ಸೋಮವಾರ ಈದ್ ಮಿಲಾದ್ ಪ್ರಯುಕ್ತ ಕೋಲಾರದಲ್ಲಿ ಮುಸ್ಲಿಂ (Muslim) ಸಮುದಾಯದಿಂದ ಬೃಹತ್ ಮೆರವಣಿಗೆ ರ್ಯಾಲಿ ಆಯೋಜಿಸಲಾಗಿತ್ತು. ಕೋಲಾರದ (Kolar) ಎಂಜಿ ರಸ್ತೆಯಿಂದ (M groad) ಆರಂಭವಾದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚಾರ ಮಾಡಿತು.
ಈ ವೇಳೆ ಬೃಹತ್ ಬಾವುಟಗಳನ್ನು ಹಿಡಿದು ರಸ್ತೆಯಲ್ಲಿ ಸಂಚಾರ ಮಾಡಿ ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದ್ರು. ಆದ್ರೆ ಇದೇ ಸಂದರ್ಭದಲ್ಲಿ ಫ್ರೀ ಪ್ಯಾಲೆಸ್ತೀನ್ (Free palastine) ಬಾವುಟವನ್ನು ಹಾರಿಸಿದ್ರು, ಪ್ಯಾಲೆಸ್ತೀನ್ ಬಾವುಟ ಗಮನಿಸಿದ ಕೋಲಾರ ನಗರ ಪೊಲೀಸರ ತಕ್ಷಣವೇ ಅದನ್ನು ತೆರವುಗೊಳಿಸಿದ್ದರು.
ಕೋಲಾರ ನಗರ ಠಾಣೆ ಪೋಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಬಾವುಟ ಹಾರಾಟ ಮಾಡದಂತೆ ತಿಳಿ ಹೇಳಿದ್ರು, ಬಳಿಕ ಫ್ರೀ ಪ್ಯಾಲೆಸ್ತೀನ್ ಬಾವುಟ ಹಾರಿಸಿದ ಯುವಕರ ಗುಂಪಿಗೆ ಪೊಲೀಸರು ದೇಶ ಪ್ರೇಮದ ಪಾಠ ಮಾಡಿದ್ರು. ಅಂಜುಮಾನ್ ಸಂಸ್ಥೆಯಿಂದ ಕ್ಲಾಕ್ ಟವರ್ ಬಳಿಯ ಈದ್ದಾ ಮೈದಾನ ವರೆಗೆ ಮೆರವಣಿಗೆ ನಡೆದಿದ್ದು ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗಿಯಾಗಿದ್ದಾರೆ.