ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ ಇದೀಗ ಸಾಫ್ಟ್ ವೇರ್ ಉದ್ಯಮದ ದೈತ್ಯ ಬಿಲ್ ಗೇಟ್ಸ್ ಅವರನ್ನು ಹಿಂದಿಕ್ಕಿ ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಬಿಲ್ ಗೇಟ್ಸ್ ಆದಾಯ ಅದಾನಿಗಿಂತ ಹೆಚ್ಚಾಗಿದ್ದರೂ ಬಿಲ್ ಗೇಟ್ಸ್ ತಮ್ಮ 115.5 ಶತಕೋಟಿ ಡಾಲರ್ ಆದಾಯದಲ್ಲಿ 20 ಶತಕೋಟಿ ಡಾಲರ್ ಆದಾಯ ಲಾಭರಹಿತ ಮೂಲದಿಂದ ಬಂದಿದೆ ಎಂದು ಘೋಷಿಸಿಕೊಂಡಿದ್ದರು.
ಬಿಲ್ ಗೇಟ್ಸ್ ತಮ್ಮ ಆದಾಯ ವಿವರ ನೀಡುತ್ತಿದ್ದಂತೆ ಶ್ರೀಮಂತರ ಪಟ್ಟಿಯಲ್ಲಿ ಅವರ ಸ್ಥಾನ ಕುಸಿದಿದ್ದು, 105 ಶತಕೋಟಿ ಡಾಲರ್ ಆದಾಯ ಹೊಂದಿರುವ ಅದಾನಿ 4ನೇ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ.
ಇದೀಗ ಅದಾನಿಗಿಂತ ಮೇಲಿನ ಸ್ಥಾನದಲ್ಲಿ ಅಮೆಜಾನ್ ಸಂಸ್ಥೆಯ ಜೆಫ್ ಬೆಜೊಸ್, ಬೆರ್ನಾಡ್ ಅರ್ನಾಲ್ಟ್ ಅಂಡ್ ಫ್ಯಾಮಿಲಿಯ ಲೂಯಿಸ್ ವಿಯೊಟನ್, ಸ್ಪೆಸ್ ಎಕ್ಸ್ ನ ಎಲಾನ್ ಮಸ್ಕ್ ಇದ್ದಾರೆ. ಎಲಾನ್ ಮಸ್ಕ್ ಆದಾಯ 235.8 ಶತಕೋಟಿ ಡಾಲರ್ ಇದ್ದು, ಅಗ್ರಸ್ಥಾನದಲ್ಲಿದ್ದಾರೆ.