ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ಖುಷಿ ತಡೆಯಲು ಆಗದೇ ಯುವತಿಯೊಬ್ಬಳು ಕಣ್ಣೀರಿಟ್ಟ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕನ್ಯಾಕುಮಾರಿಯಿಂದ ಜಮ್ಮುಕಾಶ್ಮೀರದವರೆಗೂ ಭಾರತ್ ಜೋಡೊ ಪಾದಯಾತ್ರೆ ಹಮ್ಮಿಕೊಂಡಿರುವ ಕಾಂಗ್ರೆಸ್ ಕೇರಳದಲ್ಲಿ ಭರ್ಜರಿ ಪ್ರತಿಕ್ರಿಯೆ ಪಡೆದಿದೆ.
ಪಾದಯಾತ್ರೆ ವೇಳೆ ರಾಹುಲ್ ಗಾಂಧಿ ಅವರನ್ನು ಭೇಟಿ ನೀಡಿ ಅವರ ಜೊತೆ ಹೆಜ್ಜೆ ಹಾಕಲು ಅವಕಾಶ ಪಡೆದ ಯುವತಿಯೊಬ್ಬಳು ರಾಹುಲ್ ಭೇಟಿ ಮಾಡಿದ ಖುಷಿ ತಡೆಯಲು ಆಗದೇ ಕಣ್ಣೀರಿಟ್ಟಿದ್ದಾಳೆ.
ನಡೆದು ಹೋಗುತ್ತಿದ್ದ ರಾಹುಲ್ ಗಾಂಧಿ ಅವರನ್ನು ನೋಡಲು ಯುವತಿ ಪಾದಯಾತ್ರೆಯಲ್ಲಿ ಧುಮುಕಿದ್ದಾಳೆ. ಆಕೆ ಹಿಂದೆ ಇರುವುದನ್ನು ಗಮನಿಸಿ ರಾಹುಲ್ ಗಾಂಧಿ ಹತ್ತಿರ ಕರೆದು ಕೈ ಹಿಡಿದುಕೊಂಡಿದ್ದಾರೆ. ಇದರಿಂದ ಸಂಭ್ರಮ ತಡೆಯದೇ ಯುವತಿ ಬಿಕ್ಕಿ ಬಿಕ್ಕಿ ಅಳಲು ಶುರು ಮಾಡಿದ್ದಾಳೆ. ಕೂಡಲೇ ಸ್ನೇಹಿತೆ ಆಕೆಯ ನೆರವಿಗೆ ಬಂದಿದ್ದಾಳೆ.
ರಾಹುಲ್ ಗಾಂಧಿ ಯುವತಿಯ ಪರಿಸ್ಥಿತಿ ಗಮನಿಸಿ ಸಮಾಧಾನಪಡಿಸಿದರು. ಅಲ್ಲದೇ ಆಕೆಗೆ ಚೀಟಿಯೊಂದನ್ನು ನೀಡಿ ಕಳುಹಿಸಿದ್ದಾರೆ. ಈ ಘಟನೆ ನೋಡಿದ ಅಕ್ಕಪಕ್ಕದಲ್ಲಿದ್ದ ಮುಖಂಡರ ಮುಖದಲ್ಲಿ ನಗು ಕಂಡು ಬಂದಿತು.