ಕಾರದಿಂದ ಖಾತೆಗೆ ಹಣ ಬಾರದ ಕಾರಣ ಬೇಸರಗೊಂಡಿದ್ದ ಮಹಿಳೆಯರಿಗೆ ಕೊನೆಗೂ ಸರ್ಕಾರ ಗುಡ್ ನ್ಯೂಸ್ ನೀಡಲು ಮುಂದಾಗಿದೆ.

ಹೌದು ಗೃಹಲಕ್ಷ್ಮಿ ಯೋಜನೆಯ ಬಾಕಿ ಇರುವ ತಿಂಗಳ ಹಣ ಶೀಘ್ರದಲ್ಲೆ ಫಲಾನುಭವಿಗಳ ಖಾತೆಗೆ ಜಮೆ ಆಗಲಿದೆ ಎಂದು ಖುದ್ದು ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್ (Lakshmi Hebbalkar) ಹೇಳಿದ್ದಾರೆ.
ಈ ಹಿಂದೆ ಯುಗಾದಿ ಹಬ್ಬದ ವೇಳೆ ಜನವರಿ ತಿಂಗಳ ಹಣವನ್ನ ಮಹಿಳೆಯರ ಖಾತೆಗೆ ಜಮಾ ಮಾಡಲಾಗಿತ್ತು. ಆ ನಂತರ ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಹಣ ಏಪ್ರಿಲ್ ಎರಡನೇ ವಾರದಲ್ಲಿ ಜಮೆ ಆಗಲಿದೆ ಎಂದು ಈ ಹಿಂದೆ ತಿಳಿಸಲಾಗಿತ್ತು.

ಆದ್ರೆ ಇದುವರೆಗೂ ಈ ಹಣ ಮಹಿಳೆಯರ ಖಾತೆಗೆ ಜಮೆಯಾಗಿಲ್ಲ. ಹೀಗಾಗಿ ಮಹಿಳೆಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ಅತಿ ಶೀಘ್ರದಲ್ಲಿ ಮಹಿಳೆಯರ ಖಾತೆಗೆ ಬಾಕಿ ತಿಂಗಳ ಹಣ ಜಮಾ ಆಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.