ಬಿಜೆಪಿ ಟಿಕೆಟ್ ಕೊಡದ ಸಿಟ್ಟಿಗೆ ಸಿದ್ಧಾಂತಗಳನ್ನು ಮರೆತು ಕಾಂಗ್ರೆಸ್ ಸೇರಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೋಲು ಕಂಡಿದ್ದಾರೆ . ಹುಬ್ಬಳ್ಳಿ – ಧಾರವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಜಗದೀಶ್ ಶೆಟ್ಟರ್ ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನ ಕಾಯಿ ವಿರುದ್ಧ ಸೋತಿದ್ದಾರೆ .

ಇತ್ತ ಹೊನ್ನಾಳಿ ಕ್ಷೇತ್ರದಲ್ಲಿ ಶಾಸಕ ಎಂಪಿ ರೇಣುಕಾಚಾರ್ಯ ಕಾಂಗ್ರೆಸ್ ಅಭ್ಯರ್ಥಿ ಶಾಂತನಗೌಡ ವಿರುದ್ಧ ಮಂಡಿಯೂರಿದ್ದಾರೆ. ಇಬ್ಬರೂ ಈ ಕ್ಷೇತ್ರದ ಸಾಂಪ್ರದಾಯಿಕ ವೈರಿಗಳು ಎನಿಸಿದ್ದರು. ಈ ಬಾರಿ ಹೊನ್ನಾಳಿ ಮತದಾರ ಶಾಂತನಗೌಡ ಕಡೆ ಒಲವು ತೋರಿದ್ದು ರೇಣುಕಾಚಾರ್ಯ ಸೋಲಿನ ರುಚಿ ನೋಡಿದ್ದಾರೆ.