ಕಾಂಗ್ರೆಸ್ ತೊರೆದ ಮಾಜಿ ಕೇಂದ್ರ ಸಚಿವ ಗುಲಾಮ್ ನಬಿ ಆಜಾದ್ ತಮ್ಮ ಹೊಸ ಪಕ್ಷ ಡೆಮಾಕ್ರೆಟಿಕ್ ಆಜಾದ್ ಪಾರ್ಟಿ ಎಂದು ಹೆಸರು ಘೋಷಿಸಿದ್ದಾರೆ.
ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ ಸುಮಾರು ಒಂದು ತಿಂಗಳ ನಂತರ ಗುಲಾಮ್ ನಬಿ ಆಜಾದಿ ಸೋಮವಾರ ತಮ್ಮ ಹೊಸ ಪಕ್ಷದ ಹೆಸರು ಘೋಷಿಸಿದ್ದಾರೆ.
ನಾನು ಸ್ಥಳೀಯ ಹಾಗೂ ರಾಷ್ಟ್ರೀಯ ಚಿಂತನೆ ಒಳಗೊಂಡ ಹೊಸ ಪಕ್ಷದ ಹೆಸರು ಘೋಷಿಸಲು ಸಂತೋಷಗೊಂಡಿದ್ದೇನೆ. ಇದು ಸ್ವತಂತ್ರ್ಯ ಹಾಗೂ ಚಿಂತನೆ ಒಳಗೊಂಡ ಪಕ್ಷವಾಗಿದ ಎಂದು ಅವರು ಹೇಳಿದರು.
ಸದ್ಯಕ್ಕೆ ನಮಗೆ ನಮ್ಮ ಪಕ್ಷದ ಹೆಸರು ನೋಂದಾಯಿಸುವುದು ಮೊದಲ ಗುರಿ. ಚುನಾವಣೆ ಯಾವುದೇ ಸಂದರ್ಭದಲ್ಲಿ ಎದುರಾಗಬಹುದು. ಆದ್ದರಿಂದ ನಾವು ರಾಜಕೀಯ ಚಟುವಟಿಕೆಗಳನ್ನು ಆರಂಭಿಸಲಿದ್ದೇವೆ ಎಂದು ಗುಲಾಮ್ ನಬಿ ಆಜಾದ್ ತಿಳಿಸಿದ್ದಾರೆ.