1981ರವರೆಗೆ ರಾಕಿ ಆಗಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ಬಾಲಿವುಡ್ ನಟ ಸಂಜಯ್ ದತ್ 41 ವರ್ಷ ಪೂರೈಸಿದ್ದನ್ನು ನೆನಪಿಸಿಕೊಂಡಿದ್ದಾರೆ. ವಿಶೇಷ ಅಂದರೆ ರಾಕಿಯಿಂದ ಅಧೀರ ಪಾತ್ರದವರೆಗೆ ನೆನಪು ಮಾಡಿಕೊಂಡಿದ್ದಾರೆ.
ಮೇ 8, 1981ರಲ್ಲಿ ರಾಕಿ ಆಗಿ ಬಾಲಿವುಡ್ ಗೆ ಹೀರೊ ಆಗಿ ಪಾದರ್ಪಣೆ ಮಾಡಿದರು. 4 ದಶಕಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ ಸಂಜಯ್ ದತ್ ಅಧೀರ ಆಗಿದ್ದಾರೆ. ರಾಕಿ ಆಗಿ ಸಂಜಯ್ ದತ್ ನಟಿಸಿದ ಇತ್ತೀಚಿನ ಸೂಪರ್ ಡೂಪರ್ ಹಿಟ್ ಕೆಜಿಎಫ್-2 ಮೂಲಕ ಕನ್ನಡ ಚಿತ್ರರಂಗಕ್ಕೆ ಆಗಮಿಸಿದರು. ಇಲ್ಲಿ ಅಧೀರ ಪಾತ್ರ ನಿಭಾಯಿಸಿದರೆ ಯಶ್ ರಾಕಿ ಭಾಯ್ ಆಗಿ ನಟಿಸಿದ್ದು ಕಾಕತಾಳೀಯ.
4 ದಶಕ+ 1 ವರ್ಷ ಚಿತ್ರರಂಗದಲ್ಲಿ ಕಳೆದಿದ್ದೇನೆ. ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ಮುಂದಿನ ದಿನಗಳಲ್ಲಿ ನನ್ನ ಅಭಿಮಾನಿ ಮತ್ತು ಸ್ನೇಹಿತರು ಎಲ್ಲರನ್ನೂ ರಂಜಿಸುವ ಕೆಲಸ ಮಾಡುತ್ತೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.