ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಮಕ್ಕಳಂತೆ ಆಡುತ್ತಾರೆ ಎಂದು ಕಾಂಗ್ರೆಸ್ ಪಕ್ಷಕ್ಕೆ ವಿದಾಯ ಹೇಳಿದ ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ರಾಜೀನಾಮೆ ಪತ್ರದಲ್ಲಿ ಸರಣಿ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ವಿದಾಯ ಹೇಳಿದ ನಂತರ ರಾಹುಲ್ ಗಾಂಧಿ ವಿರುದ್ಧ ಸರಣಿ ಆರೋಪಗಳ ಸುರಿಮಳೆ ಸುರಿಸಿರುವ ಗುಲಾಮ್ ನಬಿ ಆಜಾದ್, ೨೦೧೩ ಜನವರಿಯಲ್ಲಿ ರಾಹುಲ್ ಗಾಂಧಿ ಚುಕ್ಕಾಣಿ ಹಿಡಿದ ನಂತರ ಕಾಂಗ್ರೆಸ್ ಪಕ್ಷ ಅಧೋಗತಿ ತಲುಪಿದೆ ಎಂದು ಹೇಳಿದರು.

ಸೋನಿಯಾ ಗಾಂಧಿಗೆ ಪತ್ರದಲ್ಲಿ ನೀವು ರಾಹುಲ್ ಗಾಂಧಿ ಅವರನ್ನು ಪಕ್ಷದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದ ನಂತರ ಎಲ್ಲಾ ಹಂತಗಳಲ್ಲೂ ಪಕ್ಷವನ್ನು ಧ್ವಂಸಗೊಳಿಸಿದ್ದಾರೆ. ಎಲ್ಲಾ ಹಿರಿಯ ನಾಯಕರನ್ನು ಮೂಲೆಗುಂಪು ಮಾಡಲಾಗಿದೆ. ಹಿರಿಯರು ಹಾಗೂ ಅನುಭವಿಗಳನ್ನು ಮೂಲೆಗುಂಪು ಮಾಡಿ ಅನನುಭವಿ ಹಾಗೂ ಯುವಕರಿಗೆ ಏಕಾಏಕಿ ಮಣೆ ಹಾಕಲಾಯಿತು. ಇದರಿಂದ ಪಕ್ಷ ನಡೆದುಕೊಂಡು ಬಂದ ಹಾದಿ ಹಾಳು ಮಾಡಿದರು ಎಂದು ಅವರು ಆರೋಪದಲ್ಲಿ ವಿವರಿಸಿದ್ದಾರೆ.