• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, August 7, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕೆಪಿಟಿಸಿಎಲ್‌ನಲ್ಲಿ ದೇಶದಲ್ಲೇ ಮೊದಲ ಬಾರಿಗೆ ಜಾಗತಿಕ ‘ಝೀರೋ ಟ್ರಸ್ಟ್’ ಸೈಬರ್ ಭದ್ರತಾ ವ್ಯವಸ್ಥೆ ಅಳವಡಿಕೆ

ಪ್ರತಿಧ್ವನಿ by ಪ್ರತಿಧ್ವನಿ
July 10, 2026
in Top Story, ಕರ್ನಾಟಕ, ರಾಜಕೀಯ
0
ಕೆಪಿಟಿಸಿಎಲ್‌ನಲ್ಲಿ ದೇಶದಲ್ಲೇ ಮೊದಲ ಬಾರಿಗೆ ಜಾಗತಿಕ ‘ಝೀರೋ ಟ್ರಸ್ಟ್’ ಸೈಬರ್ ಭದ್ರತಾ ವ್ಯವಸ್ಥೆ ಅಳವಡಿಕೆ
Share on WhatsAppShare on FacebookShare on Telegram

ಬೆಂಗಳೂರು : ರಾಜ್ಯದ ವಿದ್ಯುತ್ ಪ್ರಸರಣ ಜಾಲದ ಡಿಜಿಟಲ್ ಭದ್ರತೆಯನ್ನು ಮತ್ತಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಜಾಗತಿಕ ಮಟ್ಟದಲ್ಲಿ ಮಾನ್ಯತೆ ಪಡೆದಿರುವ ‘ಝೀರೋ ಟ್ರಸ್ಟ್ ಸೈಬರ್ ಸೆಕ್ಯುರಿಟಿ ಆರ್ಕಿಟೆಕ್ಚರ್’ ಅನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿದೆ. ಇದರೊಂದಿಗೆ, ಈ ಅತ್ಯಾಧುನಿಕ ಸೈಬರ್ ಭದ್ರತಾ ವ್ಯವಸ್ಥೆಯನ್ನು ಅಳವಡಿಸಿಕೊಂಡ ದೇಶದ ಮೊದಲ ರಾಜ್ಯ ವಿದ್ಯುತ್ ಪ್ರಸರಣ ನಿಗಮ ಎಂಬ ಹೆಗ್ಗಳಿಕೆಗೆ ಕೆಪಿಟಿಸಿಎಲ್ ಪಾತ್ರವಾಗಿದೆ.

ADVERTISEMENT
DK Shivakumar City Rounds:ಜಯನಗರದಲ್ಲಿ ಫುಟ್​ಪಾತ್​ ತೆರವು ಕಾರ್ಯಾಚರಣೆ ವೀಕ್ಷಿಸಿದ ಸಿಎಂ ಡಿಕೆಶಿ #pratidhvani

ರಾಜ್ಯದ ವಿದ್ಯುತ್ ಪ್ರಸರಣ ವ್ಯವಸ್ಥೆಯನ್ನು ಸೈಬರ್ ದಾಳಿಗಳಿಂದ ರಕ್ಷಿಸುವ ನಿಟ್ಟಿನಲ್ಲಿ ಈ ಸೈಬರ್‌ ಸೆಕ್ಯೂರಿಟಿಯನ್ನು ಅಳವಡಿಸಿಕೊಂಡಿದೆ. ಕೆಪಿಟಿಸಿಎಲ್‌ನ ಡಿಜಿಟಲ್ ರೂಪಾಂತರದಲ್ಲಿ ಮಹತ್ವದ ಮೈಲಿಗಲ್ಲಾಗಿದ್ದು, ಕಾರ್ಯಾಚರಣೆ, ಎಂಜಿನಿಯರಿಂಗ್, ಹಣಕಾಸು ಹಾಗೂ ಆಡಳಿತ ವ್ಯವಸ್ಥೆಗಳನ್ನು ಅತ್ಯಾಧುನಿಕ ಭದ್ರತಾ ಚೌಕಟ್ಟಿನಡಿ ತರಲಿದೆ.

ಪ್ರಸ್ತುತ ಕೆಪಿಟಿಸಿಎಲ್‌ನ ಕೇಂದ್ರ ಕಚೇರಿ, ಉಪಕೇಂದ್ರಗಳು, ಕಾರ್ಯಾಚರಣಾ ಕೇಂದ್ರಗಳು, ಕ್ಷೇತ್ರ ಮಟ್ಟದ ಕಚೇರಿಗಳು ಹಾಗೂ ದೂರದ ಕಾರ್ಯ ವ್ಯವಸ್ಥೆಯಲ್ಲಿ 3,000ಕ್ಕೂ ಹೆಚ್ಚು ಬಳಕೆದಾರರು ವಿವಿಧ ಡಿಜಿಟಲ್ ಸೇವೆಗಳನ್ನು ಬಳಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವೇಗವಾಗಿ ವಿಸ್ತರಿಸುತ್ತಿರುವ ಡಿಜಿಟಲ್ ಮೂಲಸೌಕರ್ಯವನ್ನು ಸುರಕ್ಷಿತಗೊಳಿಸಲು ಜಾಗತಿಕ ಮಟ್ಟದ ಹೊಸ ತಲೆಮಾರಿನ ಸೈಬರ್ ಭದ್ರತಾ ವ್ಯವಸ್ಥೆಯ ಅಗತ್ಯತೆ ಕಂಡುಬಂದಿತ್ತು.

BK Hariprasad On BS Yediyurappa: ಸೋನಿಯಾ ಗಾಂಧಿ ಮೇಲೆ ಕೇಸ್ ಇಲ್ವಾ ಅಂತೀರಾ..?#Pratidhvani

ಸಾಂಪ್ರದಾಯಿಕ ನೆಟ್‌ವರ್ಕ್ ಭದ್ರತಾ ವ್ಯವಸ್ಥೆಗಳಿಗಿಂತ ಭಿನ್ನವಾಗಿ, ‘Never Trust, Always Verify’ ಎಂಬ ತತ್ವದ ಮೇಲೆ ಕಾರ್ಯನಿರ್ವಹಿಸುವ ಝೀರೋ ಟ್ರಸ್ಟ್ ಮಾದರಿಯಲ್ಲಿ, ಪ್ರತಿಯೊಬ್ಬ ಬಳಕೆದಾರ, ಸಾಧನ ಹಾಗೂ ಆಕ್ಸೆಸ್‌ ವಿನಂತಿಯನ್ನು ನಿರಂತರವಾಗಿ ಗುರುತು, ಸಾಧನದ ಸ್ಥಿತಿ, ಬಳಕೆದಾರರಿಗೆ ನೀಡಲಾಗಿರುವ ಅನುಮತಿ ಮತ್ತು ಅದರಿಂದಾಗುವ ಅಪಾಯದ ಮಟ್ಟವನ್ನು ಪರಿಶೀಲಿಸಿದ ಬಳಿಕವೇ ಯಾವುದೇ ಅಪ್ಲಿಕೇಶನ್ ಅಥವಾ ವ್ಯವಸ್ಥೆಗೆ ಅಕ್ಸೆಸ್‌ ನೀಡಲಾಗುತ್ತದೆ.

ಈ ಯೋಜನೆಯಡಿ ಕೆಪಿಟಿಸಿಎಲ್ ಸುಮಾರು 3,000 ಎಂಟರ್‌ಪ್ರೈಸ್ ಬಳಕೆದಾರರಿಗಾಗಿ Zscaler ಸಂಸ್ಥೆಯ ಕ್ಲೌಡ್ ಆಧಾರಿತ ‘Zero Trust Exchange’ ವೇದಿಕೆಯನ್ನು ಅಳವಡಿಸಿಕೊಂಡಿದೆ. ಈ ತಂತ್ರಜ್ಞಾನದ ಮೂಲಕ ಪಬ್ಲಿಕ್‌ ಇಂಟರ್‌ನೆಟ್‌ಗೆ ಪ್ರಮುಖ ಮಾಹಿತಿಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಡದೆ, ಅಧಿಕೃತ ಬಳಕೆದಾರರಿಗೆ ಮಾತ್ರ ಸುರಕ್ಷಿತ ಹಾಗೂ ಸುಲಭ ಪ್ರವೇಶವನ್ನು ಒದಗಿಸಲಾಗುತ್ತದೆ. ಇದರಿಂದ ಸಾಂಪ್ರದಾಯಿಕ VPN ಆಧಾರಿತ ವ್ಯವಸ್ಥೆಗಳಲ್ಲಿ ಕಂಡುಬರುವ ಭದ್ರತಾ ಲೋಪಗಳನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಾಗಲಿದೆ.

DK Shivakumar City Rounds: HALಏರ್ಪೋಟ್​​ ಎದುರು ಫುಟ್​ಪಾತ್ ಒತ್ತುವರಿ ತೆರವು ಕಾರ್ಯ ವೀಕ್ಷಿಸ್ತಿರೋ CM

ಈ ಹೊಸ ಸೈಬರ್ ಭದ್ರತಾ ವ್ಯವಸ್ಥೆಯು ಫಿಶಿಂಗ್, ರ್ಯಾನ್ಸಮ್‌ವೇರ್ (Ransomware), ಮಾಲ್‌ವೇರ್ (Malware), ಪಾಸ್‌ವರ್ಡ್ ಕಳವು, ಅನಧಿಕೃತ ಅಕ್ಸೆಸ್‌ ಹಾಗೂ ದತ್ತಾಂಶ ಸೋರಿಕೆಯಂತಹ ಸೈಬರ್ ಅಪಾಯಗಳಿಂದ ಕೆಪಿಟಿಸಿಎಲ್‌ನ ಪ್ರಮುಖ ಮೂಲಸೌಕರ್ಯಗಳಿಗೆ ರಕ್ಷಣೆ ಒದಗಿಸುತ್ತದೆ. ನಿರಂತರ ದೃಢೀಕರಣ, ಕನಿಷ್ಠ ಪ್ರವೇಶ ಹಕ್ಕು (Least Privilege Access) ಹಾಗೂ ಕೇಂದ್ರೀಕೃತ ಭದ್ರತಾ ಮೇಲ್ವಿಚಾರಣೆಯ ಮೂಲಕ ಸಂಭಾವ್ಯ ಸೈಬರ್ ಬೆದರಿಕೆಗಳನ್ನು ತ್ವರಿತವಾಗಿ ಪತ್ತೆಹಚ್ಚಿ ಪರಿಣಾಮಕಾರಿಯಾಗಿ ನಿರ್ವಹಿಸಲು ಈ ವ್ಯವಸ್ಥೆ ನೆರವಾಗಲಿದೆ.

ರಾಜ್ಯದ ವಿದ್ಯುತ್ ಬೇಡಿಕೆಯ ನಿರಂತರ ಏರಿಕೆ ಹಾಗೂ ಗ್ರಿಡ್ ಆಧುನೀಕರಣದ ಕ್ರಮಗಳಿಗೆ ಪೂರಕವಾಗಿ, ಸುರಕ್ಷಿತ ಹಾಗೂ ಭವಿಷ್ಯಕ್ಕೆ ಸಜ್ಜಾದ ಡಿಜಿಟಲ್ ವಿದ್ಯುತ್ ಪ್ರಸರಣ ಜಾಲವನ್ನು ನಿರ್ಮಿಸುವ ಕೆಪಿಟಿಸಿಎಲ್‌ನ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

krishna Byre Gowda : ನಗರದ ಬಗ್ಗೆ ಪಿನ್‌ ಟು ಪಿನ್‌ ಮಾಹಿತಿ ಕೊಟ್ಟ ಕೃಷ್ಣ ಭೈರೇಗೌಡ..! #pratidhvani

ಈ ಬಗ್ಗೆ ಇಂಧನ ಸಚಿವ ಕೆ.ಜೆ ಜಾರ್ಜ್ ಪ್ರತಿಕ್ರಿಯಿಸಿದ್ದು, “ಕರ್ನಾಟಕದಲ್ಲಿ ವಿದ್ಯುತ್ ಮೂಲಸೌಕರ್ಯವನ್ನು ಆಧುನೀಕರಿಸುತ್ತಿರುವ ಈ ಸಂದರ್ಭದಲ್ಲಿ, ಸೈಬರ್ ಭದ್ರತೆಯೂ ಭೌತಿಕ ವಿದ್ಯುತ್ ಜಾಲದಷ್ಟೇ ಮಹತ್ವದ್ದಾಗಿದೆ. ಜಾಗತಿಕ ಮಟ್ಟದಲ್ಲಿ ಮಾನ್ಯತೆ ಪಡೆದಿರುವ ಝೀರೋ ಟ್ರಸ್ಟ್ ಸೈಬರ್ ಭದ್ರತಾ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಮೂಲಕ ಕೆಪಿಟಿಸಿಎಲ್ ದೇಶದಲ್ಲೇ ಮಾದರಿಯಾಗಿದೆ. ನಾಗರಿಕರು, ಕೈಗಾರಿಕೆಗಳು ಹಾಗೂ ಸಾರ್ವಜನಿಕ ಸಂಸ್ಥೆಗಳಿಗೆ ವಿಶ್ವಾಸಾರ್ಹ ವಿದ್ಯುತ್ ಪೂರೈಕೆ ನೀಡಲು ಸುರಕ್ಷಿತ ಡಿಜಿಟಲ್ ಪರಿಸರ ಅತ್ಯಗತ್ಯ. ಈ ಉಪಕ್ರಮವು ತಂತ್ರಜ್ಞಾನ ಆಧಾರಿತ ಇಂಧನ ಕ್ಷೇತ್ರದಲ್ಲಿ ಕರ್ನಾಟಕವನ್ನು ಮತ್ತಷ್ಟು ಮುಂಚೂಣಿಗೆ ಕೊಂಡೊಯ್ಯಲಿದೆ.” ಎಂದಿದ್ದಾರೆ.

D. K. Shivakumar : ವೇದಿಕೆ ಮೇಲೆ ಡಿಕೆಶಿ ಬರ್ತಿದ್ದಂತೆ ಸಿದ್ದರಾಮಯ್ಯ ಅಂತ ಕೂಗಿದ ಅಭಿಮಾನಿಗಳು.. #pratidhvani

ಇನ್ನು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರು ಡಾ. ವಿ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, “ಡಿಜಿಟಲ್ ವ್ಯವಸ್ಥೆಯ ಸಮಪರ್ಕ ಅಲವಡಿಕೆಗೆ ಡಿಜಿಟಲ್ ವಿಶ್ವಾಸ ಬಹಳ ಅತ್ಯಗತ್ಯ. ಝೀರೋ ಟ್ರಸ್ಟ್ ಸೈಬರ್ ಭದ್ರತಾ ವ್ಯವಸ್ಥೆಯ ಅಳವಡಿಕೆ ಮೂಲಕ ಕೆಪಿಟಿಸಿಎಲ್ ತನ್ನ ಸೈಬರ್ ಭದ್ರತಾ ಕಾರ್ಯತಂತ್ರದಲ್ಲಿ ಅಮೂಲಾಗ್ರ ಬದಲಾವಣೆಯನ್ನು ತಂದಿದೆ. ನೆಟ್‌ವರ್ಕ್‌ನೊಳಗಿನ ಯಾರನ್ನೂ ಸುಲಭವಾಗಿ ನಂಬುವ ಬದಲು, ಪ್ರತಿಯೊಬ್ಬ ಬಳಕೆದಾರ, ಪ್ರತಿಯೊಂದು ಸಾಧನ ಹಾಗೂ ಪ್ರತಿಯೊಂದು ವ್ಯವಹಾರವನ್ನು ನಿರಂತರವಾಗಿ ಪರಿಶೀಲಿಸಿದ ಬಳಿಕವೇ ಆಕ್ಸೆಸ್‌ ನೀಡಲಾಗುತ್ತದೆ. ಈ ವ್ಯವಸ್ಥೆಯು ನಮ್ಮ ಮಹತ್ವದ ವಿದ್ಯುತ್ ಮೂಲಸೌಕರ್ಯಗಳಿಗೆ ಡಿಜಿಟಲ್‌ ರಕ್ಷಣೆ ಒದಗಿಸುವುದರ ಜೊತೆಗೆ, ಇಂಟಲಿಜೆಂಟ್‌, ಸಂಪರ್ಕಿತ ಹಾಗೂ ಭವಿಷ್ಯಕ್ಕೆ ಸಜ್ಜಾದ ವಿದ್ಯುತ್ ಗ್ರಿಡ್ ನಿರ್ಮಾಣಕ್ಕೆ ಭದ್ರ ಅಡಿಪಾಯವಾಗಲಿದೆ.” ಎಂದು ವಿವರಿಸಿದರು.

Tags: BJPcongressJDSKarnatakaKarnataka PoliticsKPTCLPoliticsPower Department
Previous Post

ರಾಮ ಮಂದಿರದ ಕಠಿಣ ನಿಯಮ: ದೇಣಿಗೆ ಎಣಿಕೆ ಸಿಬ್ಬಂದಿ ಸಾಮೂಹಿಕ ರಾಜೀನಾಮೆ!

Next Post

ಆನ್‌ಲೈನ್‌ನಿಂದ ಗ್ರೌಂಡ್‌ ಲೆವೆಲ್‌ : CJP ಹೋರಾಟ ದೇಶದ ಯುವ ಸಮೂಹವನ್ನು ರೊಚ್ಚಿಗೆಬ್ಬಿಸಿದ್ದು ಹೇಗೆ..?

Related Posts

‘ಹೊರಟ್ಟಿಗೆ ಒತ್ತಡ ಹೇರಿ ರಾಜೀನಾಮೆ ಪಡೆದಿದ್ದಾರೆ’: ಕಾಂಗ್ರೆಸ್ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ
Top Story

‘ಹೊರಟ್ಟಿಗೆ ಒತ್ತಡ ಹೇರಿ ರಾಜೀನಾಮೆ ಪಡೆದಿದ್ದಾರೆ’: ಕಾಂಗ್ರೆಸ್ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ

by ಪ್ರತಿಧ್ವನಿ
August 7, 2026
0

ಬೆಂಗಳೂರು, ಆಗಸ್ಟ್ 7: ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ರಾಜೀನಾಮೆ ವಿಚಾರಕ್ಕೆ ಹೊಸ ತಿರುವು ಸಿಕ್ಕಿದ್ದು, ಅವರನ್ನು ಒತ್ತಡ ಹೇರಿ ಹಾಗೂ ದಬಾಯಿಸಿ ರಾಜೀನಾಮೆ ಕೊಡಿಸಲಾಗಿದೆ...

Read moreDetails
ಕರ್ನಾಟಕ ಕೈಮಗ್ಗಕ್ಕೆ ಹೊಸ ಚೈತನ್ಯ: ನೇಕಾರರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌, ರಾಜ್ಯವ್ಯಾಪಿ ಅಭಿಯಾನಕ್ಕೆ ಚಾಲನೆ

ಕರ್ನಾಟಕ ಕೈಮಗ್ಗಕ್ಕೆ ಹೊಸ ಚೈತನ್ಯ: ನೇಕಾರರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌, ರಾಜ್ಯವ್ಯಾಪಿ ಅಭಿಯಾನಕ್ಕೆ ಚಾಲನೆ

August 7, 2026
ಬಿಜೆಪಿಯಲ್ಲಿನ ನನ್ನ ಮೆಚ್ಚಿನ ನಾಯಕ…’ ಎಂದ ರಾಹುಲ್ ಗಾಂಧಿ; ಯಾರ ಹೆಸರು ಗೊತ್ತೇ?

ಬಿಜೆಪಿಯಲ್ಲಿನ ನನ್ನ ಮೆಚ್ಚಿನ ನಾಯಕ…’ ಎಂದ ರಾಹುಲ್ ಗಾಂಧಿ; ಯಾರ ಹೆಸರು ಗೊತ್ತೇ?

August 7, 2026
NEET-UG 2026 ಪ್ರಶ್ನೆಪತ್ರಿಕೆ ಸೋರಿಕೆ: ತಿಂಗಳುಗಳ ಕಾಲ ನಡೆದಿತ್ತು ಸಂಚು! ಸಿಬಿಐ ಆರೋಪಪಟ್ಟಿಯಲ್ಲಿ ಸ್ಫೋಟಕ ಮಾಹಿತಿ

NEET-UG 2026 ಪ್ರಶ್ನೆಪತ್ರಿಕೆ ಸೋರಿಕೆ: ತಿಂಗಳುಗಳ ಕಾಲ ನಡೆದಿತ್ತು ಸಂಚು! ಸಿಬಿಐ ಆರೋಪಪಟ್ಟಿಯಲ್ಲಿ ಸ್ಫೋಟಕ ಮಾಹಿತಿ

August 7, 2026
ವಿಜಯ್–ಸಂಗೀತಾ ದಾಂಪತ್ಯಕ್ಕೆ ಹೊಸ ತಿರುವು: ವಿಚ್ಛೇದನ ಅರ್ಜಿ ಹಿಂಪಡೆದ ಪತ್ನಿ

ವಿಜಯ್–ಸಂಗೀತಾ ದಾಂಪತ್ಯಕ್ಕೆ ಹೊಸ ತಿರುವು: ವಿಚ್ಛೇದನ ಅರ್ಜಿ ಹಿಂಪಡೆದ ಪತ್ನಿ

August 7, 2026
Next Post
CJP on Ground Youths Movement

ಆನ್‌ಲೈನ್‌ನಿಂದ ಗ್ರೌಂಡ್‌ ಲೆವೆಲ್‌ : CJP ಹೋರಾಟ ದೇಶದ ಯುವ ಸಮೂಹವನ್ನು ರೊಚ್ಚಿಗೆಬ್ಬಿಸಿದ್ದು ಹೇಗೆ..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada